ಮೂಡಿಗೆರೆ :ರಾಜ್ಯ ಸರ್ಕಾರದ ಆದೇಶದಂತೆ ಅಂಗಡಿ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಿದ್ದು, ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಅನ್ಯಭಾಷೆ ನಾಮಫಲಕ ಅಳವಡಿಸಿರುವ ಕುರಿತಾಗಿ ಪಬ್ಲಿಕ್ ಇಂಪ್ಯಾಕ್ಟ್ ವರದಿ ಮಾಡಿದ್ದು ಇದರ ಬೆನ್ನಲ್ಲೇ ತಾಲೂಕಿನಲ್ಲಿ ಅನ್ಯಭಾಷೆ ನಾಮಫಲಕ ತೆರವುಗೊಳಿಸಲು ಹಕೀಮ್ ಅಧ್ಯಕ್ಷತೆಯ ಪಟ್ಟಣದ ಹೆಸರಾಂತ ಕನ್ನಡ ಪರ ಸಂಘಟನೆಯಾದ ವಿಜಯ ಕರ್ನಾಟಕ ರಕ್ಷಣ ವೇದಿಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಹಕೀಮ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಯನ್ನು ಕನ್ನಡಿಗರೇ ಮೂಲೆ ಗುಂಪು ಮಾಡುತ್ತಿದ್ದು ನೋವಿನ ಸಂಗತಿ. ಪಟ್ಟಣದಲ್ಲಿ ಆಂಗ್ಲ ನಾಮ ಫಲಕ ತಾಂಡವ ಆಡುತ್ತಿದ್ದೂ ಪಬ್ಲಿಕ್ ಇಂಪ್ಯಾಕ್ಟ್ ವರದಿ ಮಾಡಿದ್ದನ್ನು ಗಮನಿಸಿದ್ದೇನೆ, ಹಾಗಾಗಿ ಸಂಪೂರ್ಣ ತಾಲ್ಲೂಕಿನ ಎಲ್ಲಾ ಕಡೆ ಆಂಗ್ಲ ನಾಮ ಫಲಕ ತೆರವುಗೊಳಿಸಲು ಮನವಿ ಮಾಡಿದ್ದೂ, ಮನವಿಗೆ ಒಂದು ವಾರಗಳಲ್ಲಿ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು ಒಂದು ಪಕ್ಷದಲ್ಲಿ ತೆರವುಗೊಳಿಸದೆ ಇದ್ದಲ್ಲಿ ಸಂಘಟನೆಯು ಕಾನೂನು ಮುಖೇನ ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು
ಸರ್ಕಾರದ ಆದೇಶದ ಪ್ರಕಾರ ಶೇ.75% ಕನ್ನಡ ಕಡ್ಡಾಯವಾಗಿದ್ದು ಇದನ್ನು ಕೆಲ ಅಂಗಡಿ ಮಾಲೀಕರು ಗಾಳಿಗೆ ತೂರಿ, ಸರ್ಕಾರದ ನಿಯಮ ಪಾಲಿಸದೇ ಬೇಜವಾಬ್ದಾರಿ ತೋರುತ್ತಿದ್ದೂ. ಅಷ್ಟೇ ಅಲ್ಲದೆ ಕನ್ನಡ ಭಾಷೆಗೆ ಅವಮಾನ ಮಾಡುತ್ತಿದ್ದು ಇಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪಟ್ಟಣದಲ್ಲಿ ಕನ್ನಡ ನಾಮ ಫಲಕ ಅಳವಡಿಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ
ಈ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಆಟೋ ಚಾಲಕರ ಸಂಘದ ಅಧ್ಯಕ್ಷ ಅನಿಲ್, ಉಪಾಧ್ಯಕ್ಷ ಅಶೋಕ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು
ವರದಿ :ಪುನೀತ್ ಕಡಿದಾಳು
9483811948
