ಕಾಫಿನಾಡು ಚಿಕ್ಕಮಗಳೂರಲ್ಲಿ ಸೌದೆ ಒಲೆಯಲ್ಲಿ ಟೀ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರತಿಭಟಿಸಿದೆ. ನಗರದ ಆಜಾದ್ ಪಾರ್ಕ್ನಲ್ಲಿ ಪ್ರತಿಭಟಿಸಿದ ಕಾಂಗ್ರೆಸ್ ಅನಿಲ ಸಮಸ್ಯೆ ಬಗೆಹರಿಸುವಂತೆ ಕೇಂದ್ರ ಸರ್ಕಾರವನ್ನ ಒತ್ತಾಯಿಸಿದೆ.

ಜಿಲ್ಲೆಯಾದ್ಯಂತ ಸಿಲಿಂಡರ್ ಸಮಸ್ಯೆ ತಲೆದೋರಿದ್ದು, ಪರಿಸ್ಥಿತಿಯನ್ನ ನಿಭಾಯಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಅಂತಾ ಕೈ ನಾಯಕರುಗಳು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರನ್ನ ದಾರಿಗೆ ತಂದು ನಿಲ್ಲಿಸಿದ ನರೇಂದ್ರ ಮೋದಿ ಸರ್ಕಾರಕ್ಕೆ ಧಿಕ್ಕಾರ ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಕೈ ನಾಯಕರು ವಾಗ್ದಾಳಿ ನಡೆಸಿದರು
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ಗ್ಯಾಸ್, ಪೆಟ್ರೋಲ್, ಡಿಸೇಲ್ ಮತ್ತಿತರೆ ಸೌಲಭ್ಯಗಳನ್ನು ನೀಡುವುದು ಕೇಂದ್ರದ ಹೊಣೆಗಾರಿಕೆ. ಆದರೆ, ಯುದ್ದದ ನೆಪದಲ್ಲಿ ಈಗ ಅಡುಗೆ ಅನಿಲವೇ ಸಿಗದಂತಾಗಿದೆ. ನಮ್ಮ ರಾಜ್ಯಕ್ಕೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ತಾಳಿರುವ ಎನ್‌ಡಿಎ ಸರಕಾರವನ್ನು ಕಿತ್ತೆಸೆಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಸಿ.ಶಿವಾನಂದ ಸ್ವಾಮಿ, ಪ್ರವೀಣ್ ಬೆಟ್ಟಗೆರೆ, ಮಲ್ಲೇಶಸ್ವಾಮಿ, ಹಿರೇಮಗಳೂರು ರಾಮಚಂದ್ರ, ತನೋಜ್ ನಾಯ್ಡು. ಸಿಲ್ವಸ್ಟರ್, ಎಂ.ಡಿ.ರಮೇಶ್, ಪ್ರಸಾದ್ ಅಮೀನ್, ಹಿರೇಗೌಜ ಶಿವಕುಮಾರ್, ಸಂತೋಷ್ ಲಕ್ಯಾ, ಶ್ರೀಕಾಂತ್, ಪ್ರಕಾಶ್ ರೈ, ರೂಬೆನ್ ಮೊಸಸ್, ಲಾಕೇಶ್, ಪರಮೇಶ್ ರಾಜ್ ಅರಸ್, ರಾಜು, ಮಂಜುಳಾಲಕ್ಷ್ಮಣ್, ಕುಸುಮಭರತ್ ಮತ್ತಿತರರಿದ್ದರು.
