Monday, February 9, 2026
Homeಕ್ರೈಮ್ಶೃಂಗೇರಿ: ಅಧಿಕಾರಿಗಳ ಬೇಜವಾಬ್ದಾರಿಯಿಂದ ತಾಲೂಕಿನ ರೈತರಿಗೆ ಬೆಳೆ ವಿಮೆಯಲ್ಲಿ ಅನ್ಯಾಯ

ಶೃಂಗೇರಿ: ಅಧಿಕಾರಿಗಳ ಬೇಜವಾಬ್ದಾರಿಯಿಂದ ತಾಲೂಕಿನ ರೈತರಿಗೆ ಬೆಳೆ ವಿಮೆಯಲ್ಲಿ ಅನ್ಯಾಯ

ಶೃಂಗೇರಿ: ಅಧಿಕಾರಿಗಳ ಬೇಜವಾಬ್ದಾರಿಯಿಂದ ತಾಲೂಕಿನ ರೈತರಿಗೆ ಬೆಳೆ ವಿಮೆಯಲ್ಲಿ ಅನ್ಯಾಯವಾದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ ಅವರಿಗೆ ತಾಲೂಕು ಬಿಜೆಪಿ ವತಿಯಿಂದ ಮನವಿ ಸಲ್ಲಿಸಿದರು

ಕರ್ನಾಟಕದಲ್ಲೇ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಆಗುಂಬೆ ಹಾಗೂ ಶೃಂಗೇರಿ ಭಾಗಗಳು ಹಾಗಿರುವಾಗ ಈ ಬಾರಿ ಶೃಂಗೇರಿಯಲ್ಲಿ ಅತಿಹೆಚ್ಚು ಮಳೆ ಬಂದಿದೆ. ಇದರಿಂದಾಗಿ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ ಹೀಗಿರುವಾಗ ರೈತರ ಕಷ್ಟಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಮಳೆ ಮಾಪನ ವರದಿಯನ್ನು ತಪ್ಪಾಗಿ ನೀಡಿದ್ದಾರೆ.

ಆದ್ದರಿಂದ ಬರುವ ವಿಮೆ ಹಣ ಕಡಿಮೆ ಬರಲಿದೆ ಹಾಗೂ ಕಳೆದ ಕಂತಿನ ವಿಮಾ ಹಣವು ಇದುವರೆಗೂ ಬಂದಿಲ್ಲ ಈ ಬಗ್ಗೆ ಗಮನಹರಿಸಿ ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸಹಕರಿಸಬೇಕಾಗಿ ಹಾಗೂ ಎಲೆಚುಕ್ಕೆ ರೋಗ,ಹಳದಿ ಎಲೆ ರೋಗ,ಕೊಳೆ ರೋಗದಂತಹ ಸಮಸ್ಯೆಗೆ ಸಿಲುಕಿರುವ ರೈತರಿಗೆ ಬೇಜವಾಬ್ದಾರಿ ಕೆಲಸದ ಮೂಲಕ ಅನ್ಯಾಯ ಮಾಡಿದ ಅಧಿಕಾರಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಇಂದು ಸಿ ಎಸ್ ‌ರವರಿಗೆ ತಾಲೂಕು ಬಿಜೆಪಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಶೃಂಗೇರಿ ತಾಲೂಕು ಬಿಜೆಪಿ ಕಾರ್ಯದರ್ಶಿಯಾದ ನೂತನ್ ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ವೇಣುಗೋಪಾಲ್ ಮುಂತಾದವರು ಹಾಜರಿದ್ದರು.

ವರದಿ : ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!