ಮೂಡಿಗೆರೆ: ಸೌದಾಮಿನಿ ಯೂಟ್ಯೂಬ್ ಸುದ್ದಿ ವಾಹಿನಿಯನ್ನು ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಾಜಿ ಸಚಿವ ಬಿ. ಬಿ. ನಿಂಗಯ್ಯ ಸೇರಿದಂತೆ ಗಣ್ಯರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಕನ್ನಡ ಮಾಧ್ಯಮ ಲೋಕದಲ್ಲಿ ಹೊಸ ಸುದ್ದಿ ವಾಹಿನಿಗಳ ಲೋಕಾರ್ಪಣೆ ನಿರಂತರ ಪ್ರಕ್ರಿಯೆಯಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಆನೇಕ ಯೂಟ್ಯೂಬ್ ಸುದ್ದಿ ವಾಹಿನಿಗಳು ಜನಪ್ರಿಯತೆ ಗಳಿಸುತ್ತಿದೆ. ಇಂತಹ ದಿನಗಳಲ್ಲಿ ನಮ್ಮ ಪತ್ರಕರ್ತ ಉದಯ್ ಅವರು ಇಂತಹ ಪ್ರಯತ್ನಕ್ಕೆ ಕೈಹಾಕಿರುವುದು ನಿಜಕ್ಕೂ ಶ್ಲಾಘನಿಯ ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ ಸೌದಾಮಿನಿ ಸುದ್ದಿ ವಾಹಿನಿಯು ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಲೆಂದು ಶುಭ ಹಾರೈಸಿದರು.

ಬಿಜೆಪಿ ಮುಖಂಡ ರಘು ಜನ್ನಾಪುರ ಮಾತನಾಡಿ, ಇಂದು ಫೇಸ್ಬುಕ್, ಯೂಟ್ಯೂಬ್, ಟ್ವಿಟರ್, ಇನ್ಟಾಗ್ರಾಮ್ ಗಳಿಗೆ ಜನರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಸಾಮಾಜಿಕ ಜಾಲಾ ತಾಣದ ಪ್ಲಾಟ್ಫಾರ್ಮ್ಗಳ ನಮ್ಮೂರ ಚಾನಲ್ ರಾಜ್ಯ, ದೇಶ, ವಿದೇಶ, ಅಂತರರಾಷ್ಟೀಯ ಮಟ್ಟದಲ್ಲಿ ಎತ್ತರಕ್ಕೆ ಬೆಳೆಯಲೆಂದು ಹಾರೈಸಿದರು
ಉದ್ಯಮಿ ಮಂಚೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲಾ ತಾಣದ ಮೂಲಕ ಸ್ಪೀಡ್ ಸುದ್ದಿಗಳು ತಲುಪುತ್ತಿವೆ. ಇಂತಹ ಹೊತ್ತಲ್ಲಿ ಸಮಾಜದ ಅಂಕು ಡೊಂಕು ತಿದ್ದುವ ಪತ್ರಕರ್ತರು ಯೂ ಟ್ಯೂಬ್ ಚಾನಲ್ ಮಾಡುವುದರಿಂದ ಸ್ಥಳೀಯ ಸಮಸ್ಯೆಗಳನ್ನು ಎತ್ತಿ ಹಿಡಿಯಲು ಸಹಕಾರಿಯಾಗುತ್ತದೆ. ಇಂತಹ ಪ್ರಯತ್ನ ಶ್ಲಾಘನೀಯ. ಮೂಡಿಗರೆ ಚಾನಲ್ ಎತ್ತರಕ್ಕೆ ಬೆಳೆಯಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿಖಿಲ್ ಚಕ್ರವರ್ತಿ, ಪತ್ರಕರ್ತರಾದ ಆನಂದ್ ಕಣಚೂರು, ಪುನೀತ್ ಕಡಿದಾಳು, ಸೋಮಶೇಖರ್, ನಯನಾ ತಳವಾರ, ಶಾರದಾ, ಪ್ರಸನ್ನ ತಳವಾರ, ಅಕ್ಷತ್ ಪಟ್ಟದೂರು, ಸಂತೋಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
