Monday, February 9, 2026
Homeಜಿಲ್ಲಾಸುದ್ದಿಮೂಡಿಗೆರೆ: ನಾಡದೊರೆ ಕೆಂಪೇಗೌಡ ಪುತ್ಥಳಿ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸುವಂತೆ ಬ್ರಿಜೇಶ್ ಕಡಿದಾಳ್ ಒತ್ತಾಯ

ಮೂಡಿಗೆರೆ: ನಾಡದೊರೆ ಕೆಂಪೇಗೌಡ ಪುತ್ಥಳಿ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸುವಂತೆ ಬ್ರಿಜೇಶ್ ಕಡಿದಾಳ್ ಒತ್ತಾಯ

ಮೂಡಿಗೆರೆ: ಬೆಂಗಳೂರು ಸಂಸ್ಥಾಪಕ ನಾಡಪ್ರಭು ಕೆಂಪೇಗೌಡ ಪುತ್ಥಳಿ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸಿ ಕೊಡುವಂತೆ ಕೆಂಪೇಗೌಡ ಒಕ್ಕಲಿಗರ ವೇದಿಕೆ ಮೂಡಿಗೆರೆ ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆ ತಾಲೂಕು ಅಧ್ಯಕ್ಷ ಬ್ರಿಜೆಶ್ ಗೌಡ ಕಡಿದಾಳು ಅವರು, ಸಂಘಟನೆಯು ಹಲವು ವರ್ಷಗಳಿಂದ ಸಮಾಜ ಮುಖಿ ಕೆಲಸ ಮಾಡುತ್ತ ಬಂದಿದೆ, ಒಕ್ಕಲಿಗ ಸಮುದಾಯದ ನಾಯಕ ಕೆಂಪೇಗೌಡ ಅವರ ಪುತ್ಥಳಿ ಸ್ಟಾಪಿಸಲು ಹಲವು ಬಾರಿ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದರು ಪ್ರಯೋಜನ ಆಗುತ್ತಿಲ್ಲ ಇದು ನಾಡು ನಿರ್ಮಾಣದ ಹೆಮ್ಮೆಯ ನಾಯಕರಿಗೆ ಅವಮಾನ ಮಾಡಿದಂತಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ಬಸ್ ನಿಲ್ದಾಣದ ಹೊರಭಾಗ ಖಾಲಿ ಜಾಗವಿದ್ದು ಈ ಜಾಗದಲ್ಲಿ ನಾಡ ದೊರೆ ಕೆಂಪೇಗೌಡ ಪುತ್ಥಳಿ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕೆಂಪೇಗೌಡ ಒಕ್ಕಲಿಗ ವೇದಿಕೆ ಮೂಡಿಗೆರೆ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಕ್ಕಿ, ಖಜಾಂಚಿ ಮಡ್ಕಲ್ ಪ್ರೀತಮ್, ಕಾರ್ಯದರ್ಶಿ ಪವನ್ ಪಟ್ಟದ್ದೂರು, ಅಶ್ವಥ್ ಗೌಡ ಬೆಟ್ಟಗೆರೆ, ಆದರ್ಶ ತರುವೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!