Friday, July 31, 2026
Homeಕ್ರೈಮ್ಬೇಲೂರು: ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡ ಕಾಡಾನೆ: ಅಧಿಕಾರಿಗಳು, ಸಾರ್ವಜನಿಕರು ಪ್ರಾಣಾಪಾಯದಿಂದ ಪಾರು

ಬೇಲೂರು: ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡ ಕಾಡಾನೆ: ಅಧಿಕಾರಿಗಳು, ಸಾರ್ವಜನಿಕರು ಪ್ರಾಣಾಪಾಯದಿಂದ ಪಾರು

Telegram Group
Join Now

ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಕಣಗುಪ್ಪೆ ಗ್ರಾಮದಲ್ಲಿ ಕಳೆದ ಭಾನುವಾರ ರಾಜಶೆಟ್ಟಿ ಎಂಬುವವರ ಮೇಲೆ ಕಾಡಾನೆ ದಾಳಿ ನಡೆಸಿ ಬಲಿ ಪಡೆದ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಕಾಡಾನೆಯನ್ನು ಸೆರೆ ಹಿಡಿಯಲು ವಿಶೇಷ ಕಾರ್ಯಚರಣೆ ನಡೆಸಿದ ಹಿನ್ನೆಲೆ ಯಶಸ್ವಿಯಾಗಿ ಕಾಡಾನೆಯನ್ನು ಸೆರೆ ಹಿಡಿದಿದ್ದಾರೆ.

ಆದರೆ ಸೆರೆ ಸಿಕ್ಕ ಕಾಡಾನೆಗೆ ಅರವಳಿಕೆ ನೀಡಿದ ನಂತರ ಮುಂದಿನ ಅಗತ್ಯ ಕ್ರಮಕ್ಕಾಗಿ ಹಗ್ಗಗಳನ್ನು ಕಟ್ಟಲಾಗಿತ್ತು. ಈ ಸಂದರ್ಭದಲ್ಲಿ ಕಾಡಾನೆಯನ್ನು ಸುತ್ತುವರೆದ ಕುಮ್ಮಿ ಕಾಡಾನೆಗಳು ಕಾಡಾನೆಯನ್ನು ನಿಯಂತ್ರಣಕ್ಕೆ ತರಲು ತಯಾರಿ ನಡೆಸಿದ್ದವು. ಈ ವೇಳೆ ಕಾಡಾನೆಗೆ ಕಟ್ಟಲಾಗಿದ್ದ ಹಗ್ಗ ತುಂಡಾಗಿ ತಪ್ಪಿಸಿಕೊಂಡ ಕಾಡಾನೆಯು ಯದ್ವಾ ತದ್ವಾ ಓಡಿದೆ. ಈ ವೇಳೆ ಕ್ಷಣಾರ್ಧದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು,ಸಾರ್ವಜನಿಕರು ಪಾರಾಗಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments