Friday, May 15, 2026
Homeಜಿಲ್ಲಾಸುದ್ದಿಜನ್ನಾಪುರದಲ್ಲಿ ಸಾವಯವ ಕೃಷಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಯಶಸ್ವಿ

ಜನ್ನಾಪುರದಲ್ಲಿ ಸಾವಯವ ಕೃಷಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಯಶಸ್ವಿ

ಮೂಡಿಗೆರೆ: ಜನ್ನಾಪುರ ಗ್ರಾಮದಲ್ಲಿ ದಿನಾಂಕ 16-೦1-2026 ರಂದು ಸೆಹಗಲ್ ಫೌಂಡೇಶನ್ನಾ ICCRL ಯೋಜನೆಯಲ್ಲಿ ಕೃಷಿ ಮತ್ತು ನ್ಯಾನೋ ರಸಗೊಬ್ಬರಗಳ ಕುರಿತು ಸಣ್ಣ ಕಾಫಿ ರೈತರ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮವನ್ನು ಶ್ರೀ ಸತೀಶ್ ಸಿಡಿ ಶೆಟ್ಟಿ (ಫೀಲ್ಡ್ ಅಸಿಸ್ಟೆಂಟ್) ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಸಲಾಯಿತು

ಈ ಕಾರ್ಯಕ್ರಮದಲ್ಲಿ ಸಣ್ಣ ಕಾಫಿ ರೈತರಿಗೆ ಸಾವಯವ ವಿಧಾನಗಳು ಮತ್ತು ನ್ಯಾನೋ ರಸಗೊಬ್ಬರಗಳ ಸಾಮರ್ಥ್ಯ ಹೆಚ್ಚಿಸುವ ಬಗ್ಗೆ ವಿವರವಾದ ಮಾಹಿತಿ ನೀಡಲಾಯಿತು. ಮಣ್ಣಿನ ಪರೀಕ್ಷೆ, ಜೀವಾಮೃತ ತಯಾರಿಕೆ ಸೇರಿದಂತೆ ಇತರ ಸಾವಯವ ಅಭ್ಯಾಸಗಳ ಬಗ್ಗೆ ಚರ್ಚೆನಡೆಯಿತು.

ರೈತರು ಈ ಕಾರ್ಯಕ್ರಮವನ್ನು ಸ್ವಾಗತಿಸಿ, ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಇನ್ನಷ್ಟು ಆದ್ಯತೆ ನೀಡಬೇಕೆಂದು ಅಭಿಪ್ರಾಯಪಟ್ಟರು

ಈಕಾರ್ಯಕ್ರಮದಲ್ಲಿ ಚಿಂತನ ಫೌಂಡೇಶನ್‌ನ ಗೌರವದ್ಯಕ್ಷ ಶ್ರೀ ಪೂವಪ್ಪ ಕಿರುಗುಂದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೂರ್ಣೇಶ್ ಬೆಟ್ಟದಮನೆ , ಡಿಎಸ್‌ಎಸ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಂದರೇಶ್ ಹೊಯ್ಸಳಲು.ಸೆಹಗಲ್ ಫೌಂಡೇಶನ್‌ನ ಎಲ್‌ಆರ್‌ಪಿ ಗಳಾದ ಶ್ರೀ ಸಮರ್ಥ್ ಹೆಗ್ಗಡ್ಲು, ಶ್ರೀ ಆಕೃತ್ ಜನ್ನಾಪುರ, ಶ್ರೀಮತಿ ವಿಶಾಲಕ್ಷ್ಮೀ ಸುರೇಶ್ ಚಂದ್ರಪುರ ಸೇರಿದಂತೆ ಸಣ್ಣ ಕಾಫಿ ರೈತರು ಭಾಗವಹಿಸಿದರು. ಸೆಹಗಲ್
ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!