ಚಿಕ್ಕಮಗಳೂರು : ಕಾಫಿನಾಡಿನ ಕೋರ್ಟ್ ಹಿಂಬಾಗದಲ್ಲಿರುವ ಚುರ್ಚೆಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ತೀವ್ರ ಬಿಸಿಲ ಧಗೆಯಿಂದ 15 ಎಕರೆಗೂ ಅಧಿಕ ಮೀಸಲು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.
ಘಟನಾ ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳ ಭೇಟಿ ನೀಡಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು ಒಳಗಡೆ ವಾಹನ ಹೋಗದೇ ಇರುವ ಕಾರಣ ಮರದ ಟೊಂಗೆಗಳಿಂದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ಪರದಾಡಿದರು.

ಚಿಕ್ಕಮಗಳೂರಿನ ಹೊಸ ಕೋರ್ಟ್ ಹಿಂಭಾಗದ ನ್ಯಾಯಗಿರಿ ಮೀಸಲು ಅರಣ್ಯ ಪ್ರದೇಶದಾಗಿದ್ದು ಬೆಂಕಿ ವ್ಯಾಫಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

