Sunday, May 24, 2026
Homeಕ್ರೈಮ್ಶೃಂಗೇರಿ & ಹರಿಹರಪುರದಲ್ಲಿ ನಡೆದ ಕಳ್ಳತನ ಕೇಸ್: ಅಂತರ್ ಜಿಲ್ಲಾ ಸರಗಳ್ಳರ ಬಂಧನ!

ಶೃಂಗೇರಿ & ಹರಿಹರಪುರದಲ್ಲಿ ನಡೆದ ಕಳ್ಳತನ ಕೇಸ್: ಅಂತರ್ ಜಿಲ್ಲಾ ಸರಗಳ್ಳರ ಬಂಧನ!

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಉಪವಿಭಾಗದ ವಿಶೇಷ ಪೊಲೀಸ್ ತಂಡದಿಂದ ಭರ್ಜರಿ ಕಾರ್ಯಾಚರಣೆ ನಡೆದಿದ್ದು ಓರ್ವ ಸರಗಳ್ಳನನ್ನು ಬಂಧಿಸಿ, ₹4.83 ಲಕ್ಷ ಮೌಲ್ಯದ ಚಿನ್ನದ ಸರ, ಕೃತ್ಯಕ್ಕೆ ಬಳಸಿದ್ದ ಬೈಕ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಶೃಂಗೇರಿ ಮತ್ತು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 2 ಸರಗಳ್ಳತನ ಪ್ರಕರಣಗಳನ್ನು ಭೇದಿಸಲಾಗಿದೆ.

ದಿನಾಂಕ 05.12.2025 ರಂದು ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾರಣ್ಯಪುರ ಗ್ರಾಮದಲ್ಲಿ ಮಹಿಳೆಯೊಬ್ಬರ 24 ಗ್ರಾಂಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವುದಾಗಿ ಹಾಗೂ ದಿನಾಂಕ 10.05.2026 ರಂದು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಲ್ಮತ್ತೂರು ಗ್ರಾಮದಲ್ಲಿ ಸರಗಳ್ಳತನ ಮಾಡಿರುವುದನ್ನು ಆರೋಪಿ ಒಪ್ಪಿಕೊಂಡಿರುತ್ತಾನೆ.

ಶ್ರೀ. ಬಾಲಾಜಿ ಸಿಂಗ್ ಎಂ ಜೆ, ಡಿ.ವೈ.ಎಸ್.ಪಿ, ಕೊಪ್ಪ ಉಪವಿಭಾಗ ರವರ ನೇತೃತ್ವದ ವಿಶೇಷ ಪೊಲೀಸ್ ತಂಡದಲ್ಲಿ ಶೃಂಗೇರಿ ಪೊಲೀಸ್ ಠಾಣೆಯ ಪ್ರಭಾರ ಪಿ.ಐ. ಶ್ರೀ. ಅಬ್ದುಲ್ ಖಾದರ್, ಶೃಂಗೇರಿ ಪೊಲೀಸ್ ಠಾಣೆಯ ಪಿ.ಎಸ್.ಐ. ಗಳಾದ ಶ್ರೀ. ನಾಗರಾಜ್ ಬಿ ಆರ್ ಮತ್ತು ಶ್ರೀ. ಅಬಿಷೇಕ್ ಕೆ, ಕೊಪ್ಪ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ. ಮಧು ಬಿ, ಹರಿಹರಪುರ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ. ಶ್ರೀಧರ್ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶ್ರೀ. ರಚಿತ್, ಶ್ರೀ. ಪರಮೇಶ್, ಶ್ರೀ. ಅಜಯ್ ಸಿಂಗ್, ಶ್ರೀ. ಸದಾಶಿವ ಕಾರಜೋಳ, ಶ್ರೀ. ಗಗನ್ ಕೆ ಆರ್, ಶ್ರೀ. ಪ್ರವೀಣ್ ನಲವಾಗಲ, ಶ್ರೀ. ವಿಜಯ ಕುಮಾರ ಬಿಳಗಿ, ಶ್ರೀ. ಪ್ರಶಾಂತ್, ಶ್ರೀ. ಯುವರಾಜ, ಶ್ರೀ. ಅಂಕಿತ್, ಶ್ರೀ. ಎಲ್ದೋ ಮತ್ತು ಶ್ರೀ. ರಾಜೇಶ ರವರ ಕಾರ್ಯನಿರ್ವಹಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!