Saturday, February 7, 2026
Homeಆಧ್ಯಾತ್ಮಹಿಂದೂ ಧರ್ಮ ಉಳಿವಿಗಾಗಿ ಆರ್‌ಎಸ್‌ಎಸ್ ಸಂಘವನ್ನು ಮತ್ತಷ್ಟು ಬಲಪಡಿಸುವ ಅಗತ್ಯ: ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ

ಹಿಂದೂ ಧರ್ಮ ಉಳಿವಿಗಾಗಿ ಆರ್‌ಎಸ್‌ಎಸ್ ಸಂಘವನ್ನು ಮತ್ತಷ್ಟು ಬಲಪಡಿಸುವ ಅಗತ್ಯ: ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ

ಮೂಡಿಗೆರೆ ತಾಲ್ಲೂಕಿನ ತ್ರಿಪುರ ಹಾಗೂ ಬೆಟ್ಟಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಕ್ಕಿ ಗ್ರಾಮದ ಅಂಬೇಡ್ಕರ್ ಭವನ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ಆಯೋಜಿಸಲಾಗಿತ್ತು.ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ, ತ್ರಿಪುರ ಹಾಗೂ ಬೆಟ್ಟಗೆರೆ ಇವರ ಆಶ್ರಯದಲ್ಲಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಸುಮಾರು 300ಕ್ಕೂ ಹೆಚ್ಚು ಬೈಕ್‌ಗಳೊಂದಿಗೆ ಬೈಕ್ ಜಾಥಾ ನಡೆಸಲಾಯಿತು. ಬೆಳ್ಳೂರ್ ಸರ್ಕಲ್‌ನಿಂದ ಆರಂಭವಾದ ಜಾಥಾ ಸುಮಾರು 12 ಕಿಲೋಮೀಟರ್ ದೂರ ಪ್ರಯಾಣಿಸಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಪರಮಪೂಜ್ಯ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ (ಬೇರುಗುಂಡಿ) ವಾದ್ಯಗೋಷ್ಠಿ ಮತ್ತು ಪೂರ್ಣ ಕುಂಭದೊಂದಿಗೆ ಅವರನ್ನು ಮಹಿಳೆಯರು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂ ಸಮಾಜದ ಅರಿವು ಹೆಚ್ಚಿಸಿಕೊಳ್ಳಲು ಮಹಾತೇರುಗಳು ಹಾಗೂ ಮಹನೀಯರು ಆರ್‌ಎಸ್‌ಎಸ್ ಶಾಖೆಗಳಿಗೆ ಭೇಟಿ ನೀಡಿ ಧರ್ಮದ ಉಳಿವಿನ ಅರಿವು ಪಡೆಯಬೇಕು. ಸಂಘಟಿತ ಪ್ರಯತ್ನದಿಂದ ಮಾತ್ರ ಧರ್ಮವನ್ನು ಉಳಿಸಬಹುದು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಶ್ರೀ ಕ್ಷೇತ್ರ ಸಂಘಟಕರು – ಸ್ವದೇಶಿ ಮಂಚ್, ಕರ್ನಾಟಕ ಹಾಗೂ ಆಂಧ್ರ– ತೆಲಂಗಾಣದ ಜಗದೀಶ್
ಧರ್ಮ ಉಳಿವಿಗೆ ಜಾತಿ–ಮತ–ಪಂಥ ಭೇದವನ್ನು ಬಿಟ್ಟು ಎಲ್ಲರೂ ಒಂದಾಗಿ ಸಂಘಟಿತರಾಗಬೇಕು. ಹಿಂದೂ ಧರ್ಮ ಉಳಿವಿಗಾಗಿ ಆರ್‌ಎಸ್‌ಎಸ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಹಿಂದೂ ಎಂದರೆ ಶಾಂತಿ ಸ್ವರೂಪ, ಆದರೆ ಧರ್ಮದ ಮೇಲೆ ದಾಳಿ ನಡೆದಾಗ ಪ್ರತಿರೋಧವೂ ಅಗತ್ಯ ಎಂದು ಹೇಳಿದರು.

ಪೂಜೆ ಮತ್ತು ಸಂಸ್ಕೃತಿ ಕುರಿತು ಮಾತನಾಡಿದ ಶ್ರೀಮತಿ ವಿಂದ್ಯಾ ರತೀಶ್ ಬೆಟ್ಟಗೆರೆ ಹಿಂದೂ ಧರ್ಮ ಅತ್ಯಂತ ಶ್ರೀಮಂತ ಸಂಸ್ಕೃತಿ ಹೊಂದಿದೆ. ಈ ಧರ್ಮದಲ್ಲಿ ಜನಿಸಿದ ನಾವುಗಳು ಅದರ ಆಚಾರ–ವಿಚಾರಗಳನ್ನು ಪಾಲಿಸಬೇಕು. ವಿದೇಶಿಯರೂ ಮೆಚ್ಚುವಂತಹ ಅನೇಕ ಸಂಸ್ಕೃತಿಪರ ಮೌಲ್ಯಗಳು ನಮ್ಮ ಧರ್ಮದಲ್ಲಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಾತಿ, ಮತ, ಪಕ್ಷಭೇದ ಮರೆತು ‘ನಾವೆಲ್ಲ ಹಿಂದೂ’ ಎಂಬ ಭಾವನೆಯೊಂದಿಗೆ ಸುಮಾರು 800ಕ್ಕೂ ಹೆಚ್ಚು ಜನರು ಈ ಸಣ್ಣ ಹಳ್ಳಿಯಲ್ಲಿ ಭಾಗವಹಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!