Sunday, May 24, 2026
Homeಜಿಲ್ಲಾಸುದ್ದಿಯೂರಿಯಾ ಗೊಬ್ಬರ ಕೊರತೆ : ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿರುವ ಅನ್ನದಾತರು!

ಯೂರಿಯಾ ಗೊಬ್ಬರ ಕೊರತೆ : ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿರುವ ಅನ್ನದಾತರು!

ಮೂಡಿಗೆರೆ:ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಕೊರತೆ ತೀವ್ರವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಮಳೆಯ ಆರಂಭದ ಹಿನ್ನೆಲೆ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿರುವ ಈ ಸಂದರ್ಭದಲ್ಲಿ ಕೃಷಿ ಸಹಕಾರ ಸಂಘಗಳು ಹಾಗೂ ಖಾಸಗಿ ಅಂಗಡಿಗಳಲ್ಲಿ ಗೊಬ್ಬರ ಸಿಗದೆ ಸಂಕಷ್ಟ ಅನುಭವಿಸುವಂತಾಗಿದೆ.

ಯೂರಿಯಾ ಗೊಬ್ಬರದ ಕೊರತೆಯಿಂದ ಪ್ರತಿ ರೈತನಿಗೂ ಸೀಮಿತ ಪ್ರಮಾಣದಲ್ಲಿ ಎಕರೆಗೆ 1 ಮೂಟೆ ಮಾತ್ರ ಯೂರಿಯಾ ವಿತರಣೆ ಮಾಡಲಾಗುತ್ತಿದೆ. ಸಮಾನ್ಯವಾಗಿ ಒಂದೇ ಬೆಳೆ ಬಳೆಯುವ ಕೃಷಿಗೆ ಎಕರೆಗೆ ಕನಿಷ್ಟ 3 ಮೂಟೆ ಯೂರಿಯಾ ಗೊಬ್ಬರ ಬೇಕಾಗುತ್ತದೆ. ಉಳಿದಂತೆ ಕಾಫಿ, ಅಡಿಕೆ, ಕಾಳುಮಣಸು, ಬಾಳ ಸೇರಿದಂತೆ ಇತರೇ ಮಿಶ್ರ ಬೆಳ ಬೆಳೆಯಲು 1 ಎಕರೆಗೆ ಕನಿಷ್ಟ 5ರಿಂದ 6 ಮೂಟೆ ಯೂರಿಯಾ ಗೊಬ್ಬರ ಬೇಕಾಗುತ್ತದೆ. ಅದರ ಕೃಷಿ ಸಹಕಾರ, ಸಂಘಗಳಲ್ಲಿ ಎಕರೆಗೆ 1 ಮೂಟೆ ಮಾತ್ರ ಯೂರಿಯಾ ಗೊಬ್ಬರ ವಿತರಿಸುತ್ತಿರುವುದರಿಂದ ರೈತರು ತೀವ್ರ ತರದಲ್ಲಿ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೇ ಬಹುತೇಕ ಖಾಸಗಿ ಅಂಗಡಿಗಳಲ್ಲೂ ಸ್ಟಾಕ್ ಇಲ್ಲದ ಕಾರಣ ಸಮಯಕ್ಕೆ ಗೊಬ್ಬರ ಸಿಗದಿದ್ದರೆ ಬೆಳೆಗಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ರೈತರು ಗೊಬ್ಬರ ಖರೀದಿ ಮಾಡಲು ಕೃಷಿ ಜಮೀನಿನ ಎಫ್‌ಐಡಿ ಪ್ರಮಾಣ ಪತ್ರ ಕಡ್ಡಾಯ ಮಾಡಲಾಗಿದೆ. ಮೂಡಿಗೆರೆ ಮತ್ತು ಕಡೂರು ತಾಲೂಕಿನಲ್ಲಿ ಈ ಹಿಂದೆ ಪಾನಂ.50. 53 ಅಕ್ರಮ ಸಕ್ರಮ ಸಮಿತಿಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ರೈತರ ಜಮೀನಿನ ಪಹಣಿಗಳನ್ನು ವಜಾ ಮಾಡಿದ್ದರಿಂದ ಪಹಣಿಯಲ್ಲಿ ಎಫ್‌ಐಡಿ ನಮೂದು ಮತ್ತು ಎಫ್‌ಐಡಿ ಪತ್ರ ಸಿಗದೇ ಇದೀಗ ಗೊಬ್ಬರ ಖರೀದಿಸಲು ಸಾಧ್ಯವಾಗದಂತಾಗಿದ್ದು, ಅಷ್ಟೂ ಮಂದಿ ರೈತರು ಸಂಕಷ್ಟಕ್ಕ ಸಿಲುಕಿದ್ದಾರೆ. ಪ್ರತಿ ವರ್ಷ ಮುಂಗಾರು ಪೂರ್ವದಲ್ಲಿ ರೈತರಿಗೆ ಅವಶ್ಯಕತೆಗೆ ತಕ್ಕಂತೆ ಯೂರಿಯಾ ಗೊಬ್ಬರ ಸಿಗುತ್ತಿತ್ತು. ಆದರೆ ಈ ಬಾರಿ ಸರಕಾರಕ್ಕೆ ಸರಿಯಾದ ಮಾಹಿತಿ ನೀಡದೇ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ಕೃಷಿ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಗೊಬ್ಬರದ ಕೊರತೆಯಿಂದಾಗಿ ರೈತರಿಗೆ ಕಲಬೆರಕೆ ಗೊಬ್ಬರ ಮಾರಾಟ ಕೂಡ. ಹೆಚ್ಚಾಗತೊಡಗಿದೆ. ಇದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಕೆಳಗೂರು ಸಮೀಪದ ದಿಣ್ಣೆಕರ ಗಾಮದಲ್ಲಿ ರೈತರಿಗೆ ಕಲಬೆರಿಕ ಸಾವಯವ ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಪಕರಣ ದಾಖಲಿಸಿ 27 ಮೋಟೆ ಕಲಬೆರಕೆ.ಗೊಬ್ಬರ. ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಹಾಗಾಗಿ ಸರಕಾರ 1 ಎಕರೆಗೆ ಕನಿಷ್ಟ 3 ಮೂಟೆಯಾದರೂ ಯೂರಿಯಾ ಗೊಬ್ಬರ ವಿತರಿಸುವಂತೆ ಹಾಗೂ ಈ ಹಿಂದೆ ಪಾರಂ ನಂ.50, 53 ಅಕ್ರಮ ಸಕ್ರಮ ಸಮಿತಿಯಲ್ಲಿ ಮಂಜೂರಾದ ಎಲ್ಲಾ ರೈತರಿಗೆ ಗೊಬ್ಬರ ಸಿಗುವಂತೆ ಕ್ರಮ ವಹಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

ಈಗಲೇ ಹೆಚ್ಚುವರಿ ಗೊಬ್ಬರ ವಿತರಿಸಿದರೆ ಮುಂದೆ ಸಣ್ಣ ರೈತರಿಗೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಸರಕಾರದ…ನಿರ್ದೇಶಿಸಿದಂತೆ ಅವಶ್ಯಕತೆಗೆ ತಕ್ಕಂತ. ಹಂತ ಹಂತವಾಗಿ ಗೊಬ್ಬರ ವಿತರಿಸಲಾಗುತ್ತಿದೆ. ಅಕ್ರಮ ಸಕ್ರಮ ಸಮಿತಿಯಲ್ಲಿ ಮಂಜೂರಾದ ರೈತರಿಗೆ ಎಫ್‌ಐಡಿ ಸಿಗದ ಕಾರಣ ಗೊಬ್ಬರ ವಿತರಿಸಲು ಸಾಧ್ಯವಾಗುತ್ತಿಲ್ಲ. ಇವರಿಗೂ ಗೊಬ್ಬರ ಸಿಗುವಂತೆ ಕ್ರಮ ವಹಿಸಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂಬುದಾಗಿ . ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಮಾ ಪಬ್ಲಿಕ್ ಇಂಪ್ಯಾಕ್ಟ್ ತಿಳಿಸಿದ್ದಾರೆ

ಕೃಷಿ ಇಲಾಖೆ ಅಧಿಕಾರಿಗಳು ಅಗತ್ಯ ಪ್ರಮಾಣದ ಗೊಬ್ಬರವನ್ನು ಶೀಘ್ರದಲ್ಲಿ ಪೂರೈಸಲಾಗುವುದು ಎಂದು ಹೇಳುತ್ತಿದ್ದಾರೆ. ಆದರೆ ಸಮಸ್ಯೆ ಮುಂದುವರಿದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹಾಗಾಗಿ ಸರಕಾರ ರೈತರಿಗೆ ಅಗತ್ಯಕ್ಕೆ ತಕ್ಕಂತ ಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಬೇಕು ರೈತ ಮುಖಂಡರಾದ ಪಿ.ಕ.ನಾಗೇಶ್ ತಿಳಿಸಿದ್ದಾರೆ

ಮಿಶ್ರ ಬೆಳೆ ಬಳೆಯುವ ರೈತರಿಗೆ ಎಕರೆಗೆ ಕನಿಷ್ಠ 5ರಿಂದ 6 ಮೂಟೆ ಯೂರಿಯಾ ಬೇಕು. ಆದರೆ ಸರಕಾರ ನೀಡುತ್ತಿರುವ ಎಕರೆಗೆ 1 ಮೂಟೆ ಯೂರಿಯಾ ಗೊಬ್ಬರ ಸಾಕಾಗುವುದಿಲ್ಲ. ಖಾಸಗಿ ಅಂಗಡಿಗಳಲ್ಲಿ ಕೂಡ ಸೊಬ್ಬರ ಸಿಗುತ್ತಿಲ್ಲ. ಎಲ್ಲಾ ಗೊಬ್ಬರದ ಬೆಲೆ ಏರಿಕೆಯಾಗಿದೆ: ಸಮಯಕ್ಕೆ ಗೊಬ್ಬರ ಸಿಗದಿದ್ದರೆ ಬೆಳೆ ಕಳೆದುಕೊಳ್ಳುವ ಸ್ಥಿತಿ ಉಂಟಾಗುತ್ತದೆ ಎಂದು ಕೃಷಿಕ ಪ್ರಕಾಶ್ ಬಕ್ಕಿ ಅಭಿಪ್ರಾಯ ವ್ಯಕ್ತ ಪಡಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!