ಮೂಡಿಗೆರೆ : ತಾಲೂಕಿನ ಬಣಕಲ್ ಜೇಸಿ ಭವನದಲ್ಲಿ ನಡೆದ ಜೆಸಿಐ ಬಣಕಲ್ ವಿಸ್ಮಯದ ಪದಗ್ರಹಣ ಸಮಾರಂಭ ಕಾರ್ಯಕ್ರಮ ನಡೆಯಿತು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜೆಸಿಐ ಬಣಕಲ್ ವಿಸ್ಮಯದ ಸ್ಥಾಪಕ ಅಧ್ಯಕ್ಷ ಸುರೇಶ್ ಎಸ್. ಶೆಟ್ಟಿ ಜೆಸಿಐ ಸಂಸ್ಥೆ ದಾನಿಗಳ ಸಹಕಾರ, ಸದಸ್ಯರ ತ್ಯಾಗ ಮತ್ತು ಒಗ್ಗಟ್ಟಿನಿಂದ ಹಂತ ಹಂತವಾಗಿ ಬೆಳೆದಿದೆ. ಈ ಸಹಕಾರದ ಫಲವಾಗಿ ಇಂದು ನೂತನ ಜೇಸಿ ಭವನ ನಿರ್ಮಾಣವಾಗಿದ್ದು, ಭವಿಷ್ಯದಲ್ಲಿಯೂ ಸಂಸ್ಥೆಗೆ ಉತ್ತಮ ದಾರಿಯಿದೆ. ತಾಳ್ಮೆ ಮತ್ತು ಶ್ರಮದೊಂದಿಗೆ ಜೆಸಿಐ ಧ್ವಜವನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಕರೆ ನೀಡಿದರು. ಜೊತೆಗೆ ಜೇಸಿರೇಟ್ ಘಟಕವೂ ಉತ್ತಮ ಕಾರ್ಯ ನಿರ್ವಹಿಸುತ್ತಿರುವುದನ್ನು ಶ್ಲಾಘಿಸಿದರು.

ಈ ಸಮಾರಂಭವನ್ನು ಜೆಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ನವೀನ್ ಲಾಯ್ಡ್ ಮಿಸ್ಕಿತ್ ಉದ್ಘಾಟಿಸಿ ಮಾತನಾಡಿ, ಕಳೆದ 15 ವರ್ಷಗಳಿಂದ ಜೆಸಿಐ ಬಣಕಲ್ ವಿಸ್ಮಯ ಸಂಸ್ಥೆ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ಪರಿಸರ ಜಾಗೃತಿ, ಯುವ ಸಬಲೀಕರಣ ಹಾಗೂ ವ್ಯಕ್ತಿತ್ವ ವಿಕಸನದಂತಹ ಕ್ಷೇತ್ರಗಳಲ್ಲಿ ಮಂಚೂಣಿಯಲ್ಲಿದೆ ಎಂದರು. ಸಂಸ್ಥೆಯು ಆರು ಘಟಕಗಳನ್ನು ಯಶಸ್ವಿಯಾಗಿ ಸ್ಥಾಪಿಸಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಮುಡಿಗೆರೆ ಕೆವಿಕೆಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಕೃಷ್ಣಮೂರ್ತಿ ಮಾತನಾಡಿ, ಕೃಷಿ ಸಂಬಂಧಿತ ವಿಷಯಗಳಲ್ಲಿ ಜೆಸಿಐ ಸಂಸ್ಥೆಗೆ ಅಗತ್ಯವಿರುವ ಯಾವುದೇ ಸಹಾಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ಕೋಳೂರು ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಎಲ್ಲ ಸದಸ್ಯರ ಸಹಕಾರದಿಂದ ಸಂಸ್ಥೆ ಸಮಾಜಮುಖಿ ದಿಕ್ಕಿನಲ್ಲಿ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಂಜಿತ್ ಕನ್ನಗೆರೆ ಮಾತನಾಡಿ,
ಸಾಮಾಜಿಕ ಸೇವಾ ಕಾರ್ಯಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಜೆಸಿಐ ಒಂದು ಅತ್ಯುತ್ತಮ ಹಾಗೂ ಪರಿಣಾಮಕಾರಿ ವೇದಿಕೆಯಾಗಿದೆ ಎಂದರು,
ಸರ್ವರ ಸಹಕಾರದೊಂದಿಗೆ 2026ರಲ್ಲಿ ಯಶಸ್ವಿ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿ ಹೊಸ ಘಟಕಗಳನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ಕೋಳೂರು ಅವರು ನೂತನ ಅಧ್ಯಕ್ಷ ರಂಜಿತ್ ಕನ್ನಗೆರೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಸಮಾರಂಭದಲ್ಲಿ ವಲಯ ಅಧ್ಯಕ್ಷ ಪ್ರಜ್ವಲ್ ಜೈನ್, ಉಪಾಧ್ಯಕ್ಷ ಜಗತ್ ಬಿ.ಎಂ, ಕಾರ್ಯದರ್ಶಿ ಗಗನ್ ಕೋಳೂರು, ನಿಯೋಜಿತ ಕಾರ್ಯದರ್ಶಿ ಸುಜೀತ್ ದೊಡ್ಡನಂದಿ, ಪೂರ್ವಾಧ್ಯಕ್ಷರಾದ ರವಿಶಂಕರ್, ಎಚ್.ಎಂ. ಕೃಷ್ಣೇಗೌಡ, ಡಿ.ಟಿ. ನವೀನ್ ಕುಮಾರ್, ಮದನ್ ಹೆಗಡೆ, ಎಂ.ಆರ್. ಹರ್ಷ, ಶರತ್ ಫಲ್ಗುಣಿ, ಜೇಸಿರೇಟ್‌ಗಳಾದ ರೂಪ, ತೀರ್ಥ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಮಾರಂಭದಲ್ಲಿ ವಲಯ ಅಧ್ಯಕ್ಷ ಪ್ರಜ್ವಲ್ ಜೈನ್ ಅವರನ್ನು ಗೌರವಿಸಲಾಯಿತು.
ವರದಿ :ಪುನೀತ್ ಕಡಿದಾಳು
9483811948
