Saturday, February 7, 2026
Homeಜಿಲ್ಲಾಸುದ್ದಿಜಾವಳಿಯ ಸರ್ಕಾರಿ ಶಾಲೆಯಲ್ಲಿ ಶ್ರದ್ಧಾ ಭಕ್ತಿಯ ಸರಸ್ವತಿ ಪೂಜೆ: ಶಾಲಾ ಕಲಾ ವೈಭವ ಕಾರ್ಯಕ್ರಮ

ಜಾವಳಿಯ ಸರ್ಕಾರಿ ಶಾಲೆಯಲ್ಲಿ ಶ್ರದ್ಧಾ ಭಕ್ತಿಯ ಸರಸ್ವತಿ ಪೂಜೆ: ಶಾಲಾ ಕಲಾ ವೈಭವ ಕಾರ್ಯಕ್ರಮ

ಮೂಡಿಗೆರೆ: ತಾಲೂಕಿನ ಹೇಮಾವತಿ ನದಿ ಉಗಮ ಸ್ಥಾನವಾದ ಜಾವಳಿ ಸರ್ಕಾರಿ ಶಾಲೆಯಲ್ಲಿ ಸರಸ್ವತಿ ಪೂಜೆ ಹಾಗೂ ಶಾಲಾ ಕಲಾ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮವನ್ನು ತಾಲ್ಲೂಕು ದಂಡಾಧಿಕಾರಿ ಅಶ್ವಿನಿ ಉದ್ಘಾಟಿಸಿದರು

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಕೇವಲ ಪುಸ್ತಕದಲ್ಲಿನ ವಿದ್ಯೆಯನ್ನು ಕಲಿಯುವುದು ಮಾತ್ರವಲ್ಲ, ಪುಸ್ತಕದಲ್ಲಿನ ವಿದ್ಯೆಯೊಂದಿಗೆ ಸಂಸ್ಕೃತಿ, ಸಂಸ್ಕಾರ ಹಾಗೂ ವಿದ್ಯೆಯನ್ನು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಬೋಧಿಸಿದಾಗ ಆ ವಿದ್ಯಾರ್ಥಿಗಳು ಭಾರತದ ಉತ್ತಮ ನಾಗರಿಕರಾಗಬಲ್ಲರು ಜೊತೆಗೆ ರಾಷ್ಟçಪ್ರೇಮವನ್ನು ಹೊಂದುತ್ತಾರೆ ಎಂದು ಹೇಳಿದರು.

ಜನವರಿ 31 ರಂದು ಶ್ರದ್ಧಾಭಕ್ತಿಯ ಶಾರದ ಪೂಜೆ ಧಾರ್ಮಿಕ ಪರಂಪರೆಯುಳ್ಳ ಸನಾತನ ಧರ್ಮದ ಕುರಿತು ವಿದ್ಯಾರ್ಥಿಗಳು ಅರಿತಾಗ ಪರಂಪರೆಯು ಉಳಿದುಕೊಳ್ಳುವುದು. ದೇವರ ಸ್ತುತಿಯ ಭಜನೆ ಹಾಗೂ ಕುಣಿತ ಭಜನೆ ಎಂಬುದು ಧಾರ್ಮಿಕತೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ ಎಂದರು

ವೃತ್ತಿಪರ ಶಿಕ್ಷಣವನ್ನು ಬೋಧಿಸುವ ಈ ಶಾಲೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಜೀವನವನ್ನು ಕಂಡುಕೊಳ್ಳುವಲ್ಲಿ ಹೆಜ್ಜೆಯಿಟ್ಟಿದೆ ಜೊತೆಗೆ ಜಿಲ್ಲೆಯಲ್ಲಿಯೇ ಗುರುತಿಸುವ ಸಂಸ್ಥೆಯಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ಮಾತನಾಡಿ ಕದಿಯಲಾಗದ ಸಂಪತ್ತು ಎಂದರೆ ಅದು ವಿದ್ಯೆ ಮಾತ್ರ-, ಜೀವನದಲ್ಲಿ ಬದುಕಿರುವವರೆಗೆ ತಾನು ಕಲಿತ ವಿದ್ಯೆ ಅದು ಬದುಕಿಗೆ ದಾರಿ ಮಾಡಿಕೊಡುತ್ತದೆ. ಈ ವಿದ್ಯೆ ಎಂಬ ಸಂಪತ್ತನ್ನು ಉಳಿಸಿಕೊಳ್ಳಬೇಕಾದರೆ ಜ್ಞಾನ ದೇವತೆಯಾಗಿರುವ ಶಾರದಾ ಪೂಜೆಯನ್ನು ನಾವು ಮಾಡಬೇಕಾಗಿದೆ ಎಂದರು

ಶಾರದಾ ಪೂಜೆ ಜ್ಞಾನ, ಕಲೆ ಮತ್ತು ಬುದ್ಧಿವಂತಿಕೆಯ ದೇವತೆಯಾದ ಸರಸ್ವತಿ ದೇವಿಯನ್ನು ಆರಾಧಿಸುವ ವಿಶೇಷ ದಿನವಾಗಿದೆ ಅಕ್ಷರಾಭ್ಯಾಸದ ದಿನದಂದು ಶಾಲಾ-ಕಾಲೇಜುಗಳು ಮತ್ತು ಮನೆಗಳಲ್ಲಿ ಭಕ್ತಿಯಿಂದ ಆಚರಿಸಲಾಗುತ್ತದೆ.

ಪುಸ್ತಕಗಳು, ಮತ್ತು ಕಲಿಕಾ ಪರಿಕರಗಳನ್ನು ಪೂಜಿಸಿ, ಜ್ಞಾನಾರ್ಜನೆಗಾಗಿ ಪ್ರಾರ್ಥಿಸುವುದು ಪ್ರಮುಖ ಉದ್ದೇಶವಾಗಿದೆ ಎಂದರು

SDMCಅಧ್ಯಕ್ಷ ಕೃಷ್ಣ ಮಾತನಾಡಿ, ನಮ್ಮ ಶಾಲೆಯಲ್ಲಿ ಪ್ರತಿಯೊಂದು ಹಬ್ಬಹರಿದಿನಗಳನ್ನು ಆಚರಿಸುವ ಮೂಲಕ ಹಾಗೂ ದೇವಸ್ಥಾನಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವಿದ್ಯೆಯ ಜೊತೆಗೆ ಧಾರ್ಮಿಕತೆಗೆ ಹಾಗೂ ಸಾಂಸ್ಕೃತಿಕತೆಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದೇವೆ ಎಂದರು.

ಶಾಲಾ ಶಿಕ್ಷಕ ವೃಂದದವರ ನೇತೃತ್ವದಲ್ಲಿ ವಿದ್ಯಾರ್ಥಿನಿಯರಿಂದ ಶಾರದಾ ಭಜನೆ ಸಂಕೀರ್ತನೆ ನೆರವೇರಲ್ಪಟ್ಟಿತು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಕುಣಿತ ಭಜನೆ ಜರಗಿತು.

ಈ ಕಾರ್ಯಕ್ರಮದಲ್ಲಿ
ಗ್ರಾಮ ಪಂಚಾಯಿತಿ ಸದಸ್ಯೆ ನಂದಿನಿ, ಬಾಳೂರು ಹೋಬಳಿ ಬಿಜೆಪಿ ಅಧ್ಯಕ್ಷ ಮಂಜುನಾಥ್,ಬಿಜೆಪಿ ಮುಖಂಡ ಪರೀಕ್ಷಿತ್ ಜಾವಳಿ, ಜೆರಾಲ್ಡ್ ಪೆರೇರಾ,ಪಿ.ಎಂ ಘೋಷಣ,ಸಹಾಯಕ ನಿರ್ದೇಶಕ ಹೇಮಂತ್ ಚಂದ್ರ, ಗ್ರಾಮ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದುಗ್ಗಮ್ಮ,ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ್, ವೆಂಕಟೇಶ್ ಮೂರ್ತಿ, ಮುಖ್ಯ ಶಿಕ್ಷಕ ದಿನೇಶ್,ಶಿಕ್ಷಕರಾದ ಆದಿತ್ಯ ಗಂಗಮ್ಮ,ಸ್ವೀಕೃತಿ,ಸ್ರಷ್ಠಿ,ಬಿ.ಎಸ್.
ಸುರೇಶ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಚಂದ್ರಶೇಖರ,ಎಂ.ಟಿ.ಮಂಜುನಾಥ್ ರೆವಿನ್ಯೂ ಇನ್ಸ್ಪೆಕ್ಟರ್ ಬಾಬು,ಸೇರಿದಂತೆ ವಿದ್ಯಾರ್ಥಿಗಳು. ಪೋಷಕರು. ಗ್ರಾಮಸ್ಥರು ಉಪಸ್ಥಿತರಿದ್ದರು

ವರದಿ :ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!