ಜಯಪುರ : ಅಗಲಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಹಳ್ಳಿ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯ ರಾಮೋತ್ಸವ ದಿನಾಂಕ 19 ರಿಂದ ಪ್ರಾರಂಭವಾಗಿದ್ದು, ದಿನಾಂಕ 31ರವರೆಗೆ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಹಿರೇಹಳ್ಳಿ ರಾಮಚಂದ್ರ ಅವರು ತಿಳಿಸಿದರು.
ದಿನಾಂಕ 29ನೇ ಭಾನುವಾರ ಸಂಜೆ ಸಾಮೂಹಿಕ ದೀಪಾರಾಧನೆ ಹಾಗೂ ಸಾಮೂಹಿಕ ಸತ್ಯನಾರಾಯಣ ವ್ರತ ಮತ್ತು ಸಾಮೂಹಿಕ ಸತ್ಯ ಗಣಪತಿ ವ್ರತ ನಡೆಯಲಿದೆ. ರಾಮೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಿನಾಂಕ 30ನೇ ಸೋಮವಾರ ಸಂಜೆ 7:00 ಗಂಟೆಗೆ ಗುತ್ತತ್ಯಮ್ಮ ಪ್ರಸಾದಿತ ಯಕ್ಷಗಾನ ಮಂಡಳಿ ಗುತ್ತಿಯಡೆಹಳ್ಳಿ ಇವರಿಂದ ಪೌರಾಣಿಕ ಯಕ್ಷಗಾನವು ನಡೆಯಲಿದೆ.
ದಿನಾಂಕ 31ನೇ ಸೋಮವಾರ ಹನುಮೋತ್ಸವ ಹಾಗೂ ಸಂಜೆ ಸ್ಥಳೀಯರಿಂದ ಭಜನಾ ಕಾರ್ಯಕ್ರಮಗಳು ನಡೆಯಲಿದ್ದು ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ವಾಸುದೇವ್ ಸಮಿತಿ ಸದಸ್ಯರಾದ ಅಂಸುಮಾನ್ ಇದ್ದರು.
