Saturday, September 26, 2026
Homeಕ್ರೈಮ್ಚಿಕ್ಕಮಗಳೂರು: ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ!

ಚಿಕ್ಕಮಗಳೂರು: ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ!

Telegram Group
Join Now

ಚಿಕ್ಕಮಗಳೂರು : ಪತಿಯಿಂದ ಬೇರ್ಪಟ್ಟು ತವರು ಮನೆಯಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರನ್ನು
ಚಾಕುವಿನಿಂದ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ಆಲ್ದೂರು ಸಮೀಪದ ಅರೆನೂರು ಗ್ರಾಮದಲ್ಲಿ ನಡೆದಿದೆ.

ಹೌದು .. ಸಂಧ್ಯಾ (33) ಹತ್ಯೆಯಾದ ಮೃತ ದುರ್ದೈವಿಯಾಗಿದ್ದಾಳೆ. ಮನೆ ಹಿಂದೆ ಕೆಲಸ ಮಾಡುತ್ತಿದ್ದ ವೇಳೆ ಕತ್ತು ಸೀಳಿ ಚಾಕುವಿನಿಂದ ಕುತ್ತಿಗೆ ಕುಯ್ದು ಮಹಿಳೆಯ ಭೀಕರ ಕೊಲೆ ಮಾಡಿ ಎಸ್ಕೇಪ್‌ ಆಗಿದ್ದಾನೆ ಎಂದು ತಿಳಿದುಬಂದಿದೆ. ಮಹಿಳೆ ಬದುಕುವ ಧಾವಂತದಲ್ಲಿ ಮನೆಯ ತುಂಬಾ ಚೆಲ್ಲಾಡಿರೋ ರಕ್ತ ಗೋಡೆ ಹಿಡಿದು ಏಳಲು ಯತ್ನಿಸಿರೋ ಸಂಧ್ಯಾ, ಗೋಡೆ ಮೇಲೆ ಆಕೆಯ ರಕ್ತಮಿಶ್ರಿತ ಹಸ್ತದ ಗುರುತು ಕಂಡುಬಂದಿದೆ.

ಕಳೆದ ನಾಲ್ಕು ದಿನದಿಂದ ನಾಪತ್ತೆಯಾಗಿದ್ದ ಸಂಧ್ಯಾ ಪ್ರಕರಣ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ಆದರೆ ಸೋಮವಾರ ಸಂಜೆ ಅರೆನೂರು ಗ್ರಾಮದ ಮನೆಗೆ ವಾಪಸ್ ಬಂದಿದ್ದ ಸಂಧ್ಯಾ ಇಂದು ಬರ್ಬರವಾಗಿ ಹತ್ಯೆಯಾಗಿದ್ದಾರೆ.

ಸ್ಥಳಕ್ಕೆ ಆಲ್ದೂರು ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಆರೋಪಿಯನ್ನು ಪತ್ತೆ ಹ್ಚುವಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!