Wednesday, February 11, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಮುಳ್ಳಯ್ಯನಗಿರಿ ಪ್ರವಾಸಿಗರ ಗಮನಕ್ಕೆ: ವಾಹನ ಸಂಚಾರಿಸಲು ತಾತ್ಕಾಲಿಕ ನಿರ್ಬಂಧ!

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಪ್ರವಾಸಿಗರ ಗಮನಕ್ಕೆ: ವಾಹನ ಸಂಚಾರಿಸಲು ತಾತ್ಕಾಲಿಕ ನಿರ್ಬಂಧ!

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ದೇವಸ್ಥಾನದ ಕಾಮಗಾರಿ ನಡೆಯುತ್ತಿರುವುದರಿಂದ , ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದಲ್ಲಿ ಪ್ರವಾಸಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿಲಾಗಿದೆ.

ಹೌದು .. ದೇವಸ್ಥಾನಕ್ಕೆ ಅಗತ್ಯವಿರುವ ವಸ್ತುಗಳನ್ನು ಭಾರವಾದ ವಾಹನಗಳನ್ನು ಈ ರಸ್ತೆ ಮೂಲಕ ಸಾಗಿಸುತ್ತಿರುವುದರಿಂದ ರಸ್ಥೆ ಕಿರಿದಾಗಿರುತ್ತದೆ ಹಾಗಾಗಿ ಸುರಕ್ಷತೆಯ ದೃಷ್ಠಿಯಿಂದ ಈ ಕ್ರಮವನ್ನು ಅನುಸರಿಸಲಾಗಿದೆ.

ಫೆ.7ರಿಂದ ಮಾರ್ಚ್‌ 5ರವರೆಗೆ ಪ್ರವಾಸಿ ಜೀಪ್‌ ಗಳು ಹಾಗೂ ಸಾರ್ವಜನಿಕ ವಾಹನಗಳ ಓಡಾಟವನ್ನು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನಿಷೇಧಿಸಲಾಗಿದೆ. ಆದ್ದರಿಂದ ಪ್ರವಾಸಿಗರು ಮುಳ್ಳಯ್ಯನಗಿರಿಯಿಂದ ಸೀತಾಳಯ್ಯನಗಿರಿಗೆ ಹೋಗುವವರು ಸಹಕರಿಸಬೇಕೆಂದು ಜಿಲ್ಲಾಡಳಿತದ ಮೂಲಕ ಮನವಿಯನ್ನು ಪ್ರಕಟಣೆ ಮೂಲಕ ಹೊರಡಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!