Tuesday, February 10, 2026
Homeಕ್ರೈಮ್ಚಿಕ್ಕಮಗಳೂರು: ಬಾರ್ ನಲ್ಲಿ ನಡೆದ ಗಲಾಟೆ : ಕೊಲೆಯಲ್ಲಿ ಅಂತ್ಯ!

ಚಿಕ್ಕಮಗಳೂರು: ಬಾರ್ ನಲ್ಲಿ ನಡೆದ ಗಲಾಟೆ : ಕೊಲೆಯಲ್ಲಿ ಅಂತ್ಯ!

ಚಿಕ್ಕಮಗಳೂರು: ನಗರದ ಬಾರ್‌ ಒಂದರಲ್ಲಿ ಬಿಹಾರಿ ಕಾರ್ಮಿಕರು ಹಾಗೂ ವ್ಯಕ್ತಿಯೊಬ್ಬರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ತೇಜು (40) ಬಿಹಾರಿ ಕಾರ್ಮಿಕರಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ ವ್ಯಕ್ತಿ. ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಳೆದ ರಾತ್ರಿ (ಜ.20) ತೇಜು ಮೇಲೆ ಹಲ್ಲೆ ಮಾಡಿ, ಅಸ್ವಸ್ಥಗೊಂಡ ಬಳಿಕ ಒಂದು ಕಿಮೀ ದೂರದ ಪಟಾಕಿ ಮೈದಾನಕ್ಕೆ ತಂದು ಎಸೆದಿದ್ದರು ಎಂದು ಆರೋಪಿಸಲಾಗಿದೆ. ಇಂದು (ಜ.21) ಬೆಳಗ್ಗೆ ಆಟೋ ಚಾಲಕರೊಬ್ಬರು ತೇಜುವನ್ನು ನೋಡಿ, ಉಸಿರಾಡುತ್ತಿರುವುದನ್ನು ಗಮನಿಸಿ ಆಸ್ಪತ್ರೆಗೆ ಸೇರಿಸಿದ್ದರು. 

ತೀವ್ರ ಹಲ್ಲೆಯಾಗಿದ್ದರಿಂದ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!