Tuesday, April 21, 2026
Homeಕ್ರೈಮ್ಚಿಕ್ಕಮಗಳೂರು: ಪಬ್ಲಿಕ್‌ ಇಂಪ್ಯಾಕ್ಟ್‌ ಫಲಶೃತಿ: ಜಿಲ್ಲಾಸ್ಪತ್ರೆ ಸರ್ಜನ್ ಡಾ.ಚಂದ್ರಶೇಖರ್‌ ಹುದ್ದೆಯಿಂದ ವಜಾ!

ಚಿಕ್ಕಮಗಳೂರು: ಪಬ್ಲಿಕ್‌ ಇಂಪ್ಯಾಕ್ಟ್‌ ಫಲಶೃತಿ: ಜಿಲ್ಲಾಸ್ಪತ್ರೆ ಸರ್ಜನ್ ಡಾ.ಚಂದ್ರಶೇಖರ್‌ ಹುದ್ದೆಯಿಂದ ವಜಾ!

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಚಂದ್ರಶೇಖರ್‌ ವಿರುದ್ಧ ಸಾಲು ಸಾಲು ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸರ್ಜನ್‌ ಹುದ್ದೆಯಿಂದ ವಜಾಮಾಡಲಾಗಿದೆ.

ಇದು ನಿಮ್ಮ ಪಬ್ಲಿಕ್ ಇಂಪ್ಯಾಕ್ಟ್ ನ ಅತೀ ದೊಡ್ಡ ಫಲಶೃತಿ. ಜಿಲ್ಲಾ ಸರ್ಜನ್ ಆಗಿ ಚಂದ್ರಶೇಖರ್ ಸಾಲೀಮಠ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಫೇಕ್ ಐಎಎಸ್ ಮಿಥುನ್ ಜೊತೆ ಮಿಂಗಲ್ ಆಗಿ ಸರ್ಜನ್ ಚಂದ್ರಶೇಖರ್ ನಡೆಸ್ತಿದ್ದ ಅವ್ಯವಹಾರದ ಬಗ್ಗೆ ಪಬ್ಲಿಕ್ ಇಂಪ್ಯಾಕ್ಟ್ ವಿಡಿಯೋ ಸಮೇತ ಅಸಲಿಯತ್ತು ಬಯಲು ಮಾಡಿತ್ತು. ನಂತರ ಸರ್ಜನ್ ವಿರುದ್ಧ ಬಿಜೆಪಿ ಪ್ರೊಟೆಸ್ಟ್ ಕೂಡ ನಡೆಸಿತ್ತು. ಮಿಥುನ್ ಅಕೌಂಟ್‌ಗೆ ಲಕ್ಷ, ಲಕ್ಷ ಹಣ ಹಾಕಿದ್ದರ ಬಗ್ಗೆ ಡಾಕ್ಯುಮೆಂಟ್ ಸಮೇತ ವರದಿ ಮಾಡಿದ್ವಿ. ಇವರಿಬ್ರು ಸೇರಿ ಹೋಂ ಸ್ಟೇನಲ್ಲಿ ಮಾಡ್ತಿದ್ದ ಪಾರ್ಟಿಯ ಅಸಲಿ ದೃಶ್ಯವನ್ನೂ ತೋರಿಸಿದ್ವಿ. ಕೊನೆಗೂ ಆಡಿಯೋ ಬಾಂಬ್ ವರದಿಗೆ ಎಚ್ಚೆತ್ತ ಸರ್ಕಾರ ದಿಢೀರ್ ವರ್ಗಾವಣೆ ಮಾಡಿದೆ.

ಇದು ಪಬ್ಲಿಕ್ ಇಂಪ್ಯಾಕ್ಟ್ ನ ಮೆಗಾ ಫಲಶೃತಿ. ಆದ್ರೆ ಅವ್ಯವಹಾರದಲ್ಲಿ ಸರ್ಜನ್ ಹೆಸರು ಕೇಳಿ ಬಂದಿದೆ, ಸೇವೆಯಿಂದ ವಜಾ ಮಾಡಿದ್ರೆ ಸಾಕಾ..? ತನಿಖೆ ಆಗ್ಬೇಕಲ್ವಾ.? ಅಂತ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!