Friday, July 31, 2026
Homeಕ್ರೈಮ್ಎನ್.‌ ಆರ್.ಪುರ: ಗೋಮಾಂಸಕ್ಕಾಗಿ ದನದ ಚರ್ಮ ಮತ್ತು ಇತರೆ ತ್ಯಾಜ್ಯಗಳು ಪತ್ತೆ

ಎನ್.‌ ಆರ್.ಪುರ: ಗೋಮಾಂಸಕ್ಕಾಗಿ ದನದ ಚರ್ಮ ಮತ್ತು ಇತರೆ ತ್ಯಾಜ್ಯಗಳು ಪತ್ತೆ

Telegram Group
Join Now

ನರಸಿಂಹರಾಜಪುರದ ಈರಮಜ್ಜಿ ಕೆರೆಯ ಸಮೀಪ ದನದ ಚರ್ಮ ಮತ್ತು ಇತರೆ ತ್ಯಾಜ್ಯಗಳು ಪತ್ತೆಯಾಗಿರುತ್ತದೆ. ಇದರಿಂದ ಗೋಮಾಂಸಕ್ಕಾಗಿ ದನ ಹತ್ಯೆ ನಡೆದಿರುವ ಅನುಮಾನ ಮೂಡುತ್ತಿದೆ. ಇತ್ತೀಚೆಗೆ ನರಸಿಂಹರಾಜಪುರದ ಹಲವೆಡೆ ಅಕ್ರಮ ಕಸಾಯಿಕಾನೆಯ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬರುತ್ತಿದೆ. ಕೆಲವರು ಇದನ್ನೇ ತಮ್ಮ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಜೊತೆಗೆ ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಪೊಲೀಸರು ಗೋ ಹತ್ಯೆ ಆರೋಪಿಗಳನ್ನು ಗೋಮಾಂಸದೊಂದಿಗೆ ಬಂಧಿಸಿದ ಸಂದರ್ಭಗಳಲ್ಲಿ, ಕೆಲ ಪಶುವೈದ್ಯರು ಅವರಿಗೆ ಬೆಂಬಲ ನೀಡಿದ ಉದಾಹರಣೆಗಳೂ ಇವೆ. ಇಂತಹ ವರ್ತನೆಗಳು ಈ ರೀತಿಯ ಅಕ್ರಮಗಳಿಗೆ ಉತ್ತೇಜನ ನೀಡುತ್ತಿರುವುದಾಗಿ ಕಾಣಿಸುತ್ತದೆ.

ಪಶುವೈದ್ಯ ಇಲಾಖೆಯ ಕೆಲವರಿಂದ ಅಕ್ರಮ ಗೋ ಸಾಗಾಟಕ್ಕೆ ಸಹಕಾರ ಸಿಗುತ್ತಿದೆ ಎಂಬ ಆರೋಪಗಳಿವೆ. ಹಿಂದೆಯೂ ಕಟುಕರಿಗೆ ಸಾಗಾಟಕ್ಕೆ ಅನುಮತಿ ಪತ್ರ ನೀಡಿದ ಉದಾಹರಣೆಗಳು ಕಂಡುಬಂದಿವೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ಪಶುವೈದ್ಯ ಇಲಾಖೆ ತಕ್ಕ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ತರೀಕೆರೆ–ಶಿವಮೊಗ್ಗ ಭಾಗಗಳಿಗೆ ಕೆಲವು ಸ್ಥಳೀಯ ಪಶು ವೈದ್ಯ ಅಧಿಕಾರಿಗಳು ಸಾಗಾಟಕ್ಕೆ ಅನುಮತಿ ಪತ್ರ ನೀಡುತ್ತಿರುವುದಾಗಿ ಹೇಳಲಾಗುತ್ತಿದೆ. ಆದರೆ ಸಾಗಾಟಗೊಂಡ ಗೋವುಗಳನ್ನು ನಿಗದಿತ ಸ್ಥಳಕ್ಕೆ ತಲುಪಿದವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಲ್ಲದೆ, ಅವುಗಳ ಮುಂದಿನ ಸ್ಥಿತಿಯನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆಯೂ ಇಲ್ಲದಿರುವುದು ಸಮಸ್ಯೆಯನ್ನು ಗಂಭೀರಗೊಳಿಸಿದೆ.

ಇತ್ತೀಚಿನ ದಿನಗಳಲ್ಲಿ ಗೋ ಹತ್ಯೆಗಾಗಿ ಸಾಗಾಟ ಹೆಚ್ಚುತ್ತಿರುವುದು ಖಂಡನಿಯ. ಈ ಅಕ್ರಮಗಳಿಗೆ ಕೆಲ ಕಟುಕರು ಮತ್ತು ಭ್ರಷ್ಟ ಅಧಿಕಾರಿಗಳು ಕೈಜೋಡಿಸಿದ್ದಾರೆ.

ಇಂತಹ ಅಕ್ರಮಗಳಲ್ಲಿ ತೊಡಗಿರುವವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸಮಾಜಕ್ಕೆ ಹಾನಿ ಉಂಟುಮಾಡುವ ಕಾರ್ಯಗಳನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ನಿಮ್ಮ ಲಾಭ ನಷ್ಟಗಳಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಉತ್ತರ ನೀಡಬೇಕಾದ ಸನ್ನಿವೇಶ ಉಂಟಾಗುತ್ತದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments