ಮೂಡಿಗೆರೆ: ತಾಲೂಕು ಛಾಯಾಗ್ರಾಹಕರ ಸಂಘದ ಹೊಸ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಸುನಿಲ್ ಎಂ.ಎಲ್ ಅವರನ್ನು ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಅವರು ಸಂಘದ ಅಭಿವೃದ್ಧಿಗೆ ತಾವು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.

ಹೊಸ ಕಾರ್ಯಕಾರಿ ಸಮಿತಿ ಹೀಗಿದೆ:
ಅಧ್ಯಕ್ಷರು: ಸುನಿಲ್ ಎಂ.ಎಲ್
ಕಾರ್ಯದಕ್ಷರು: ದೀಪನ್
ಉಪಾಧ್ಯಕ್ಷರು: ಮನೋಜ್ ಕುಮಾರ್
ಕಾರ್ಯದರ್ಶಿ: ದಿಲೀಪ್ ಶೆಟ್ಟಿ (ಡಿ.ಎಂ ಸ್ಟುಡಿಯೋ)
ಸಹಕಾರ್ಯದರ್ಶಿ: ಪ್ರವೀಣ್ (ಬಾಲೆ)
ಖಜಾಂಜಿ: ಸಮೃದ್ಧ ಬಣಕಲ್
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ. ವಸಂತ ಪೂಜಾರಿ. ಸತ್ಯನಾರಾಯಣ ಶೆಟ್ಟಿ. ಪರಮೇಶ್. ಸದಸ್ಯರಾದ. ವಸಂತ್ ಪೈ. ಮಂಜು. ನಿರಂಜನ್ . ಪುನೀತ್ ಮೊದಲಾದವರು ಹೊಸದಾಗಿ ಆಯ್ಕೆಯಾದ ತಂಡಕ್ಕೆ ಶುಭಹಾರೈಕೆ ಸಲ್ಲಿಸಿದ್ದು, ಛಾಯಾಗ್ರಾಹಕರ ಹಿತಾಸಕ್ತಿ ಹಾಗೂ ತಾಂತ್ರಿಕ ಪ್ರಗಶೀಲತೆಗೆ ಗಮನ ಹರಿಸುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
