ಐಪಿಎಲ್‌ನಲ್ಲಿ ಸಖತ್ ಸುದ್ದಿ ಮಾಡಿರುವ 14 ವರ್ಷದ ವೈಭವ್ ಸೂರ್ಯವಂಶಿ ಇದೀಗ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (SMAT) ಹೊಸ ಇತಿಹಾಸ ಬರೆದಿದ್ದಾರೆ. ವಿಭಿನ್ನ ಕ್ರಿಕೆಟ್ ವಿಭಾಗಗಳಲ್ಲಿ ಸಾಧನೆ ಮಾಡುತ್ತಿದ್ದ ಯುವ ಆಟಗಾರ, ಈ ಟೂರ್ನಿಯಲ್ಲಿ ಶತಕ ಸಿಡಿಸಿದ ಅತೀ ಕಿರಿಯ ಬ್ಯಾಟರ್ ಆಗಿ ದಾಖಲೆ ನಿರ್ಮಿಸಿದ್ದಾರೆ.
ಮಹಾರಾಷ್ಟ್ರ ವಿರುದ್ಧ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಬಿಹಾರ ಪರ ಓಪನರ್ ಆಗಿ ಬಂದ ವೈಭವ್, ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ಕೇವಲ 61 ಎಸೆತಗಳಲ್ಲಿ 108 ರನ್ ಸಿಡಿಸಿದರು. 7 ಬೌಂಡರಿ ಮತ್ತು 7 ಸಿಕ್ಸರ್‌ನೊಂದಿಗೆ ತಂಡದ ಸ್ಕೋರ್ 176/3 ರನ್‌ಗಳವರೆಗೆ ತಲುಪಿಸಿತು. ಆದರೆ, ಮಹಾರಾಷ್ಟ್ರದ ಪೃಥ್ವಿ ಶಾ ಅವರ ಸ್ಫೋಟಕ ಆಟದಿಂದ ತಂಡ 19.1 ಓವರ್‌ಗಳಲ್ಲಿ ಗೆಲುವಿನ ಗುರಿ ತಲುಪಿತು.
ವೈಭವ್ ಈಗಾಗಲೇ ಅಂಡರ್ 19 ಕ್ರಿಕೆಟ್, ಐಪಿಎಲ್ ಶತಕ ಹಾಗೂ ಅಂಡರ್ 19 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಯುವ ಬ್ಯಾಟರ್ ಎಂಬ ವಿಶ್ವದಾಖಲೆಗಳನ್ನ ಹೊಂದಿದ್ದಾರೆ.
ಇದೀಗ SMATನಲ್ಲಿ 14 ವರ್ಷ ವಯಸ್ಸಿನಲ್ಲಿ ಶತಕ ಬಾರಿಸಿದ ವೈಭವ್, ಟೂರ್ನಮೆಂಟ್‌ನಲ್ಲಿ ಅತಿ ಕಿರಿಯ ಸೆಂಚುರಿಯನ್ ಎಂಬ ದಾಖಲೆಯೊಂದಿಗೆ ತಮ್ಮ ಹೆಸರನ್ನು ಇತಿಹಾಸ ಪುಟಗಳಲ್ಲಿ ದಾಖಲಿಸಿದ್ದಾರೆ. ಈ ಹಿಂದಿನ ದಾಖಲೆಗಳನ್ನು 18 ವರ್ಷ ವಯಸ್ಸಿನವರಾದ ವಿಜಯ್ ಜೋಲ್ ಮತ್ತು ಆಯುಷ್ ಮ್ಹಾತ್ರೆ ಹೊಂದಿದ್ದರು. ಇವರಿಬ್ಬರನ್ನು ಹಿಂದಿಕ್ಕಿ ವೈಭವ್ ಹೊಸ ಶಿಖರ ಏರಿದ್ದಾರೆ.
ಐಪಿಎಲ್‌ನಲ್ಲಿ ರಾಜಸ್ತಾನ್ ರಾಯಲ್ಸ್ (Rajasthan Royals) ಪರ ಆಟವಾಡಿದ ವೈಭವ್ ಸೂರ್ಯವಂಶಿ, ಗುಜರಾತ್ ಟೈಟನ್ಸ್ನಂತಹ ಬಲಿಷ್ಠ ತಂಡದ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದರು. ರಾಹುಲ್ ದ್ರಾವಿಡ್ ಮತ್ತು ವಿಕ್ರಮ್ ಸಂಪತ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿರುವ ವೈಭವ್, ಇತ್ತೀಚೆಗೆ ಏಷ್ಯಾಕಪ್ ಯುವ ಟೂರ್ನಿಯಲ್ಲಿ ಯುಎಇ ವಿರುದ್ಧ ಮತ್ತೊಂದು ಶತಕ ಸಾಧಿಸಿದ್ದಾರೆ.
ವೈಭವ್ ಸೂರ್ಯವಂಶಿಯ ಇಂದಿನ ಶತಕ ಭಾರತೀಯ ಕ್ರಿಕೆಟ್‌ಗೆ ಹೊಸ ನಿರೀಕ್ಷೆ ಹುಟ್ಟಿಸಿದೆ. 14 ವರ್ಷದ ಯುವ ಆಟಗಾರನೊಬ್ಬ ಟಿ20 ಕ್ರಿಕೆಟ್‌ನಲ್ಲಿ ಹಲವಾರು ಶತಕಗಳನ್ನು ಬಾರಿಸುತ್ತ, ದೇಶೀಯ ಹಾಗೂ ಅಂತರಾಷ್ಟ್ರೀಯ ಟೂರ್ನಮೆಂಟ್‌ಗಳಲ್ಲಿ ಹೊಸ ಕಥೆ ಬರೆಯುತ್ತಿರುವುದು ಭಾರತೀಯ ಕ್ರಿಕೆಟ್‌ಗೆ ಮತ್ತಷ್ಟು ಮೆರಗು ನೀಡಿದೆ.
