ಮೂಡಿಗೆರೆ: ಪಟ್ಟಣದ ಜೆಸಿ ಹಾಲ್ ಸಭಾಂಗಣದಲ್ಲಿ ನಡೆದ ಜೆಸಿಐ ಮೂಡಿಗೆರೆ ಘಟಕದ ಪದಗ್ರಹಣ ಪ್ರದಾನ ಕಾರ್ಯಕ್ರಮ- 2026 ಅದ್ದೂರಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಜೆಸಿಐ ತಾಲ್ಲೂಕು ಘಟಕದ ನೂತನ ಸಾರಥಿಯಾಗಿ ಅವಿರೋಧವಾಗಿ ಸುನಿಲ್ ಶೆಟ್ಟಿ ನೇಮಕಗೊಂಡು ಮಾತನಾಡಿದ ಅವರು, ಯುವಪೀಳಿಗೆ ದೇಶದ ಆಸ್ತಿಯಾಗಿದೆ. ಅವರಿಗೆ ಸಕಾಲಕ್ಕೆ ಸೂಕ್ತ ಮಾರ್ಗದರ್ಶನ, ತಿಳುವಳಿಕೆ ತರಬೇತಿ ನೀಡಬೇಕು ಆ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ಸಲ್ಲಿಸುವ ರೀತಿಯಲ್ಲಿ ಯುವ ಸಮುದಾಯವನ್ನು ಪ್ರೋತ್ಸಾಹಿಸುವುದು ಎಲ್ಲ ಸಂಘ ಸಂಸ್ಥೆಗಳ ಕರ್ತವ್ಯ ಎಂದರು.

ಜೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ (ಜೆಸಿಐ) ಸಂಸ್ಥೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಯುವಪೀಳಿಗೆಗೆ ಸೂಕ್ತ ತರಬೇತಿ ಮೂಲಕ ನಾಯಕತ್ವದ ಗುಣ ರೂಪಿಸುವಲ್ಲಿ ಶ್ರಮಿಸುತ್ತಿದೆ. ಹಲವು ಪ್ರತಿಭಾನ್ವಿತರು ಜೆಸಿಐ ತರಬೇತಿ ಮೂಲಕ ಸಮಾಜಕ್ಕೆ ಕೊಡುಗೆ ಸಲ್ಲಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.ಹಾಗೆ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ನನ್ನ ಬೆಳವಣಿಗೆ ಹಾದಿ ಸುಗಮವಾಗಿಸಿದ ಹೆತ್ತವರನ್ನು ನೆನೆದು ಭಾವುಕಾರಾಗಿ ಜೆಸಿಐ ಸಂಸ್ಥೆಯನ್ನು ದೊಡ್ಡ ಮಟ್ಟಕ್ಕೆ ಬೆಳೆಸುವ ಕನಸು ಕಂಡಿದ್ದು ತಮ್ಮೆಲ್ಲರ ಮಾರ್ಗದರ್ಶನ ಸದಾ ಇರಲಿ ಎಂದರು.
ಯುವಪೀಳಿಗೆಯಲ್ಲಿ ನಾಯಕತ್ವ ಅಭಿವೃದ್ಧಿ ಮೂಲಕ ಕೌಶಲ್ಯ, ವ್ಯಕ್ತಿತ್ವ ವಿಕಸನಕ್ಕೆ ಜೆಸಿಐ ಸಂಸ್ಥೆಯಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಯುವಪೀಳಿಗೆ ಜೆಸಿಐ ತರಬೇತಿ ಮೂಲಕ ಪರಿಪೂರ್ಣ ವ್ಯಕ್ತಿತ್ವ ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಿದರು.

ಜೆಸಿಐ ಸಂಸ್ಥೆಯಲ್ಲಿ ಶಿಸ್ತು, ಸಮಯಪಾಲನೆ, ಕರ್ತವ್ಯ ಪ್ರಜ್ಞೆ, ಸಮವಸ್ತ್ರ ಸಹಿತ ಪ್ರತಿಯೊಂದು ಸೂಕ್ಷ್ಮ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಾಮಾನ್ಯ ವ್ಯಕ್ತಿಯೋರ್ವ ಸಮಾಜದಲ್ಲಿ ವಿಶಿಷ್ಟ ರೀತಿಯಾಗಿ ರೂಪುಗೊಳ್ಳಲು ಜೆಸಿಐ ನೀಡುತ್ತಿರುವ ಆದ್ಯತೆ ಗಮನಿಸಿ ಸಕ್ರಿಯವಾಗಿ ಯುವಪೀಳಿಗೆ ಹೆಚ್ಚು ಹೆಚ್ಚು ಪಾಲ್ಗೊಂಡು ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆ ಸಲ್ಲಿಸುವಂತೆ ತಿಳಿಸಿದರು.ತಮಗೆ ದೊರೆತ ಕಾಲಾವಧಿಯಲ್ಲಿ ಸಂಸ್ಥೆಯ ಸದಸ್ಯತ್ವ ಹೆಚ್ಚಿಸುವ ಜತೆಗೆ ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಆಗಮಿಸಿ ಮಾತನಾಡಿದ ಅನುಕುಮಾರ್ ಪುಟ್ಟಣ್ಣ, ಪ್ರತಿಯೊಬ್ಬರ ಬದುಕಿನಲ್ಲಿ ಯೌವನ ಅತ್ಯಂತ ಪ್ರಮುಖ ಕಾಲಘಟ್ಟವಾಗಿದೆ. ಈ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನ, ತಿಳುವಳಿಕೆ ಮೂಲಕ ಪ್ರೋತ್ಸಾಹಿಸಿದರೆ ಮಾತ್ರ ಸಮಾಜಕ್ಕೆ ಉತ್ತಮ ಕೊಡುಗೆ ಸಲ್ಲಿಸಲು ಸಾಧ್ಯ ಎಂದರು.
ಹಾಗೆ ಜೆಸಿಐ 18ರಿಂದ 40 ವರ್ಷದ ಯುವಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ನಾಯಕತ್ವದ ಗುಣ ಬೆಳೆಸುತ್ತಿದೆ. ಆ ಮೂಲಕ ಸಮಾಜದಲ್ಲಿ ಸಕ್ರಿಯ ನಾಗರೀಕರಾಗಿ ಸಾಮಾಜಿಕ ಜವಾಬ್ದಾರಿಯನ್ನು ಉತ್ತೇಜಿಸಿ ಸಮುದಾಯದ ಅಭಿವೃದ್ಧಿಗೆ ಕೊಡುಗೆ ಸಲ್ಲಿಸುವ ರೀತಿ ಉತ್ತೇಜಿಸುವ ಬಹುದೊಡ್ಡ ಕಾರ್ಯದಲ್ಲಿ ಜೆಸಿಐ ತೊಡಗಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಜೆಸಿಐ ಮೂಡಿಗೆರೆ ಸಂಸ್ಥೆಯ 56ನೇ ಅಧ್ಯಕ್ಷರಾಗಿ ಜೆಸಿ ಸುನಿಲ್ ಶೆಟ್ಟಿ ಅವರಿಗೆ ನಿಕಟಪೂರ್ವ ಅಧ್ಯಕ್ಷ ಜೇಸಿ ಪ್ರದೀಪ್ ಕುನ್ನಹಳ್ಳಿ ಅಧಿಕಾರ ಹಸ್ತಾಂತರಿಸಿದರು.
ಜೆಸಿಐ ಘಟಕ ಅಧಿಕಾರಿ ರಾಘವಿ ಕಾರ್ಯದರ್ಶಿ ಸುದೀಪ್ ತ್ರಿಪುರ, ಸಹ ಕಾರ್ಯದರ್ಶಿ ವಿಶ್ವ ಮುಗ್ರಹಳ್ಳಿ ಹಾಗೂ ಖಜಾಂಚಿಯಾಗಿ ಅಕ್ಷತ್ ಪಟ್ಟದ್ದೂರು, ಉಪಾಧ್ಯಕ್ಷರಾಗಿ ಜೆಸಿ ರೇಖಾ ನಾಗರಾಜ್, ಪ್ರೇಮ ಪುಣ್ಯಮೂರ್ತಿ, ಶಾಲಿನಿ ಉದಯ್, ಶ್ರುತಿ ಸಂಪತ್, ಹಮೀದ್ ಸಬ್ಬೆನಹಳ್ಳಿ, ಆಕಾಶ್ ಸಹಿತ ಅನೇಕರು ಪೂರ್ಣ ಪ್ರಮಾಣದ ಪದಾಧಿಕಾರಿಗಳು ವಿದ್ಯುಕ್ತವಾಗಿ ಜವಾಬ್ದಾರಿ ವಹಿಸಿಕೊಂಡರು.
ವೇದಿಕೆಯಲ್ಲಿ ವಲಯ ಅಧ್ಯಕ್ಷ ಪ್ರಜ್ವಲ್ ಜೈನ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕಿ ಸಾವಿತ್ರಿ ಎಂ. ಬಿ. ಹಿರಿಯ ವಕೀಲ ಪ್ರಸನ್ನ ಕುಮಾರ್, ವಲಯ 14 ರ ಉಪಾಧ್ಯಕ್ಷ ಜಗತ್ ಗೌಡ, ರೇಖಾ ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ :ಪುನೀತ್ ಕಡಿದಾಳು
9483811948
