ಮೂಡಿಗೆರೆ : ಮಂಗಳವಾರ ಸಂಜೆ ಬೀಸಿದ ಗಾಳಿ, ಮಳೆಗೆ ಮನೆಯ ಚಾವಣಿ ಹಾರಿಹೋದ ಘಟನೆ ತಾಲ್ಲೂಕಿನ ಜಿ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ
ಸಂಜೆ ಬೀಸಿದ ಗಾಳಿ ಹಾಗೂ ಮಳೆಗೆ ಹಲವು ಮನೆಗಳ ಚಾವಣಿ ಹಾರಿಹೋಗಿದ್ದು, ಅಪಾರ ಹಾನಿ ಸಂಭವಿಸಿದೆ. ಗ್ರಾಮದ ನಿವಾಸಿ ಗುರು ಮೂರ್ತಿ ಅವರ ಮನೆಯ ಚಾವಣಿ ಹಾರಿ ಹೋಗಿವೆ.
ಚಾವಣಿ ಹಾರಿ ಹೋದ ಕಾರಣ ಕುಟುಂಬ ಚಿಂತಾಜನಕ ಸ್ಥಿತಿ ಯಲ್ಲಿದೆ ಮಳೆಯಲ್ಲಿಯೇ ಪರದಾಡಿದ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ
ಗ್ರಾಮದಲ್ಲಿ ಅಲ್ಲಲ್ಲಿ ಗಿಡಮರಗಳು ನೆಲಕ್ಕುರುಳಿವೆ. ಯಾವುದೇ ಜೀವಹಾನಿಯಾಗಿಲ್ಲ. ಗಾಳಿ, ಮಳೆಯಿಂದ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ.
ವರದಿ:ಪುನೀತ್ ಕಡಿದಾಳು
94838118948
