Thursday, April 9, 2026
Homeಕ್ರೈಮ್ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಜೊತೆ ಚೆಲ್ಲಾಟವಾಡ್ತಿದೆಯಾ ಕುವೆಂಪು ವಿವಿ: ಅಕ್ರಮ, ಬೇಜವಾಬ್ದಾರಿ ನಡವಳಿಕೆ ಖಂಡಿಸಿ ಬೀದಿಗಳಿದ...

ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಜೊತೆ ಚೆಲ್ಲಾಟವಾಡ್ತಿದೆಯಾ ಕುವೆಂಪು ವಿವಿ: ಅಕ್ರಮ, ಬೇಜವಾಬ್ದಾರಿ ನಡವಳಿಕೆ ಖಂಡಿಸಿ ಬೀದಿಗಳಿದ ಎಬಿವಿಪಿ

ಶೃಂಗೇರಿ: ರಾಜ್ಯದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ಒಂದಾದ ಮಲೆನಾಡಿನ ಹೆಮ್ಮೆಯ ಕುವೆಂಪು ವಿಶ್ವವಿದ್ಯಾಲಯ ಈಗ ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ಈಗಾಗಲೇ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಸರ್ಕಾರಿ ಬಸ್ ಇಲ್ಲ ಬಂದರೂ ಆ ಬಸ್‌ಗಳು ನಿಲುಗಡೆ ಇಲ್ಲದೇ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ, ಈಗ ಇದರೊಂದಿಗೆ ಕುವೆಂಪು ವಿಶ್ವವಿದ್ಯಾಲಯ ಕೂಡ ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟವಾಡುತ್ತಿದೆ.

ವಿದ್ಯಾರ್ಥಿನಿ ಪರೀಕ್ಷೆ ಬರೆದು ಒಂದು ಸೆಮ್ ಆಗಿದೆ ಫಲಿತಾಂಶ ಬಂದಿದೆ., ಆದರೆ 6 ಅಂಕ ಬಂದಿರುವುದಕ್ಕೆ ಮರುಮೌಲ್ಯಮಾಪನಕ್ಕೆ ಒಂದು ಸೆಮಿಸ್ಟರ್ ಕಳೆದರೂ ವಿವಿಯಿಂದ ಯಾವ ಪರಿಹಾರವು ಇಲ್ಲ.ಈಗ ವಿದ್ಯಾರ್ಥಿನಿ ಕೊನೆ ಸೆಮಿಸ್ಟರ್‌ನಲ್ಲಿದ್ದಾಳೆ. ಹಿಂದಿನ ಸೆಮಿಸ್ಟರ್ ಅಂಕ ಪಟ್ಟಿ ಕೂಡ ಇನ್ನೂ ವಿದ್ಯಾರ್ಥಿಗಳಿಗೆ ಸಿಕ್ಕಿಲ್ಲ, ಕಳೆದ ಸೆಮಿಸ್ಟರ್ ಫಲಿತಾಂಶ ಕೂಡ ಇನ್ನೂ ಬಂದಿಲ್ಲ.

ಪರೀಕ್ಷೆಗಳು ಮುಗಿದು ತಿಂಗಳುಗಳೇ ಕಳೆದರು ಇನ್ನೂ ಅಂಕಪಟ್ಟಿ ವಿದ್ಯಾರ್ಥಿಗಳ ಕೈ ಸೇರಿಲ್ಲ, ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದರೂ 60 ಅಂಕಗಳಿಗೆ ಕೇವಲ 6 ಅಂಕ ನೀಡಿದ್ದು ಇದನ್ನು ವಿದ್ಯಾರ್ಥಿ ಹಲವು ಬಾರಿ ಮನವಿ ಮಾಡಿ ಪ್ರಶ್ನಿಸಿ,ತಾನೇ ಖುದ್ದಾಗಿ ವಿವಿಗೆ ಭೇಟಿ ನೀಡಿದರೂ ಕೂಡ ಸಮಸ್ಯೆ ಬಗೆಹರಿಯದೆ ಒಂದು ಸೆಮಿಸ್ಟರ್ ಕಳೆದರೂ ಪರೀಶೀಲಿಸದೇ ಇರುವುದು ವಿದ್ಯಾರ್ಥಿನಿಯ ಚಿಂತೆಗೆ ಕಾರಣವಾಗಿದೆ. ಮಗಳ ಶೈಕ್ಷಣಿಕ ಜೀವನದ ಕನಸು ಕಂಡಿದ್ದ ಪೋಷಕರು ಕೂಡ ಚಿಂತೆಗೀಡಾಗಿದ್ದಾರೆ.

ಈ ಎಲ್ಲಾ ವಿಷಯಗಳನ್ನಿಟ್ಟುಕೊಂಡು ಹಾಗೂ ವಿವಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ವಿರೋಧಿಸಿ ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಸಿ ಶೃಂಗೇರಿ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.

ವರದಿ: ವಿಠಲ್‌ ಶೃಂಗೇರಿ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!