Wednesday, July 15, 2026
Homeಜಿಲ್ಲಾಸುದ್ದಿಹಿರೇನಲ್ಲೂರು ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ

ಹಿರೇನಲ್ಲೂರು ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ

Telegram Group
Join Now

ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಹಿರೇನಲ್ಲೂರು ಗ್ರಾಮದ ಪ್ರಾಥಮಿಕ ಹಾಗೂ ಪ್ರೌ ಢಶಾಲೆಯ 1986-87 ಮತ್ತು1989-90 ಸಾಲಿನ ಹಳೇ ವಿದ್ಯಾರ್ಥಿಗಳಿಂದ ಇತ್ತೀಚೆಗೆ ಪಟ್ಟಣದ ವಿನಾಯ ಕ ಸಭಾಂಗಣದಲ್ಲಿ ನೆಚ್ಚಿನ ನಿವೃತ್ತ ಶಿಕ್ಷಕರಿಗೆ ಪಾದ ಪೂಜೆ ನೆರವೇರಿಸಿ, ನಮಸ್ಕರಿಸುವ ಮೂಲಕ ಹಳೇ ವಿ ದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು.

ನಿವೃತ್ತ ಶಿಕ್ಷರಾದ ಹೆಚ್.ಡಿ.ಓಂಕಾರಮೂರ್ತಿ, ಸಿ.ಎಂ.ಕಲ್ಲೇಶಪ್ಪ, ಡಿ.ಟಿ.ಬಸವರಾಜಪ್ಪ, ಆರ್.ನಾಗರಾ ಜಪ್ಪ, ಎನ್.ಓಂಕಾರಪ್ಪ, ಕೆ.ಆರ್.ಉಮಾದೇವ, ಬಿ.ಎಂ.ಈಶ್ವರಪ್ಪ, ಎಸ್.ಹೆಚ್.ಲೋಕೇಶ್ ಗಂಗಮ್ಮ ಹಾಗೂ ಅಂಗನ ವಾಡಿ ಶಿಕ್ಷಕಿ ಜಯಮ್ಮ ಶಂಕರಾಚಾರ್ಯ ಅವರಿಗೆ ಗೌರವಿಸುವ ಮೂಲಕ ಭಕ್ತಿಪೂರ್ವ ನಮನ ಸಲ್ಲಿಸಿದರು.

ಗುರುವಂದನಾ ಕಾರ್ಯಕ್ರಮದಲ್ಲಿ ಎಲ್ಲಾ ಹಳೇ ವಿದ್ಯಾರ್ಥಿಗಳು ಸಕುಟುಂಬ ಸಮೇತರಾಗಿ ಆಗಮಿಸಿ ದ್ದು ವಿಶೇಷವಾಗಿತ್ತು. ಗೆಳೆಯರು, ಗೆಳತಿಯರು ಬಾಲ್ಯದ ನೆನಪು, ತುಂಟಾಟ, ಕಿಟಲೆ, ಶಿಕ್ಷಕರು ಹಾಗೂ ವಿ ದ್ಯಾರ್ಥಿಗಳ ಪರಸ್ಪರ ಸಂಬಂಧ ಬಗ್ಗೆ ಹಂಚಿಕೊಂಡು ಕಾರ್ಯಕ್ರಮದಲ್ಲಿ ನಗುತ್ತಲೇ ದಿನ ಕಳೆದರು.

ಹಿರೇನಲ್ಲೂರಿನ ಇತಿಹಾಸದಲ್ಲಿ ಇದುವರೆಗೂ ಓದಿದ ವಿದ್ಯಾರ್ಥಿಗಳಲ್ಲಿ ಇದು ಮೊದಲನೇ ಗುರು ವಂದನೆ ಕಾರ್ಯಕ್ರಮವಾಗಿದ್ದು ಅತ್ಯಂತ ಯಶಸ್ವಿಯಾಗಿ ನಡೆದು ಹಿರೇನಲ್ಲೂರು ಹಾಗೂ ಅಕ್ಕಪಕ್ಕದ ಗ್ರಾಮ ಗಳಲ್ಲಿ ಮನೆಮಾತಾಯಿತು.

ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿ, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಡಾ.ಹೆಚ್.ಬಿ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿಗಳಾದ ಪಿ.ಪ್ರದೀಫ್, ಹೆಚ್.ಎನ್. ಕಲ್ಲೇಶ್, ಹೆಚ್.ಎ.ಮಹದೇವ್, ಹೆಚ್.ಎನ್.ಗೀತಾ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಾ.ಹಿರೇನಲ್ಲೂರು ಶಿವು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments