Monday, March 30, 2026
Homeಕ್ರೈಮ್ಬೇಲೂರು ತಾಲೂಕಿನಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆಗಳ ಗುಂಪು: ನೆಮ್ಮದಿಯಾಗಿದ್ದ ಗ್ರಾಮಸ್ಥರಲ್ಲಿ ಆತಂಕದ ಚಿಂತೆ!

ಬೇಲೂರು ತಾಲೂಕಿನಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆಗಳ ಗುಂಪು: ನೆಮ್ಮದಿಯಾಗಿದ್ದ ಗ್ರಾಮಸ್ಥರಲ್ಲಿ ಆತಂಕದ ಚಿಂತೆ!

ಹಾಸನ: ಬೇಲೂರು ತಾಲೂಕಿನ ಕೊಗೋಡು ಸಮೀಪದ ಗ್ರಾಮಗಳಲ್ಲಿ ಮತ್ತೆ ಗಜಪಡೆಗಳ ಹಾವಳಿ ಪ್ರಾರಂಭವಾಗಿದ್ದು, ಕೆಲವು ತಿಂಗಳುಗಳಿಂದ ನೆಮ್ಮದಿಯಾಗಿದ್ದ ಗ್ರಾಮಸ್ಥರು ಇದೀಗ ಆತಂಕದಲ್ಲಿ ಜೀವನ ನಡೆಸುವಂತಾ ಗಿದೆ. ದಿನದಿಂದ ದಿನಕ್ಕೆ ಆನೆಗಳ ಸಂಚಾರ ಹೆಚ್ಚುತ್ತಿರುವುದರಿಂದ ಹಳ್ಳಿಗಳಲ್ಲಿ ಭಯದ ವಾತಾವರಣ ನಿರ್ಮಾಣ ವಾಗಿದೆ.


ಕಳೆದ ಕೆಲವು ತಿಂಗಳುಗಳಿಂದ ಆನೆಗಳ ಯಾವುದೇ ಸುಳಿವು ಕಾಣಿಸದ ಹಿನ್ನೆಲೆಯಲ್ಲಿ ರೈತರು ಹಾಗೂ ಗ್ರಾಮ ಸ್ಥರು ತಮ್ಮ ದೈನಂದಿನ ಚಟುವಟಿಕೆಗಳನ್ನು ಭಯವಿಲ್ಲದೆ ನಡೆಸು ತ್ತಿದ್ದರು. ಆದರೆ ಇದೀಗ ಆನೆಗಳು ಮತ್ತೆ ನಾಡಿನತ್ತ ಮುಖಮಾಡಿದ್ದು, ವಿಶೇಷ ವಾಗಿ ಕಾಫಿ ತೋಟಗಳು ಹಾಗೂ ಗ್ರಾಮದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಎಗ್ಗಿಲ್ಲದಂತೆ ಸಂಚರಿ ಸುತ್ತಿವೆ.

ಶಾಲಾ ವಿದ್ಯಾರ್ಥಿ ಗಳು ಪರೀಕ್ಷೆಗಳ ನಂತರ ಊರಿಗೆ ತೆರಳಿ ರಜೆ ಮುಗಿದ ಮೇಲೆ ಮತ್ತೆ ಶಾಲೆಗೆ ಬರುವಂತೆ, ಕೆಲ ಕಾಲ ಕಾಣೆಯಾಗಿದ್ದ ಆನೆಗಳು ಇದೀಗ ಪುನಃ ಹಳ್ಳಿಗಳತ್ತ ಮರಳಿರು ವುದು ಗಮನಾರ್ಹ ವಾಗಿದೆ. ಈ ಅನಿರೀಕ್ಷಿತ ಮರಳುವಿಕೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿ ದ್ದಾರೆ.ಕೊಗೋಡು ಸಮೀ ಪದ ಕಾಫಿ ಎಸ್ಟೇಟ್‌ನಲ್ಲಿ ಸುಮಾರು ೧೬ ಆನೆಗಳ ದೊಡ್ಡ ಹಿಂಡು ಕಂಡು ಬಂದಿದ್ದು, ಅವು ದಿನದ ಹೊತ್ತಲ್ಲಿಯೇ ತೋಟ ಗಳಲ್ಲಿ ಸುಳಿದಾಡುತ್ತಿವೆ. “ಇಲ್ಲೇ ನೆಲೆಸಿದ್ದೇವೆ” ಎನ್ನುವಂತೆ ಅವುಗಳ ವರ್ತನೆ ಕಂಡು ಬರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ಕಾಫಿ ಬೆಳೆಗಳಿಗೆ ಹಾನಿ ಉಂಟಾಗುವ ಭೀತಿ ಹೆಚ್ಚಾಗಿದೆ.

ರಾತ್ರಿ ಸಮಯದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದ್ದು, ಆನೆಗಳು ಹಳ್ಳಿಯ ಸಮೀಪಕ್ಕೂ ಬರುತ್ತಿರುವುದರಿಂದ ಜನರು ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ. ರೈತರು ತೋಟಗಳಿಗೆ ಹೋಗಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಕ್ಕಳ ಹಾಗೂ ವೃದ್ಧರ ಸುರಕ್ಷತೆ ಬಗ್ಗೆ ಕುಟುಂಬಗಳು ಆತಂಕ ವ್ಯಕ್ತಪಡಿಸುತ್ತಿವೆ.
ಗ್ರಾಮಸ್ಥರು ಅರಣ್ಯ ಇಲಾಖೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿ ಸಿದ್ದು, ಆನೆಗಳನ್ನು ಕಾಡಿ ನೊಳಗೆ ಹಿಮ್ಮೆಟ್ಟಿಸಿ ಜನರಿಗೆ ಭದ್ರತೆ ಒದಗಿಸು ವಂತೆ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!