Tuesday, July 14, 2026
Homeಕ್ರೈಮ್ಎನ್.ಆರ್.ಪುರ: ಪೊದೆಯೊಂದರಲ್ಲಿ ಹಸುಗೂಸು ಸಿಕ್ಕ ಪ್ರಕರಣ: ತಾಯಿ ಯಾರೆಂದು ಪತ್ತೆ!

ಎನ್.ಆರ್.ಪುರ: ಪೊದೆಯೊಂದರಲ್ಲಿ ಹಸುಗೂಸು ಸಿಕ್ಕ ಪ್ರಕರಣ: ತಾಯಿ ಯಾರೆಂದು ಪತ್ತೆ!

Telegram Group
Join Now

ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇವಲ ಒಂದು ದಿನದ ಹಸುಗೂಸನ್ನು ಪೊದೆಯೊಂದರಲ್ಲಿ ಅನಾಥವಾಗಿ ಬಿಟ್ಟು ಹೋಗಿದ್ದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು ಆ ಮಗುವಿನ ತಾಯಿ ಯಾರೆಂದು ಗೊತ್ತಾಗಿದೆ.

ಹೌದು .. ಮಗುವಿನ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಯುವಕ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದರಿಂದ ಮಗು ಜನಿಸಿದೆ ಎಂದು ಆರೋಪಿಸಿದ್ದಾರೆ.

ತೀರ್ಥಹಳ್ಳಿಯ ಕನ್ನಂಗಿ ನಿವಾಸಿಯಾದ ಯುವಕ ಮದುವೆಯಾಗುವುದಾಗಿ ಮನೆಯವರಿಗೂ ಕೇಳಿದ್ದ. ಕುಟುಂಬದವರು ಒಪ್ಪಿಗೆ ನೀಡಿದ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಈ ವೇಳೆ ಆಗಾಗ ಮನೆಗೆ ಬರುತ್ತಿದ್ದ ಆತ ದೈಹಿಕ ಸಂಪರ್ಕ ಹೊಂದಿದ್ದ ಆ ನಂತರ ಗರ್ಭಿಣಿಯಾಗಿರುವ ವಿಷಯ ತಿಳಿಸಿದಾಗ ಯುವಕ ನಿರ್ಲಕ್ಷ್ಯ ತೋರಿಸಿ ಉಡಾಫೆಯಿಂದ ವರ್ತಿಸುತ್ತಿದ್ದ ಎನ್ನಲಾಗಿದೆ. ಮೇ 18ರಂದು ಸಂಜೆ ಹೊಟ್ಟೆ ನೋವು ಕಾಣಿಸಿಕೊಂಡು ಮಗು ಜನಿಸಿದ ಬಳಿಕ, ಸಮಾಜದ ಮರ್ಯಾದೆಗೆ ಅಂಜಿ ದೇವಸ್ಥಾನದ ಸಮೀಪ ಬುಟ್ಟಿಯಲ್ಲಿ ಮಗುವನ್ನು ಇರಿಸಿ ಬಂದಿರುವುದಾಗಿ ಮಹಿಳೆ ಪೊಲೀಸರ ಎದುರು ನಿಜ ಒಪ್ಪಿಕೊಂಡಿದ್ದು ಹಾಗೆ ಯುವಕನ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments