Wednesday, August 12, 2026
Homeಇತರೆಉಡುಪಿ: ಶ್ರೀನಿವಾಸ್ ಪೂಜಾರಿಗೆ ಹಿಂದಿ, ಇಂಗ್ಲಿಷ್ ಬರಲ್ಲ ಅಂತ ನಾನು ಹೇಳಿಲ್ಲ:  ಅವರ ಪಕ್ಷದವರೇ ಹಾಗೇ...

ಉಡುಪಿ: ಶ್ರೀನಿವಾಸ್ ಪೂಜಾರಿಗೆ ಹಿಂದಿ, ಇಂಗ್ಲಿಷ್ ಬರಲ್ಲ ಅಂತ ನಾನು ಹೇಳಿಲ್ಲ:  ಅವರ ಪಕ್ಷದವರೇ ಹಾಗೇ ಹೇಳಿರಬಹುದು – ಜಯಪ್ರಕಾಶ್ ಹೆಗ್ಡೆ

Telegram Group
Join Now

ಉಡುಪಿ: ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ನಾನು ಯಾರ ಬಗ್ಗೆಯೂ ಕೀಳಾಗಿ ಮಾತಾಡಿಲ್ಲ. ಚುನಾವಣೆಯಲ್ಲಿ ಸಹ ನನ್ನ ಎದುರಾಳಿಯ ಬಗ್ಗೆ ಯಾವತ್ತೂ ಟೀಕೆ ಮಾಡಿ ಮಾತಾಡಿಲ್ಲ. ಆ ತರಹ ಟೀಕೆ ಮಾಡುವುದು ತಪ್ಪು ಎಂಬುದು ನನ್ನ ಅಭಿಪ್ರಾಯ ಎಂದು ಉಡುಪಿ ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ಹಿಂದಿ, ಇಂಗ್ಲೀಷ್ ಬರಲ್ಲ ಎಂಬ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ರು. ನಾನು ಎಲ್ಲೂ ಆ ರೀತಿ ಹೇಳಿಲ್ಲ. ಅವರೇ ನಾನು ಆ ರೀತಿ ಹೇಳಿದ್ದೇನೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರ ಪಕ್ಷದವರೇ ಹಾಗೇ ಕೀಳಾಗಿ ಮಾತನಾಡಿರಬಹುದು. ನಾನು 1994 ರಲ್ಲೇ ಶಾಸಕನಾಗಿ ಅಸೆಂಬ್ಲಿಯಲ್ಲಿ ಮಾತನಾಡುತ್ತಿದ್ದೇನೆ, ನನ್ನ ಯಾವ‌ ಮಾತನ್ನೂ ಕಡತದಿಂದ ತೆಗೆದ ಉದಾಹರಣೆಯೇ ಇಲ್ಲ. ನಾನು ಅಂದಿನಿಂದ ಇಂದಿನವರೆಗೂ ಯಾರ ಬಗ್ಗೆಯೂ ಕೀಳಾಗಿ ಮಾತಾಡಿಲ್ಲ. ಮಾತನಾಡೋದು ಇಲ್ಲ ಎಂದು ಸ್ಪಷ್ಟಪಡಿಸಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments