Saturday, August 15, 2026
Homeಆರೋಗ್ಯಶೃಂಗೇರಿ: ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಆಂತರಿಕ ತನಿಖಾ ತಂಡ ಭೇಟಿ, ಪರಿಶೀಲನೆ!

ಶೃಂಗೇರಿ: ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಆಂತರಿಕ ತನಿಖಾ ತಂಡ ಭೇಟಿ, ಪರಿಶೀಲನೆ!

Telegram Group
Join Now

ಶೃಂಗೇರಿ: ತಾಲೂಕು ಆಸ್ಪತ್ರೆಯ ಡಿ ಗ್ರೂಪ್ ಮಹಿಳಾ ನೌಕರರೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಆಂತರಿಕ ತನಿಖಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.

ಹೌದು .. ಡಿ ಗ್ರೂಪ್ ಮಹಿಳಾ ನೌಕರರೊಬ್ಬರು ಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಶ್ರೀನಿವಾಸ್‌ರವರಿಂದ ಮಾನಸಿಕ ಕಿರುಕುಳ ನೀಡುತ್ದೇತಿದ್ದು ಹಾಗೆ ಅರ್ಜಿದಾರರುಗಳೊಂದಿಗೆ ಆಶ್ಲೀಲವಾಗಿ ಏಕವಚನದಲ್ಲಿ ನಿಂದಿಸುತ್ತಿರುವುದರ ಬಗ್ಗೆ ಸ್ವವಿವರವಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬರೆಯಲಾಗಿತ್ತು.

ಈ ಸಂಬಂಧ ತನಿಖೆ ನಡೆಸಿ ಕ್ರಮ ವಹಿಸುವಂತೆ ಜಿಲ್ಲಾ ಅಂತರಿಕ ಸಮಿತಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆಂತರಿಕ ಸಮಿತಿ `ಚಿಕ್ಕಮಗಳೂರು ತಂಡದಿಂದ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಲಾಗಿದೆ.

ಸಮಿತಿಯ ಜಂಟಿ ಅಧ್ಯಕ್ಷರಾಗಿ ಡಾ.ಸೀಮಾ.ಎಸ್. ಹಾಗೂ ಡಾ. ಎನ್.ಆರ್. ಚೇತನಾ ಇವರ ನೇತೃತ್ವದ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು ತದಾನಂತರ ಸತ್ಯಸತ್ಯತೆ ಹೊರಬರಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments