Monday, August 10, 2026
Homeಕ್ರೈಮ್ಶಾಸಕ ಬೈರತಿ ಬಸವರಾಜ್‌ಗೆ ಬಿಗ್ ಶಾಕ್: ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಅರ್ಜಿ ವಜಾ!

ಶಾಸಕ ಬೈರತಿ ಬಸವರಾಜ್‌ಗೆ ಬಿಗ್ ಶಾಕ್: ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಅರ್ಜಿ ವಜಾ!

Telegram Group
Join Now

ಬೆಂಗಳೂರು: ರಾಜಧಾನಿಯಲ್ಲಿ ಭಾರಿ ಸಂಚಲನ ಮೂಡಿಸಿದ್ದ ಬಿಕ್ಲು ಶಿವ (ಶಿವಪ್ರಕಾಶ್) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ್ ಅವರಿಗೆ ಅವರಿಗೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಯಾಗಿದೆ. ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಬೈರತಿ ಬಸವರಾಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ಕೋರ್ಟ್‌ನಲ್ಲಿ ನಡೆದಿದ್ದೇನು? (ವಾದ-ಪ್ರತಿವಾದ)

SPP ಅಶೋಕ್ ನಾಯ್ಕ್ ವಾದ (ಸರ್ಕಾರದ ಪರ): ವಿಶೇಷ ಅಭಿಯೋಜಕ (SPP) ಅಶೋಕ್ ನಾಯ್ಕ್ ಅವರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಪ್ರತಿ ಸಲ್ಲಿಸಿ ಪ್ರಬಲ ಸಾಕ್ಷ್ಯಗಳನ್ನು ಮಂಡಿಸಿದರು. “ಚಾರ್ಜ್‌ಶೀಟ್‌ನ ಪುಟ ಸಂಖ್ಯೆ 298ರಲ್ಲಿ ಟವರ್ ಲೊಕೇಷನ್ ಮತ್ತು ಕಾಲ್ ರೆಕಾರ್ಡ್‌ಗಳ ಮಾಹಿತಿ ಇದೆ. ಪ್ರಕರಣದ ಮೊದಲ ಆರೋಪಿ (A1) ಜಗ್ಗ ಮತ್ತು ಐದನೇ ಆರೋಪಿ (A5) ಬೈರತಿ ಬಸವರಾಜ್ ನಡುವೆ ದೂರವಾಣಿ ಸಂಭಾಷಣೆ ನಡೆದಿರುವ ದಾಖಲೆಗಳಿವೆ. ಹತ್ಯೆಯ ಹಿಂದಿನ ಪ್ರಮುಖ ಲಿಂಕ್‌ಗಳನ್ನು ಪತ್ತೆಹಚ್ಚಲು ಇವರನ್ನು ಬಂಧಿಸಿ ವಿಚಾರಣೆ ನಡೆಸುವುದು ಅತ್ಯಗತ್ಯ,” ಎಂದು ವಾದಿಸಿದರು.

ಸಂದೇಶ್ ಚೌಟ ವಾದ (ಬೈರತಿ ಪರ): ಬೈರತಿ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದಿಸಿ, “ಇದು ಕೇವಲ ರಾಜಕೀಯ ಪ್ರೇರಿತ ಒಳಸಂಚು. 5 ತಿಂಗಳಾದರೂ ಪೊಲೀಸರಿಗೆ ಯಾವುದೇ ಬಲವಾದ ಸಾಕ್ಷ್ಯ ಸಿಕ್ಕಿಲ್ಲ. ಹಳೆಯ ಹುಟ್ಟುಹಬ್ಬದ ಕಾರ್ಯಕ್ರಮ ಅಥವಾ ಕುಂಭಮೇಳಕ್ಕೆ ಹೋಗಿದ್ದನ್ನು ಇಟ್ಟುಕೊಂಡು ಕೊಲೆಯ ಸಂಚು ಎನ್ನಲು ಸಾಧ್ಯವಿಲ್ಲ. ತನಿಖೆಗೆ ಸಹಕರಿಸಲು ನಾವು ಸಿದ್ಧವಿದ್ದರೂ ಪೊಲೀಸರು ಸಮನ್ಸ್ ನೀಡಿಲ್ಲ,” ಎಂದು ಜಾಮೀನಿಗಾಗಿ ಕೋರಿದರು.

ಆದರೆ, ಈ ವಾದಗಳನ್ನು ಆಲಿಸಿದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಸಂಜೆ ಆದೇಶ ಹೊರಡಿಸಿ, ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

ಸಿಐಡಿ ಚಾರ್ಜ್‌ಶೀಟ್‌ನಲ್ಲಿ ಏನಿದೆ?

ಪ್ರಕರಣದ ತನಿಖೆ ನಡೆಸುತ್ತಿರುವ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್‌ಮೆಂಟ್ (CID), ಈಗಾಗಲೇ ನ್ಯಾಯಾಲಯಕ್ಕೆ ಪ್ರಾಥಮಿಕ ಆರೋಪಪಟ್ಟಿ (Chargesheet) ಸಲ್ಲಿಸಿದೆ.

  • 18 ಆರೋಪಿಗಳ ಉಲ್ಲೇಖ: ಈ ಚಾರ್ಜ್‌ಶೀಟ್‌ನಲ್ಲಿ ಒಟ್ಟು 18 ಜನರನ್ನು ಹತ್ಯೆಯ ಆರೋಪಿಗಳೆಂದು ಗುರುತಿಸಲಾಗಿದೆ.
  • ಶಾಸಕರ ಹೆಸರಿಲ್ಲ: ಗಮನಾರ್ಹವಾಗಿ, ಈ 18 ಜನರ ಪಟ್ಟಿಯಲ್ಲಿ ಬೈರತಿ ಬಸವರಾಜ್ ಅವರ ಹೆಸರು ಸೇರ್ಪಡೆಯಾಗಿಲ್ಲ.
  • ತನಿಖೆ ಚುರುಕು: ಹತ್ಯೆಗೆ ಸಂಬಂಧಿಸಿದ ಆರ್ಥಿಕ ವ್ಯವಹಾರಗಳು ಮತ್ತು ಬಹುಮಾನದ ಆಮಿಷಗಳ ಬಗ್ಗೆ ಸಿಐಡಿ ವರದಿಯಲ್ಲಿ ಉಲ್ಲೇಖವಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹೈದರಾಬಾದ್, ಪುಣೆ ಮತ್ತು ಮಂಗಳೂರು ಸೇರಿದಂತೆ ವಿವಿಧೆಡೆ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ.

ಹತ್ಯೆಯ ಹಿನ್ನೆಲೆ

ಜುಲೈ 15, 2025 ರಂದು ಬೆಂಗಳೂರಿನ ಭಾರತಿನಗರ ಪ್ರದೇಶದಲ್ಲಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲಾ ಶಿವನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆಸ್ತಿ ವಿವಾದ ಹಾಗೂ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಗುಂಪು ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ. ಈ ಪ್ರಕರಣದಲ್ಲಿ ರಾಜಕೀಯ ನಾಯಕರ ಹಸ್ತಕ್ಷೇಪವಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

ಪುಣೆಯಲ್ಲಿ ಪತ್ತೆಯಾದ ಲೊಕೇಶನ್; ಸಿಐಡಿ ಬೇಟೆ!

ಬೈರತಿ ಬಸವರಾಜ್ ಸದ್ಯ ನಾಪತ್ತೆಯಾಗಿದ್ದಾರೆ. ತನಿಖಾಧಿಕಾರಿಗಳ ಮಾಹಿತಿ ಪ್ರಕಾರ, ಅವರು ಮೊದಲು ಗೋವಾಕ್ಕೆ ತೆರಳಿ ನಂತರ ಮಹಾರಾಷ್ಟ್ರಕ್ಕೆ ಹೋದ ಮಾಹಿತಿ ಇತ್ತು. ಕೊನೆಯದಾಗಿ ಅವರ ಮೊಬೈಲ್ ಲೊಕೇಶನ್ ಪುಣೆಯಲ್ಲಿ ಪತ್ತೆಯಾಗಿದ್ದು, ಆನಂತರ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಸಿಐಡಿ ಅಧಿಕಾರಿಗಳ ವಿಶೇಷ ತಂಡವು ಮಹಾರಾಷ್ಟ್ರದಲ್ಲಿ ಬೀಡುಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಶಾಸಕರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಮುಂದಿನ ಕಾನೂನು ನಡೆ ಏನು?

ಈಗಾಗಲೇ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯ ಎರಡರಲ್ಲೂ ಜಾಮೀನು ವಜಾಗೊಂಡಿದೆ. ಹೀಗಾಗಿ ಬೈರತಿ ಬಸವರಾಜ್ ಪರ ವಕೀಲರು ಡಿಸೆಂಬರ್ 26ರಂದು ಹೈಕೋರ್ಟ್‌ನ ರಜಾಕಾಲದ ಪೀಠದ (Vacation Bench) ಮುಂದೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಅಲ್ಲಿಯೂ ಜಾಮೀನು ಸಿಗದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಗಳಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments