Sunday, March 29, 2026
Homeಕ್ರೈಮ್ಕಳಸ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಪ್ರವಾಸಿ ಕಾರು: ಕೂದಲೆಳೆ ಅಂತರದಲ್ಲಿ ಪಾರು!

ಕಳಸ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಪ್ರವಾಸಿ ಕಾರು: ಕೂದಲೆಳೆ ಅಂತರದಲ್ಲಿ ಪಾರು!

ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಕಾರೊಂದು ಕಂದಕಕ್ಕೆ ಬಿದ್ದ ಘಟನೆ ಕಳಸ ತಾಲೂಕಿನ ಬಾಳೇಖಾನ್ ಬಳಿ ನಡೆದಿದೆ. ತಪ್ಪಿದ ಭಾರೀ ಅನಾಹುತ, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಹೌದು .. ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ 2 ಪಲ್ಟಿಯಾಗಿ ಮಕಾಡೆ ಮಲಗಿದ್ದು ಅದರಷ್ಟವಶಾತ್‌ ಎಲ್ಲರೂ ಸೇಫ್‌ ಆಗಿದ್ದಾರೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ಹೊರನಾಡಿಗೆ ತೆರಳುತ್ತಿದ್ದ ಪ್ರವಾಸಿ ಕಾರು ಹೀಗಾಗಿ ಕಾರಿನಲ್ಲಿದ್ದ ಪ್ರವಾಸಿಗರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ರೇನ್ ಮೂಲಕ ಕಂದಕಕ್ಕೆ ಬಿದ್ದ ಕಾರನ್ನು ಪೊಲೀಸರು ಮೇಲಕ್ಕೆತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!