ಉಡುಪಿ: ಟ್ಯಾಂಕರ್ ಚಾಲಕನೊಬ್ಬ ರಾತ್ರಿ ಹೊತ್ತು ಹೆಡ್ ಲೈಟ್ ಕೂಡ ಹಾಕದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಯರ್ರಾಬಿರ್ರಿಯಾಗಿ ಚಲಾವಣೆ ಮಾಡಿಕೊಂಡು ಬಂದಿದ್ದು ಕೂದಲೆಳೆಯ ಅಂತರದಲ್ಲಿ ಹಲವಾರು ಅಪಘಾತಗಳು ತಪ್ಪಿವೆ.ಕೊನೆಗೆ ಆತನನ್ನು ಅಂಬಲಪಾಡಿಯ ಬಳಿ ವಾಹನವನ್ನು ನಿಲ್ಲಿಸಿ ವಿಶುಶೆಟ್ಟಿ ಅಂಬಲಪಾಡಿಯವರು ಮದ್ಯ ವ್ಯಸನಿಯನ್ನು ವಶಕ್ಕೆ ಪಡೆದು ಪೋಲಿಸರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ.
ಟ್ಯಾಂಕರ್ ಚಾಲಕ ಮಹಾರಾಷ್ಟ್ರ ಮೂಲದವನಾಗಿದ್ದು, ಬಹಳಷ್ಟು ಮದ್ಯ ಸೇವಿಸಿ ರಾತ್ರಿಯ ಹೊತ್ತು ಹೆಡ್ ಲೈಟ್ ಕೂಡ ಹಾಕದೆ ಬಹಳಷ್ಟು ವೇಗವಾಗಿ ಯರ್ರಾ ಬಿರ್ರಿಯಾಗಿ ಬರುತ್ತಿದ್ದ. ಗಮನಿಸಿದ ಸಾರ್ವಜನಿಕರ ವಾಹನವೊಂದು ಆತನನ್ನು ಹಿಂಬಾಲಿಸಿಕೊಂಡು ಬಂದು ಅಂಬಲಪಾಡಿಯ ಬಳಿ ನಿಲ್ಲಿಸಿದ್ದಾರೆ. ಸಾರ್ವಜನಿಕರು ಚಾಲಕನಿಗೆ ಹಲ್ಲೆಯನ್ನು ಕೂಡ ನಡೆಸಿದ್ದಾರೆ.
ಸಮಾಜಸೇವಕ ವಿಶುಶೆಟ್ಟಿಯವರು ಬಂದು ಆತನಿಗೆ ಹಲ್ಲೆಯಾಗುವುದನ್ನು ತಡೆದು ಕೂಡಲೇ ಪೋಲಿಸರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ನಂತರ ವಿಶಯಶೆಟ್ಟಿಯವರು ರಸ್ತೆಯ ಮದ್ಯದಲ್ಲಿ ನಿಂತಿದ್ದ ಟ್ಯಾಂಕರ್ ನ್ನು ಚಾಲಕರೊಬ್ಬರ ಸಹಾಯದಿಂದ ಠಾಣೆಗೆ ಮುಟ್ಟಿಸಿದ್ದಾರೆ. ಆತನನ್ನು ತಡೆಯದೆ ಹೋಗುತ್ತಿದ್ದರೆ ಬಹಳ ದೊಡ್ಡ ದುರಂತ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗುತ್ತಿತ್ತು. ಅದೃಷ್ಟವಶಾತ್ ದುರಂತ ತಪ್ಪಿದೆ.
