Wednesday, March 25, 2026
Homeಕ್ರೈಮ್ಮೂಡಿಗೆರೆ: ಬೈದುವಳ್ಳಿ ಗ್ರಾಮದ ದೇವಾಲಯದ ಹುಂಡಿ ಕಳವು: ಕಳ್ಳರ ಪಾಲಾದ ನಂಬಿಕೆಯ ಹಣ!

ಮೂಡಿಗೆರೆ: ಬೈದುವಳ್ಳಿ ಗ್ರಾಮದ ದೇವಾಲಯದ ಹುಂಡಿ ಕಳವು: ಕಳ್ಳರ ಪಾಲಾದ ನಂಬಿಕೆಯ ಹಣ!

ಮೂಡಿಗೆರೆ: ತಾಲೂಕಿನ ಗೋಣಿಬೀಡು ಹೋಬಳಿ ಬೈದುವಳ್ಳಿ ಗ್ರಾಮದ ದೇವಸ್ಥಾನಕ್ಕೆ ಮಂಗಳವಾರ ರಾತ್ರಿ ನುಗ್ಗಿದ ಕಳ್ಳ, ಕಾಣಿಕೆ ಡಬ್ಬಿಯನ್ನು ಕಳವು ಮಾಡಿರುವ ಘಟನೆ ನಡೆದಿದೆ.

ದೇವಸ್ಥಾನದ ಕಾಣಿಕೆ ಡಬ್ಬವನ್ನು ಒಡೆದು ಅಂದಾಜು 2000 ರೂ. ಇರುವ ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.

ಈ ಕುರಿತು ಗ್ರಾಮಸ್ಥ ಸಚಿನ್ ಗೌಡ ಮಾಹಿತಿ ನೀಡಿದ್ದು ಕಳ್ಳರ ಕೈ ಚಳಕ ಗ್ರಾಮದಲ್ಲಿ ನಡೆದಿದ್ದು ಬೇಸರದ ವಿಚಾರ, ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ

ಪ್ರಕರಣ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!