ಬೆಂಗಳೂರು: ರಥಾವರ ಸಿನಿಮಾ ಖ್ಯಾತಿಯ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್’ ಚಿತ್ರ ಇದೇ ಜನವರಿ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರ ತೆರೆಗೆ ಬರಲು ಸಿದ್ಧವಾಗಿರುವ ಈ ಸಂದರ್ಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನಿನ್ನೆ ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ನಡೆದ ಚೌಕಿದಾರ್ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಶಿವಣ್ಣ ವಿಶೇಷ ಅತಿಥಿಯಾಗಿ ಆಗಮಿಸಿ ತಂಡಕ್ಕೆ ಬೆಂಬಲ ಸೂಚಿಸಿದರು.

ಶಿವಣ್ಣನ ಮೆಚ್ಚುಗೆಯ ನುಡಿ: ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್‌ಕುಮಾರ್ “ಒಳ್ಳೆಯ ವ್ಯಕ್ತಿಗಳಿಗೆ ಒಳ್ಳೆಯದಾಗಬೇಕು ಎಂಬುದು ನನ್ನ ಭಾವನೆ. ಈ ಸಿನಿಮಾ ಉತ್ತಮವಾಗಿ ಪ್ರೇಕ್ಷಕರನ್ನು ತಲುಪಲಿ. ಕಲ್ಲಹಳ್ಳಿ ಚಂದ್ರಶೇಖರ್ ಅವರಂತಹ ನಿರ್ಮಾಪಕರು ನಮ್ಮ ಇಂಡಸ್ಟ್ರಿಗೆ ಬೇಕು, ಇನ್ನೂ ಹೆಚ್ಚು ಉತ್ತಮ ಸಿನಿಮಾಗಳನ್ನು ನಿರ್ಮಿಸಿ. ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರೊಂದಿಗೆ ನಾನು ಒಂದು ಸಿನಿಮಾ ಮಾಡಬೇಕಿತ್ತು, ಆದರೆ ಅದು ಯಾಕೋ ಸಾಧ್ಯವಾಗಲಿಲ್ಲ. ಅವರು ಅತ್ಯುತ್ತಮ ನಿರ್ದೇಶಕರು, ಭಾವನೆಗಳನ್ನು ಅದ್ಭುತವಾಗಿ ತೆರೆದಿಡುತ್ತಾರೆ” ಎಂದು ಶ್ಲಾಘಿಸಿದರು.

ಹಿರಿಯ ನಟ ಸಾಯಿಕುಮಾರ್ ಬಗ್ಗೆ ಮಾತನಾಡಿದ ಶಿವಣ್ಣ, “ಸಾಯಿಕುಮಾರ್ ಮತ್ತು ನಾನು ಮುದ್ದಿನ ಕಣ್ಮಣಿ ಸಿನಿಮಾದಿಂದ ಸ್ನೇಹಿತರು, ಬ್ರದರ್ಸ್ ಎಂದರೆ ತಪ್ಪಾಗಲಾರದು. ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಗೆಟಪ್ ಚೆನ್ನಾಗಿದೆ. ಧನ್ಯಾಳನ್ನು ಚಿಕ್ಕವಳಿದ್ದಾಗಿನಿಂದಲೂ ನೋಡಿಕೊಂಡು ಬಂದಿದ್ದೇವೆ, ಈಗ ಅವಳು ವಿಭಿನ್ನ ಸಿನಿಮಾಗಳನ್ನು ಮಾಡುತ್ತಿರುವುದು ಖುಷಿ ನೀಡಿದೆ. ಸಚಿನ್ ಬಸ್ರೂರ್ ಸಂಗೀತ ಚೆನ್ನಾಗಿದೆ, ಕ್ಯಾಮೆರಾ ವರ್ಕ್ ಕೂಡ ಉತ್ತಮವಾಗಿದೆ” ಎಂದು ತಿಳಿಸಿದರು.
ಸಾಯಿಕುಮಾರ್ ಹರ್ಷ: “ಶಿವಣ್ಣ ಬಂದು ನಮ್ಮ ಸಿನಿಮಾಗೆ ಹಾರೈಕೆ ನೀಡಿರುವುದು ಅತ್ಯಂತ ಸಂತೋಷ ತಂದಿದೆ. ನಾವಿಬ್ಬರು ಒಟ್ಟಾಗಿ ಸಿನಿಮಾ ಮಾಡುತ್ತಿದ್ದೇವೆ, ಅವರ ಎನರ್ಜಿಗೆ ಹ್ಯಾಟ್ಸಾಫ್ ಹೇಳಲೇಬೇಕು. ‘ಚೌಕಿದಾರ್’ ಉತ್ತಮ ತಂಡದಿಂದ ಮೂಡಿಬಂದಿದೆ. ಧನ್ಯಾ ಒಬ್ಬ ಅದ್ಭುತ ನಟಿ. ಚಂದ್ರಶೇಖರ್ ಒಳ್ಳೆಯ ಕಥೆಯನ್ನು ಮಾಡಿದ್ದಾರೆ. ಉತ್ತಮ ತಾರಾಬಳಗ ಮತ್ತು ತಂತ್ರಜ್ಞರು ಈ ಚಿತ್ರದಲ್ಲಿದ್ದಾರೆ. ಇದೇ 30ರಂದು ಸಿನಿಮಾ ತೆರೆಗೆ ಬರುತ್ತಿದ್ದು, ನಿಮ್ಮೆಲ್ಲರ ಬೆಂಬಲ ಇರಲಿ” ಎಂದು ಸಾಯಿಕುಮಾರ್ ಮನವಿ ಮಾಡಿದರು.

ಚಿತ್ರದ ತಾರಾಬಳಗ ಮತ್ತು ಕಥಾಹಂದರ: ಚೌಕಿದಾರ್ ಚಿತ್ರದಲ್ಲಿ ಪೃಥ್ವಿ ಅಂಬಾರ್ ನಾಯಕನಾಗಿ, ಧನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಸಾಯಿಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚೈತ್ರದ ಪ್ರೇಮಾಂಜಲಿ ಖ್ಯಾತಿಯ ಶ್ವೇತಾ, ಸುಧಾರಾಣಿ ಕೂಡ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ, ಧರ್ಮ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಚಿತ್ರವು ತಂದೆ ಮತ್ತು ಮಗನ ಬಾಂಧವ್ಯದೊಂದಿಗೆ ಕುಟುಂಬದ ಕಂಟೆಂಟ್ ಅನ್ನು ಒಳಗೊಂಡಿದೆ.
ವಿ.ಎಸ್. ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ಚಿತ್ರವನ್ನು ನಿರ್ಮಿಸಿದ್ದು, ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ ಮತ್ತು ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
‘ಚೌಕಿದಾರ್’ಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಾಥ್: ಇದೇ 30ಕ್ಕೆ ಪೃಥ್ವಿ-ಧನ್ಯಾ ಸಿನಿಮಾ ರಿಲೀಸ್