Friday, March 27, 2026
Homeಜಿಲ್ಲಾಸುದ್ದಿಮೂಡಿಗೆರೆ: ಗ್ರಾಮ ಠಾಣಾ ಜಾಗ ಒತ್ತುವರಿ ತೆರವುಗೊಳಿಸಲು DSS ಸಂಘಟನೆ ಒತ್ತಾಯ

ಮೂಡಿಗೆರೆ: ಗ್ರಾಮ ಠಾಣಾ ಜಾಗ ಒತ್ತುವರಿ ತೆರವುಗೊಳಿಸಲು DSS ಸಂಘಟನೆ ಒತ್ತಾಯ

ಮೂಡಿಗೆರೆ: ತಾಲೂಕಿನ ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರಟ್ಟಿ ಹರಿಜನಕಟ್ಟೆ ಗ್ರಾಮದಲ್ಲಿ ಗ್ರಾಮ ಠಾಣಾ ಜಾಗವನ್ನು ಒತ್ತಾವರಿ ಮಾಡಿದ್ದು ತೆರವುಗೊಳಿಸಬೇಕಾಗಿ ದಲಿತ ಸೇನಾ ಸಮಿತಿ (ಅಂಬೇಡ್ಕರ್ ವಾದ) ಕಾರ್ಯಕರ್ತರು ಗ್ರಾಮ ಪಂಚಾಯಿತಿ ಮುಖ್ಯಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿ,ಎಸ್,ಎಸ್ ತಾಲ್ಲೂಕು ಅಧ್ಯಕ್ಷ ಪೂರ್ಣೇಶ್ ಬೆಟ್ಟದಮನೆ ಈ ಜಮೀನು ಬಲಾಡ್ಯರು ಒತ್ತುವರಿ ಮಾಡಿರುವುದನ್ನು ನಮ್ಮ ಸಂಘಟನೆ ಖಂಡಿಸುತ್ತದೆ..ಮುಂದಿನ ದಿನದಲ್ಲಿ ಕಾನೂನು ರೀತಿಯ ಪ್ರತಿಭಟನೆ ಮಾಡಲು ಪೂರ್ವತಯಾರಿ ಮಾಡಲಾಗುವುದು.ಎಂದರು

ಡಿ,ಎಸ್,ಎಸ್ ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು ಮಾತನಾಡಿ ಹೊರಟ್ಟಿ ಗ್ರಾಮದ ಪ್ರಭಾವಿ ಗಳು ಗ್ರಾಮ ಠಾಣಾ ಜಾಗವನ್ನು ಒತ್ತು ವರಿ ಮಾಡಿದ್ದಾಗಿ ಸಂಘಟನೆಗೆ ತಿಳಿಸಿದ್ದು ಸುಮಾರು 2 ಎಕರೆ ಭೂಮಿ. ಭೂ ಕಳ್ಳರ ಪಾಲಗಿದ್ದು ಅದನ್ನು ತುರ್ತು ಬಿಡಿಸನೇಕಾಗಿ ಆಗ್ರಹಿಸಿದರು.

ಜಿಲ್ಲೆಯಾಧ್ಯಾಂತ ನಮ್ಮ ಸಂಘಟನೆ ಬಲಿಷ್ಠವಾಗಿದ್ದು ಬಡವರ ಸೇವೆಗೆ ನಮ್ಮ ಕಾರ್ಯಕರ್ತರು ಬದ್ಧವಾಗಿ ದುಡಿಯುತ್ತಿದ್ದಾರೆ.

ನಮ್ಮ ಮಾಕೋನಹಳ್ಳಿ ವ್ಯಾಪ್ತಿಯ ತುಂಬಾ ಬಡವರಿಗೆ ನಿವೇಶನದ ಕೊರತೆಯಿದ್ದು ಕೂಡಲೇ ಬಗೆಹರಿಸಬೇಕು ಎಂದರು

ಈ ಸಂದರ್ಭದಲ್ಲಿ DSS ಕಸಬಾ ಹೊಬಳಿ ಅಧ್ಯಕ್ಷ ಸತೀಶ್ ಮಾಕೋನಹಳ್ಳಿ,ಉಪಾಧ್ಯಕ್ಷ ಧರ್ಮೆಶ್ ಗೌರಿಕೆರೆ, ಹಾಗೂ ಸದಸ್ಯರಾದ ಹರೀಶ್ ಸುಮ, ನಾಗರತ್ನ, ಪ್ರೇಮ, ಚಂದ್ರಿಕಾ, ಕಮಲ, ಸರೀತಾ ಮುಂತಾದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!