ಚಿಕ್ಕಮಗಳೂರು:ಡಾ.ಬಿ. ಆರ್ ಅಂಬೇಡ್ಕರ್ ಅವರ 135ನೇ ಜಯಂತಿಯ ಅಂಗವಾಗಿ ಸರಳ ಸಾಮೂಹಿಕ ವಿವಾಹದ ಅಹ್ವಾನ ಪತ್ರಿಕೆಯನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಸಂಘಟನೆಯ ರಾಜ್ಯ ಅಧ್ಯಕ್ಷೇ ಎಲ್. ಸಿ.ವಸಂತ ಕುಮಾರಿ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಜಿಲ್ಲಾ ಸಭೆಯಲ್ಲಿ ಬಿಡುಗಡೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು ಚಿಕ್ಕಮಗಳೂರಿನಲ್ಲಿ ಪ್ರಥಮ ವರ್ಷದ ಸರಳ ಸಾಮೂಹಿಕ ವಿವಾಹ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಆಚರಿಸುವ ಉದ್ದೇಶ ಬಡವರಿಗೆ ಸರಳತೆಯಿಂದ ಬದುಕುವುದು,ಆಡಂಬರ ಮೂಡನಂಬಿಕೆ ತೊಡೆದುಹಾಕುವ ಆಶಯ ನಮ್ಮ ಸಂಘಟನೆಯ ಉದ್ದೇಶವಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಸಂಘದ ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು ಮಾತನಾಡಿ ನಮ್ಮ ಅಂಬೇಡ್ಕರ್ ಜಯಂತಿ ಹಾಗೂ ಸರಳ ಸಾಮೂಹಿಕ ವಿವಾಹ ನಮ್ಮ ಚಿಕ್ಕಮಗಳೂರು ಜಿಲ್ಲೆಗೆ ಮೆರುಗು ಬಂದಂತಾಗಿದೆ.ನಮ್ಮ ರಾಜ್ಯ ಕಾರ್ಯಧ್ಯಕ್ಷರು ರಾಜ್ ಶಂಕರ್ ಮತ್ತು ರಾಜ್ಯ ಅಧ್ಯಕ್ಷೇ ವಂಸಂತಕುಮಾರಿ ಅವರ ಮಾರ್ಗದರ್ಶನದಲ್ಲಿ ರಾಜ್ಯ ಕಾರ್ಯಕ್ರಮ ನಮ್ಮ ಚಿಕ್ಕಮಗಳೂರಿನಲ್ಲಿ ನಡೆಯಿತ್ತಿದ್ದು ಸಂತೋಷದ ವಿಷಯವಾಗಿದೆ ಎಂದರು.
ತದನಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವರಿಷ್ಠಾಧಿಕಾರಿ ಕಛೇರಿಗೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು.

ಇದೆ ವೇಳೆ ಸಂಘಟನೆಗೆ ನೂತನವಾಗಿ ಆಯ್ಕೆಯಾಗಿರುವ ಚಂದ್ರಕಲಾ,ಕುಮಾರ್,ಹೇಮಾ,ಮೈನಾ,ಇವರಿಗೆ ಜವಾಬ್ದಾರಿ ಘೋಷಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಹೇಮಾವತಿ,ತಾಲ್ಲೂಕು ಅಧ್ಯಕ್ಷೇ ಜಯಮ್ಮಕಡೂರು,ಖಜಾಂಚಿ ರೇವಣ್ಣ,ತಾಲ್ಲೂಕು ಅಧ್ಯಕ್ಷರಾದ ಪೂರ್ಣೇಶ ಬೆಟ್ಟದಮನೆ.ಅಶೋಕ
ರಮೇಶ್ ಬಹುಜನ್,ಚೈತ್ರ,ಅಶೋಕ,ಜ್ಯೋತಿ,ರವಿ ಮುಂತಾದವರು ಇದ್ದರು.
ವರದಿ:ಪುನೀತ್ ಕಡಿದಾಳು
9483811948
