ಮೂಡಿಗೆರೆ: ತಾಲೂಕಿನ ಚಕ್ಕಮಕ್ಕಿಯ ದಾರುಲ್ ಬಯಾನ್ ಖಲಂದರಿಯಾ ಎಜುಕೇಷನ್ ಸಂಸ್ಥೆಯಲ್ಲಿ ತನ್ನ 25ನೇ ವರ್ಷದ ಪ್ರಯಾಣವನ್ನು ಸ್ಮರಿಸಿಕೊಂಡು ಸಿಲ್ವರ್ ಜುಬಿಲಿ ಮಹಾಸಮ್ಮೇಳನವನ್ನು ಡಿಸೆಂಬರ್ 8, 2025ರಂದು ಕ್ಯಾಂಪಸ್ ಆವರಣದಲ್ಲಿ ಅದ್ದೂರಿಯಾಗಿ ಆಯೋಜಿಸಿದೆ. ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದು ಸಂಸ್ಥೆಯಿಂದ ತಿಳಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಸಯ್ಯಿದುಲ್ ಉಲಮಾ ಸಯ್ಯಿದುಲ್ ಜಿಫ್ರಿ ತಂಘಳ್, ಶೈಖುನಾ ಉಸ್ಮಾನ್ ಫೈಝಿ ತೊಡಾರು, ಮೊಯ್ದ ಫೈಝಿ ಕೊಡಗು, ಇರ್ಷಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್, ನವಾಜ್ ಮನ್ನಾನಿ ಪಣವೂರು ಸೇರಿದಂತೆ ಅನೇಕ ಗಣ್ಯ ಉಲಮಾಗಳು ಹಾಜರಾಗಿ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ವಿಚಾರಗಳ ಕುರಿತಾಗಿ ಪ್ರಭಾಷಣ ಮಾಡುವರು. ಸಮಾರಂಭದ ಅಂತ್ಯದಲ್ಲಿ ಶೈಖುನ ಬಂಬ್ರಾಣ ಅಬ್ದುಲ್ ಖಾದರ್ ಖಾಸಿಮಿ ಅವರು ದುಆ ಅನುಗ್ರಹ ನೆರವೇರಿಸಲಿದ್ದಾರೆ.
ಸಮ್ಮೇಳನಕ್ಕೆ ಆಗಮಿಸುವ ಮಹಿಳೆಯರಿಗಾಗಿ ಪ್ರತ್ಯೇಕ ಸ್ಥಳವಕಾಶ ಕಲ್ಪಿಸಲಾಗಿದ್ದು, ಕಾರ್ಯಕ್ರಮವನ್ನು ಸುಸಂಘಟಿತವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮಹಾ ಕಾರ್ಯಕ್ರಮದ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದ್ದು, ದಾರುಲ್ ಬಯಾನ್ ಖಲಂದರಿಯಾ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರು, ಸದಸ್ಯರು ಹಾಗೂ ಸ್ಥಳೀಯ ಗ್ರಾಮಸ್ಥರು ಮಹಾಸಮ್ಮೇಳನವನ್ನು ಯಶಸ್ವಿಗೊಳಿಸಲು ಸಜ್ಜಾಗಿದ್ದಾರೆ. ಸರ್ವರಿಗೂ ಆಯೋಜಕರಿಂದ ಆದರದ ಸ್ವಾಗತ ಸಲ್ಲಿಸಲಾಗಿದೆ.
