Wednesday, May 13, 2026
Homeಜಿಲ್ಲಾಸುದ್ದಿಹರಿಹರಪುರ: ಮಲೆನಾಡಿಗರ ಬದುಕು ಉಳಿಸುವ ಜನಜಾಗೃತಿ ಯಾತ್ರೆ: ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮೆಚ್ಚುಗೆ!

ಹರಿಹರಪುರ: ಮಲೆನಾಡಿಗರ ಬದುಕು ಉಳಿಸುವ ಜನಜಾಗೃತಿ ಯಾತ್ರೆ: ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮೆಚ್ಚುಗೆ!

ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಹಮ್ಮಿಕೊಂಡಿದ್ದ ಮಲೆನಾಡಿಗರ ಬದುಕನ್ನು ಉಳಿಸಿ ಜನಜಾಗೃತಿ ಯಾತ್ರೆಯು ದಿವ್ಯಕ್ಷೇತ್ರ ಹರಿಹರಪುರದ ಪರಮಪೂಜ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳಿಂದ ಸಮಾರೋಪಗೊಂಡಿತು.

ಹರಿಹರಪುರ ಮಠದಲ್ಲಿ ನಡೆದ ಸಮಾರೋಪದಲ್ಲಿ, ಪರಮಪೂಜ್ಯರು ನೇಗಿಲು ಹಾಗೂ ನೊಗಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಸ್ತೂರಿ ರಂಗನ್ ವರದಿ, ಸೆಕ್ಷನ್ 4 ಹಾಗೂ 17, ಡೀಮ್ಡ್ ಫಾರೆಸ್ಟ್, ಒತ್ತುವರಿ ತೆರವು, ಸೊಪ್ಪಿನ ಬೆಟ್ಟ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಂತ್ರಸ್ತರು, ಎಲೆ ಚುಕ್ಕಿ ಹಾಗೂ ಹಳದಿ ಎಲೆ ರೋಗ ಸೇರಿದಂತೆ ಮಲೆನಾಡಿನ ರೈತರು ಮತ್ತು ಕಾರ್ಮಿಕರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಸಮಿತಿಯ ರತ್ನಾಕರ್ ಗಡಿಗೇಶ್ವರ ಅವರು ಹೇಳಿದರು.

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಶಂಕರ್, ನಿಕಟಪೂರ್ವ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ನವೀನ್ ಕರಗಣೆ, ಪ್ರಧಾನ ಕಾರ್ಯದರ್ಶಿ ರಂಜಿತ್ ಶೃಂಗೇರಿ, ಕಾರ್ಯದರ್ಶಿ ಅಭಿಷೇಕ್ ಕೊಪ್ಪ, ಪುರುಷೋತ್ತಮ್, ಚಂದ್ರಶೇಖರ್ ರೈ, ಅರವಿಂದ ಸಿಗದಾಳ್, ಮಂಜುನಾಥ್ ತುಪ್ಪೂರು, ಆದರ್ಶ, ಅಶ್ವಿನ್, ಅನಂತ್ ಭಟ್, ದಿಗಂತ್ ಬಿಂಬೈಲ್ ಹಾಗೂ ಇತರರಿದ್ದರು.

ಪರಮಪೂಜ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಮಾತನಾಡಿ ಜನಪ್ರತಿನಿಧಿಗಳು ಈ ಬಗ್ಗೆ ಮನಸ್ಸು ಮಾಡಿ ಪರಿಹಾರ ಕಂಡುಕೊಳ್ಳಬೇಕು ದೀರ್ಘಕಾಲದ ಹೋರಾಟ ಮಾಡಬೇಕು ಇದರಲ್ಲಿ ಕಾನೂನಾತ್ಮಕ ತೊಡಕು ತುಂಬಾ ಇದೆ ಇದು ಸುಲಭವಾಗಿ ಪರಿಷ್ಕಾರ ಆಗುವ ಕೆಲಸವೂ ಅಲ್ಲ, ಯೋಜನಾಬದ್ಧವಾಗಿ ವಿಚಾರ ಇಟ್ಟುಕೊಂಡು ಅತ್ಯಂತ ರಚನಾತ್ಮಕವಾಗಿ ಪರಿಹಾರದ ನಿಟ್ಟಿನಲ್ಲಿ ಹೋರಾಟ ಮಾಡಬೇಕು, ಈ ವಿಚಾರವಾಗಿ ನಮ್ಮ ಆಶೀರ್ವಾದ ಹಾಗೂ ಮಾರ್ಗದರ್ಶನ ಸದಾ ಇರುತ್ತದೆ, ಜನರು ಸಹ ಈ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದರು.

1 ವರ್ಷಗಳ ಕಾಲ ಅಭಿಯಾನ: ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ನಡೆಸಿದ ಜನಜಾಗೃತಿ ಯಾತ್ರೆ ಮುಕ್ತಾಯವಾಗಿದೆ, ಆದರೆ ಜನಜಾಗೃತಿ ಅಭಿಯಾನ ಇನ್ನೂ 1 ವರ್ಷಗಳ ಕಾಲ ನಿರಂತರವಾಗಿ ಮುಂದುವರಿಯುತ್ತದೆ ಎಂದು ಅಭಿಷೇಕ್ ತಿಳಿಸಿದರು.

ಶೃಂಗೇರಿ ಕ್ಷೇತ್ರದ ಎಲ್ಲಾ ಭಾಗಗಳಲ್ಲಿ ಜನರು ಸಕಾರಾತ್ಮಕ ಸ್ಪಂದನೆ ನೀಡಿದ್ದು ಭವಿಷ್ಯದ ಉಳಿವಿಗಾಗಿ ನಾವೆಲ್ಲರೂ ಕೈ ಜೋಡಿಸಿ ಕೆಲಸ ಮಾಡಬೇಕೀದೆ ಎಂದು ನಿಕಟಪೂರ್ವ ಅಧ್ಯಕ್ಷ ನಾಗೇಶ್ ತಿಳಿಸಿದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!