Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ : ಪ್ರಗತಿ ಪರ ರೈತ ಪ್ರಶಸ್ತಿಗೆ ಭಾಜನರಾದ ಕುಂಬರಡಿ ಗ್ರಾಮದ ಕೆ.ಪಿ. ರಾಮೇಗೌಡ &...

ಮೂಡಿಗೆರೆ : ಪ್ರಗತಿ ಪರ ರೈತ ಪ್ರಶಸ್ತಿಗೆ ಭಾಜನರಾದ ಕುಂಬರಡಿ ಗ್ರಾಮದ ಕೆ.ಪಿ. ರಾಮೇಗೌಡ & ದ್ರಾಕ್ಷಿಯಿಣಿ ದಂಪತಿ

ಮೂಡಿಗೆರೆ: ರಾಷ್ಟ್ರ ಭಾರತದಲ್ಲಿ ಕೃಷಿ ಬಹಳ ಪ್ರಮುಖವಾಗಿದ್ದು ಇಂತಹ ಅಮೂಲ್ಯ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನ್ನದಾತ ರಾಮೇಗೌಡ ಅವರನ್ನು ಮೂಡಿಗೆರೆ ಪಟ್ಟಣದಲ್ಲಿ ಕರ್ನಾಟಕ ಸರ್ಕಾರ ನೀಡುವ ಪ್ರಗತಿ ಪರ ರೈತ ಪ್ರಶಸ್ತಿಗೆ ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.

ಹೌದು… ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಡಿಯಲ್ಲಿ ಕೃಷಿ ಇಲಾಖೆ ವತಿಯಿಂದ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಗೋಣಿಬೀಡು ಹೋಬಳಿಯ ಕುಂಬರಡಿ ಗ್ರಾಮದ ರಾಮೇಗೌಡ ಹಾಗೂ ಧರ್ಮಪತ್ನಿ ಶ್ರೀಮತಿ ದ್ರಾಕ್ಷಿಯಿಣಿ ಅವರನ್ನು ಪ್ರಗತಿ ಪರ ರೈತರೆಂದು ಗುರುತಿಸಿ ಗಣ್ಯರು ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿ ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಮಾತನಾಡಿದ ಅವರು, ಕೃಷಿಯನ್ನೇ ನಂಬಿದ್ದೇನೆ. ಕೃಷಿ ಕೈ ಬಿಟ್ಟಿಲ್ಲ ಲಾಭ ನಷ್ಟಗಳು ಸಹಜ ಆದರೆ ಕೃಷಿ ಪ್ರಧಾನ ರಾಷ್ಟ್ರದಲ್ಲಿ ಹುಟ್ಟಿದ ನಾವು ಕೃಷಿ ಕೈ ಬಿಡಬಾರದು ಎಂದರು. ಈ ಪ್ರಶಸ್ತಿ ಮತ್ತಷ್ಟು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೋತ್ಸಾಹ ತುಂಬಿದೆ ಎಂದರು.

ಮೂಡಿಗೆರೆ ತಾಲೂಕಿನ ಕುಂಬರಡಿ ಗ್ರಾಮದ ರೈತ ದಂಪತಿಗಳು ವಿವಿಧ ಮಾದರಿಯ ಭತ್ತ ಬೆಳೆಯುವುದರ ಜೊತೆಗೆ ಸುಮಾರು 40 ವರ್ಷ ಜೇನು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ನಾಟಿ ಔಷಧಿಗಾಗಿ ಜೇನನ್ನು ಉಚಿತವಾಗಿ ನೀಡಿ ಅನೇಕ ಜೀವ ರಕ್ಷಣೆಯಲ್ಲಿ ಕಾಣದ ಶಕ್ತಿಯಾಗಿದ್ದಾರೆ.

ತಮಗಿರುವ ಅಲ್ಪ ಭೂಮಿಯಲ್ಲಿ ಸಾವಯವ ಗೊಬ್ಬರ ಬಳಕೆ ಮಾಡಿಕೊಂಡು ವಿವಿಧ ತಳಿಯ ಕೃಷಿ ಹಾಗೂ ತರಕಾರಿ ಬೆಳೆಯುವುದರ ಜೊತೆಗೆ ಕಾಫಿ ಅಡಿಕೆ ಬೆಳೆದು ಜಿಲ್ಲಾ ಪ್ರಗತಿ ಪರ ರೈತ ಎನಿಸಿದ್ದಾರೆ.

ಸುತ್ತಮುತ್ತಲಿನ ಗ್ರಾಮಗಳ ರೈತರು ಆಗಮಿಸಿ ಕೃಷಿಯ ಹಾಗೂ ಜೇನು ಕೃಷಿ ಬಗ್ಗೆ ಮಾಹಿತಿ ಪಡೆಯುತ್ತಾರೆ. ನಾಟಿಹಸು ಹಾಗೂ ಎಮ್ಮೆಗಳನ್ನು ಸಾಕುವುದರ ಜೊತೆಗೆ ಹೈನುಗಾರಿಕೆಯಲ್ಲೂ ಮುಂದಿದ್ದಾರೆ

ಕೃಷಿಯನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಅವರು ಕೃಷಿ ಇಲಾಖೆ ನಡೆಸುವ ಕೃಷಿ ಸಂಬಂಧಿತ ಕಾರ್ಯಾಗಾರಗಳಲ್ಲಿ ಭಾಗಿಯಾಗಿ ಅನೇಕ ಮಾಹಿತಿ ಪಡೆದು ಗ್ರಾಮಸ್ಥರಿಗೆ ತಿಳಿಸುತ್ತಾರೆ.. ಕೃಷಿ ಮೇಳದಲ್ಲಿ ಅನೇಕ ಬಾರಿ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ’ ಪಡೆದಿದ್ದಾರೆ.

ವರದಿ :ಪುನೀತ್ ಕಡಿದಾಳು
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!