Thursday, March 26, 2026
Homeಕ್ರೈಮ್ಅಜ್ಜಂಪುರ ಅಂತರಘಟ್ಟಮ್ಮ ಜಾತ್ರೆ ವೇಳೆ ಇನ್ಸ್​ಪೆಕ್ಟರ್​ಗೆ ಗುದ್ದಿದ ಎತ್ತಿನ ಗಾಡಿ: ಸ್ಥಿತಿ ಗಂಭೀರ!

ಅಜ್ಜಂಪುರ ಅಂತರಘಟ್ಟಮ್ಮ ಜಾತ್ರೆ ವೇಳೆ ಇನ್ಸ್​ಪೆಕ್ಟರ್​ಗೆ ಗುದ್ದಿದ ಎತ್ತಿನ ಗಾಡಿ: ಸ್ಥಿತಿ ಗಂಭೀರ!

ಚಿಕ್ಕಮಗಳೂರು: ಅಜ್ಜಂಪುರ ತಾಲೂಕಿನಲ್ಲಿ ನಡೆಯುತ್ತಿರುವ ಅಂತರಘಟ್ಟಮ್ಮ ಜಾತ್ರಾ ಮಹೋತ್ಸವದ ವೇಳೆ ಇನ್ಸ್​ಪೆಕ್ಟರ್​ಗೆ ಎತ್ತಿನ ಗಾಡಿ ಗುದ್ದಿದ ಪರಿಣಾಮ ಅವರು ಗಂಭೀರ ಗಾಯ‌‌ಗೊಂಡಿರುವ ಘಟನೆ ನಡೆದಿದೆ.

ಗಂಭೀರವಾಗಿ ಗಾಯಗೊಂಡ ಸರ್ಕಲ್​ ಇನ್ಸ್​ಪೆಕ್ಟರ್​ ವಿರೇಂದ್ರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಂತರಘಟ್ಟೆಯ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಎತ್ತಿನ ಗಾಡಿಗಳ ಆಗಮನವಾಗಿದ್ದು, ಗಾಡಿಗಳನ್ನು ಓಡಿಸಿಕೊಂಡು ಮೂಲಕ ಭಕ್ತರು ತೆರಳುತ್ತಿದ್ದಾರೆ.

ಎತ್ತಿನ ಗಾಡಿ ಆಗಮಿಸುವಾಗ ರಸ್ತೆಯಲ್ಲಿ ನಿಂತಿದ್ದ ಜನರನ್ನು ಕ್ಲಿಯರ್ ಮಾಡುವ ವೇಳೆ ಏಕಾಏಕಿ ಬಂದ ಎತ್ತಿನ ಗಾಡಿ ಇನ್ಸ್​ಪೆಕ್ಟರ್ ಅವರನ್ನೇ ತುಳಿದುಕೊಂಡು ಹೋಗಿದೆ. ಅಜ್ಜಂಪುರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ಆಗಿ ವಿರೇಂದ್ರ ಅವರು ಕರ್ತವ್ಯ ನಿರ್ವಹಿಸುತ್ತಿದ್ದು, ಅಂತರಘಟ್ಟಮ್ಮ ಜಾತ್ರೆಯ ಬಂದೋಬಸ್ತ್ ನೋಡಿಕೊಳ್ಳುತ್ತಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!