ಮೂಡಿಗೆರೆ:ಹೇಮಾವತಿ ಗೂಡ್ಸ್ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಮೊದಲನೇ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಹ್ಯಾಂಡ್ ಪೋಸ್ಟ್ ಹೇಮಾವತಿ ಗೂಡ್ಸ್ ಚಾಲಕರು ಮತ್ತು ಮಾಲಿಕರ ಸಂಘದ ಅಧ್ಯಕ್ಷ ದಯಾನಂದ್ ಗೌಡ ಕೆಸವಳಲು ಧ್ವಜಾರೋಹಣ ನೆರವೇರಿಸಿದರು..
ಬಳಿಕ ಮಾತನಾಡಿದ ಅವರು, ವೀರ ಹೋರಾಟಗಾರರ ಬಲಿದಾನದಿಂದ ನಾವುಗಳು ಸ್ವತಂತ್ರ ಪಡೆದಿದ್ದು ಅನೇಕ ಮಹಾನಾಯಕರನ್ನ ಸ್ಮರಿಸಿಕೊಂಡು ಬದುಕಬೇಕು ಎಂದರು. ಹಾಗೆ 80ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಆಚರಿಸುವ ಸಂಭ್ರಮದಲ್ಲಿರುವ ನಾವು . 1947ರ ಆಗಸ್ಟ್ 15ರಂದು ಭಾರತವು ಬ್ರಿಟಿಷರಿಂದ ಮುಕ್ತಿ ಪಡೆದು ಸ್ವತಂತ್ರ ದೇಶವಾಗಿ ಹೊರಹೊಮ್ಮಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನಾಂಕದ ಹಿಂದೆ ಒಂದು ಇತಿಹಾಸ ಇದೆ ಇದರ ಮಹತ್ವವನ್ನು ಯುವ ಸಮೂಹ ಅರಿತು ಬದುಕಬೇಕು ಎಂದರು
ಧ್ವಜರೋಹಣ ಸಂದರ್ಭದಲ್ಲಿ ಸಂಘಟನೆಯ ಸದಸ್ಯರಾದ ನಾಗೇಶ್ ಗೌಡ್ರು ಕಡಿದಾಳ್,
ಸುಂದರೇಶ್ ಕೆಸವಳಲು, ಅಕ್ರಂಪಾಶ ಬಿದರಹಳ್ಳಿ, ಅನಿಲ್ ಜೈನುಬೈಲು , ಮಹಾಂತೇಶ್ ಕಡಿದಾಳು, ಅಭಿ ಬೆಟ್ಟಿಗೆರೆ, ಕಾರ್ಯದರ್ಶಿ ಶರತ್ ಹ್ಯಾರಗುಡ್ಡೆ,ಸೋಮೇಗೌಡ ಹಂತೂರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು
