ಚಿಕ್ಕಮಗಳೂರು: ಯಗಚಿಹಳ್ಳ ಸೇತುವೆ ಮೇಲ್ಬಾಗದ ಬಡಾವಣೆಗೆ ಯಗಚಿ ನಗರವೆಂದು ನಾಮಕರಣ ಮಾಡುವ ಕುರಿತು ಯಾರಿಂದಲಾದರೂ ತಂಟೆ, ತಕರಾರು ಹಾಗೂ ಆಕ್ಷೇಪಣೆಗಳಿದ್ದಲ್ಲಿ ಈ ಸಾರ್ವಜನಿಕ ಪ್ರಕಟಣೆ ಹೊರಡಿಸಿದ 30 ದಿನಗಳೊಳಗೆ ಲಿಖಿತ ಮೂಲಕ ನಗರಸಭೆಗೆ ವರದಿ ನೀಡುವುದು ಅವಧಿ ಮೀರಿ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನಗರಸಭೆಯ ಅಧ್ಯಕ್ಷರಾದ ಶೀಲಾ ದಿನೇಶ್, ಉಪಾಧ್ಯಕ್ಷರಾದ ಲಲಿತಾ ರವಿನಾಯ್ಕ ಹಾಗೂ ಪೌರಾಯುಕ್ತ ಬಿ.ಸಿ.ಬಸವರಾಜು ತಿಳಿಸಿದ್ದಾರೆ.
ನಗರದ 10ನೇ ವಾರ್ಡ್ ಪಾಯಸ್ ಕಾಂಪೌಂಡ್ ಕೆಳಗಿನ ಯಗಚಿಹಳ್ಳ ಸೇತುವೆ ಮೇಲ್ಬಾಗದ (ಉಂಡೇದಾಸರಹಳ್ಳಿ ಹಾಗೂ ಎರೇಹಳ್ಳಿ ಹೊರತುಪಡಿಸಿ) ಬಡಾವಣೆಗೆ ಯಗಚಿ ನಗರವೆಂದು ನಾಮಕರಣ ಮಾಡಬೇಕೆಂದು ಯಗಚಿ ನಿವಾಸಿಗಳ ವೆಲ್‌ಫೇರ್ ಅಸೋಸಿಯೇಶನ್ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಚಿಕ್ಕಮಗಳೂರು ಕೋರಿದ್ದು, ಇದೀಗ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
