Tuesday, August 11, 2026
Homeಕ್ರೈಮ್ಬಾಳೂರು: ಮುಚ್ಚುವ ಸ್ಥಿತಿ ತಲುಪಿದ ಸರ್ಕಾರಿ ಶಾಲೆ: ಗ್ರಾಮಸ್ಥರ ಪ್ರತಿಭಟನೆ!

ಬಾಳೂರು: ಮುಚ್ಚುವ ಸ್ಥಿತಿ ತಲುಪಿದ ಸರ್ಕಾರಿ ಶಾಲೆ: ಗ್ರಾಮಸ್ಥರ ಪ್ರತಿಭಟನೆ!

Telegram Group
Join Now

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಗುತ್ತಿರುವ ಶಿಕ್ಷಕರ ನೇಮಕಾತಿ ತಾರತಮ್ಯ ಮತ್ತು ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಳೆದ ಮೂರು ವರ್ಷಗಳಿಂದ ಶಾಲೆಯಲ್ಲಿ ಅಗತ್ಯ ಶಿಕ್ಷಕರ ಕೊರತೆ ಎದುರಾಗಿದ್ದು80 ಮಕ್ಕಳಿದ್ದ ಶಾಲೆ 20ಕ್ಕೆ ಬಂದಿದೆ.ಇರೋದು ಒಬ್ರು ಅಥಿತಿ ಶಿಕ್ಷಕರು, ಅವ್ರು ಬರೋದು ವರ್ಷಕ್ಕೆ 10 ದಿನಭವಿಷ್ಯ ರೂಪಿಸೋ ಮಕ್ಕಳ ಜೀವನದಲ್ಲಿ ಚೆಲ್ಲಾಟ ಆಡ್ತಿರೋ ಅಧಿಕಾರಿಗಳು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ SDMC ಅಧ್ಯಕ್ಷರು, ಸದಸ್ಯರು, ಪೋಷಕರು ಮತ್ತು ಗ್ರಾಮಸ್ಥರು ಶಾಲೆಯ ಎದುರು ಧರಣಿ ನಡೆಸಿ ಕೂಡಲೇ ಶಿಕ್ಷಕರನ್ನ ನೇಮಿಸಿ ಹಾಗೆ ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ಸರ್ಕಾರವೇ ಶಾಲೆಯನ್ನು ಮುಚ್ಚುವ ಸ್ಥಿತಿಗೆ ತಲುಪಬಹುದು ಎಂಬ ಆತಂಕ ವ್ಯಕ್ತಪಡಿಸಿದರು.


ಶಾಲೆಯಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಈ ಹಿಂದೆ 80 ಇದ್ದು ,ನಿರಂತರ ಕಡೆಗಣನೆ ಮತ್ತು ಸಿಬ್ಬಂದಿ ಕೊರತೆಯಿಂದ ಈಗ ಕೇವಲ 20ಕ್ಕೆ ಇಳಿದಿದೆ. ಮೂರು ವರ್ಷಗಳಿಂದ ಅಗತ್ಯ ಶಿಕ್ಷಕರು ಇಲ್ಲ. ಅಧಿಕಾರಿಗಳಿಗೆ ಅನೇಕ ಬಾರಿ ಮನವಿ, ದೂರು, ಪತ್ರಗಳನ್ನು ನೀಡಿದರೂ ಯಾವುದೇ ಪರಿಣಾಮ ಆಗಿಲ್ಲ ಎಂದು ಎಸ್ ಡಿ ಎಂ ಸಿ ಸದಸ್ಯರು ದೂರಿದ್ದಾರೆ.


ಗ್ರಾಮಸ್ಥರು, ಪೋಷಕರು ಒಟ್ಟಾಗಿ ಧರಣಿ ನಡೆಸಿ ಸರ್ಕಾರವು ತಕ್ಷಣ ಗಮನಹರಿಸಿ ಶಾಶ್ವತ ಶಿಕ್ಷಕರ ನೇಮಕಾತಿ ಮಾಡಬೇಕು, ಶಾಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟವನ್ನೂ ನಡೆಸುವುದಾಗಿ ಎಚ್ಚರಿಸಿದರು.


ಮೂಡಿಗೆರೆ ಶಾಸಕರಾದ ನಯನ ಮೋಟಮ್ಮ ಅವರಿಗೆ ಹಲವು ಬಾರಿ ವಿಷಯ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂಬ ಪ್ರಶ್ನೆಯನ್ನು ಸ್ಥಳೀಯರು ಕೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments