Wednesday, May 27, 2026
Homeಜಿಲ್ಲಾಸುದ್ದಿಹಸಿ, ಒಣ, ಸ್ಯಾನಿಟರಿ ಮತ್ತು ವಿಶೇಷ ತ್ಯಾಜ್ಯ ವಿಂಗಡಿಸಿ: ನಗರಸಭೆ ಪೌರಾಯುಕ್ತ ಬಸವರಾಜ್

ಹಸಿ, ಒಣ, ಸ್ಯಾನಿಟರಿ ಮತ್ತು ವಿಶೇಷ ತ್ಯಾಜ್ಯ ವಿಂಗಡಿಸಿ: ನಗರಸಭೆ ಪೌರಾಯುಕ್ತ ಬಸವರಾಜ್

ಚಿಕ್ಕಮಗಳೂರು: ಪರಿಸರ ಸಂರಕ್ಷಣೆ ದೃಷ್ಟಿಯಿಂದ ಸುಪ್ರಿಂ ಕೋರ್ಟ್ ಮಾರ್ಗಸೂಚಿಯ ಂತೆ ಸಾರ್ವಜನಿಕರು ಹಸಿ, ಒಣ, ಸ್ಯಾನಿಟರಿ ತ್ಯಾಜ್ಯ ಮತ್ತು ವಿಶೇಷ ಕಾಳಜಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗ ಡಿಸಿ ಕಸದ ಗಾಡಿಗಳಿಗೆ ಹಾಕಬೇಕು ಎಂದು ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಸೂಚಿಸಿದರು.

ನಗರದ ಜಿಲ್ಲಾ ಸುಭಾಶ್‌ಚಂದ್ರ ಬೋಸ್ ಆಟದ ಮೈದಾನದಲ್ಲಿ ಸ್ವಚ್ಚ ಟ್ರಸ್ಟ್ ವತಿಯಿಂದ ಅಳವ ಡಿಸಿರುವ ಒಣ ಕಸ ಶೇಖರಿಸುವ ಎರಡು ಕಸದ ಬುಟ್ಟಿಗಳನ್ನು ಸೋಮವಾರ ಮುಂಜಾನೆ ಉದ್ಘಾಟಿಸಿ ಅವ ರು ಮಾತನಾಡಿದರು.

ಒಣ ಕಸದಲ್ಲಿ ಲೋಹ, ಪ್ಲಾಸ್ಟಿಕ್, ಬಟ್ಟೆ, ಮರದ ತುಂಡು. ಸ್ಯಾನಿಟರಿ ತ್ಯಾಜ್ಯದಲ್ಲಿ ಬಳಸಿದ ಡೈಪರ್, ಸ್ಯಾನಿಟರಿ ನ್ಯಾಪ್ಕಿನ್, ಟವೆಲ್, ಟ್ಯಾಂಪೋನ್. ಹಸಿ ಕಸದಲ್ಲಿ ಅಡುಗೆ ಮನೆಯ ತ್ಯಾಜ್ಯದ ಹಣ್ಣು ತರಕಾರಿ ಸಿಪ್ಪೆ, ಉಳಿದಆಹಾರ ಪದಾರ್ಥಗಳನ್ನು ಪ್ರತ್ಯೇಕ ವಿಂಗಡಿಸಲು ಸಾರ್ವಜನಿಕರು ಮುಂದಾಗಬೇಕು ಎಂದರು.

ಪ್ರಕೃತಿ ಸಂಪತ್ತು ಉಳಿಸುವ ನಿಟ್ಟಿನಲ್ಲಿ ನ್ಯಾಯಾಲಯ ಕಸ ಸಂಗ್ರಹಿಸುವ ಈ ನಿರ್ಣಯ ಕೈಗೊಂಡಿದೆ. ಈ ನಿಯಮವನ್ನು ಸಾರ್ವಜನಿಕರು ಮೀರಿದರೆ ದಿನನಿತ್ಯದ ಮೂಲಸೌಕರ್ಯವನ್ನು ನಗರಾಡಳಿತ ತಡೆಹಿಡಿ ಯಲಾಗುವುದು. ಆದ್ದರಿಂದ ನಿವಾಸಿಗಳು ನಗರದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಕೈಜೋಡಿಸಬೇಕಿದೆ ಎಂ ದು ಮನವಿ ಮಾಡಿದರು.

ಕಸ ಸಂಗ್ರಹಣೆ ವಿಚಾರದಲ್ಲೂ ಸ್ವಚ್ಚ ಟ್ರಸ್ಟ್ ಹಿಂದೆ ಬಿದ್ದಿಲ್ಲ. ಕಳೆದ ಒಂಭತ್ತು ವರ್ಷಗಳಿಂದ ನಗರಸಭೆಗೆ ಕಸ ಸಂಗ್ರಹಿಸಲು ವ್ಯವಸ್ಥೆ ಕಲ್ಪಿಸಿಕೊಟ್ಟು ಸ್ವಚ್ಚತೆ ಆದ್ಯತೆ ನೀಡಿದೆ. ಈ ಸಮಾಜಮುಖಿ ಕಾರ್ಯದಲ್ಲಿ ಸಂಸ್ಥೆ ಮುಂದೆ ಇನ್ನಷ್ಟು ಸ್ವಚ್ಚ ನಗರಿಯಾಗಿಸಲು ಮುಂದಾದಲ್ಲಿ ನಗರಸಭೆಯು ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.

ನಗರದ ಕಲ್ಯಾಣ ಮಂಟಪ, ಹಾಸ್ಟೆಲ್, ಶಾಲಾವರಣದಲ್ಲಿ ಆದಷ್ಟು ಕರಗಿಸುವ ವಸ್ತುಗಳನ್ನು ಅಲ್ಲಿಯೇ ಕರಗಿಸಿ, ಉಳಿದ ಕಸವನ್ನು ಗಂಟೆ ಗಾಡಿಗಳಿಗೆ ಹಾಕಬೇಕು. ನಗರಸಭೆ ಸದಸ್ಯರು ವಾರ್ಡ್‌ಗಳಲ್ಲಿ ಸಂಘಟನೆ ಯೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದು ಭವಿಷ್ಯದಲ್ಲಿ ಸ್ವಚ್ಚಂಧ ಪರಿ ಸರಕ್ಕೆ ಅನುಕೂಲವಾಗಲಿದೆ ಎಂದರು.

ಸ್ವಚ್ಚ ಟ್ರಸ್ಟ್ ಸಂಸ್ಥಾಪಕಿ ಡಾ|| ಶುಭ ವಿಜಯ್ ಮಾತನಾಡಿ ಟ್ರಸ್ಟ್ ಕಳೆದ ಎರಡೂವೆರೆ ದಶಕಗಳಿಂದ ನಿರಂತರ ಸ್ವಚ್ಚತೆ, ಪರಿಸರ ಸಂರಕ್ಷಣೆ, ಸಸಿ ನೆಡುವುದು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ. ಅಲ್ಲದೇ ಹಸಿ, ಒಣ ಕಸ ವಿಂಗಡಿಸಲು ಮನೆ ಮನೆಗೆ ಹಸಿರು, ಕೆಂಪು ಕಸದ ಬುಟ್ಟಿಗಳನ್ನು ವಿತರಿಸುವ ಕಾರ್ಯವನ್ನು ಮಾಡಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ನಗರವನ್ನು ಹಸೀಕರಣಗೊಳಿಸಲು ಡಿವೈಡರ್‌ಗಳಲ್ಲಿ ಸಸಿ ನೆಡುವುದು, ಪ್ರತಿ ವಾ ರ್ಡ್‌ಗಳಲ್ಲಿ ಸ್ಥಳೀಯ ನಿವಾಸಿಗಳಿಂದ ಕಮಿಟಿ ರಚಿಸಿ ಸ್ವಚ್ಚತೆಗೆ ಸಲಹೆ, ಸಹಕಾರ ನೀಡುತ್ತಿದೆ. ಒಟ್ಟಾರೆ ಕಸ ರಹಿತವಾಗಿ ನಗರವನ್ನು ನಿರ್ಮಿಸುವ ಉದ್ದೇಶವನ್ನು ಟ್ರಸ್ಟ್ ಹೊಂದಿದೆ ಎಂದರು.

ಈ ಸಂದರ್ಭದಲ್ಲಿ ಸ್ವಚ್ಚ ಟ್ರಸ್ಟ್ ಅಧ್ಯಕ್ಷೆ ಉಮಾ ನಾಗೇಶ್, ಕಾರ್ಯದರ್ಶಿ ಅನುಪಮ ಮನ್ಸೂರ್, ಟ್ರಸ್ಟಿ ಗಳಾದ ಹೆಚ್.ಪಿ.ಲಕ್ಷ್ಮೀ, ಶುಭರಾಮೇಗೌಡ, ಮಾಜಿ ಕಾರ್ಯದರ್ಶಿ ಡಾ|| ಗೀತಾ ವೆಂಕಟೇಶ್, ನಗರಸಭೆ ಮಾಜಿ ಸದಸ್ಯ ದಿನೇಶ್ ಹಾಗೂ ಮುಂಜಾನೆ ನಡಿಗೆದಾರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!