Wednesday, May 27, 2026
Homeಜಿಲ್ಲಾಸುದ್ದಿವಸತಿ ಶಾಲೆಗಳು ಜೀವನ ನಿರ್ಮಾಣದ ಕೇಂದ್ರವಾಗಲಿ : ನ್ಯಾ. ಸಂದೇಶ್

ವಸತಿ ಶಾಲೆಗಳು ಜೀವನ ನಿರ್ಮಾಣದ ಕೇಂದ್ರವಾಗಲಿ : ನ್ಯಾ. ಸಂದೇಶ್

ಚಿಕ್ಕಮಗಳೂರು: ವಸತಿ ಶಾಲೆಗಳು ರಾಷ್ಟ್ರ ನಿರ್ಮಾಣಕ್ಕೆ ಯೋಗ್ಯ ನಾಗರೀಕರನ್ನು ರೂಪಿ ಸುವ ಕಾರ್ಯದಲ್ಲಿ ತೊಡಗಿರುವುದರಿಂದ, ಇವು ಕೇವಲ ಶಿಕ್ಷಣ ನೀಡುವ ಕೇಂದ್ರಗಳಾಗದೇ, ಜೀವನ ನಿ ರ್ಮಾಣದ ಕೇಂದ್ರವಾಗಲಿ ಎಂದು ಉಚ್ಚ ನ್ಯಾಯಾಲಯ ನ್ಯಾಯಾಧೀಶ ಹೆಚ್.ಪಿ.ಸಂದೇಶ್ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘ ಮತ್ತು ಯುವಸ್ಪೂರ್ತಿ ಅಕಾಡೆಮಿ, ಚಿಕ್ಕಮಗಳೂರು ಸಹಯೋಗದಲ್ಲಿ ಆಯೋಜಿಸಿದ್ಧ ವಸತಿ ಶಾಲೆ ಮತ್ತು ಕಾಲೇ ಜುಗಳ ಪ್ರಾಂಶುಪಾಲರಿಗೆ ಆಡಳಿತ ಮತ್ತು ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮನೆಯಲ್ಲಿ ಹಿರಿಯರಿದ್ದರೆ ಆ ಮನೆಗೆ ಬೆಳಕು. ಅದೇ ರೀತಿ ಶಾಲೆಗೆ ಉತ್ತಮ ಪ್ರಾಂಶುಪಾಲರಿದ್ದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು. ಒಬ್ಬ ಉತ್ತಮ ಪ್ರಾಂಶುಪಾಲರು ಶಾಲೆಯ ಕಟ್ಟಡವನ್ನು ಮಾತ್ರ ವ್ಯವಸ್ಥಾಪ ನೆ ಮಾಡುವುದಿಲ್ಲ. ಬದಲಾಗಿ ಅವರು ಮಕ್ಕಳ ಕನಸುಗಳನ್ನು ಕಟ್ಟುತ್ತಾರೆ. ಆ ನಿಟ್ಟಿನಲ್ಲಿ ಈ ಮಹತ್ತರ ಕಾರ್‍ಯ ನೀವುಗಳು ಮಾಡಬೇಕಿದೆ ಎಂದು ತಿಳಿಸಿದರು.

ವಸತಿ ಶಾಲೆಗಳಲ್ಲಿ ಬಹುತೇಕ ಮಕ್ಕಳು ರೈತ, ಕೂಲಿ ಕಾರ್ಮಿಕ, ಬಡತನ ಹಿನ್ನೆಲೆ ಹಾಗೂ ಹೆಚ್ಚು ತಳ ಸಮುದಾಯದವರು ಆಗಿದ್ದಾರೆ. ಆ ಮಕ್ಕಳಿಗೆ ಶಾಲಾಡಳಿತ ಉತ್ತಮ ಶಿಕ್ಷಣ, ಶಿಸ್ತು, ಸಂಸ್ಕಾರ, ಆತ್ಮವಿಶ್ವಾಸ, ನಾಯಕತ್ವ ಗುಣಗಳನ್ನು ಕೊಡುವ ಜವಾಬ್ದಾರಿಯಿದೆ. ಮಕ್ಕಳನ್ನು ಮರ ಬೆಳೆಸಿದಂತೆ, ಬೇರು ಬಲವಾಗಿದ್ದರೆ ಮಾತ್ರ ಆ ಮರ ಬಲಿಷ್ಟವಾಗಿ ನಿಲ್ಲಲಿದೆ ಎಂದರು.

ಪ್ರಾಂಶುಪಾಲರು ಕೇವಲ ಆಡಳಿತಗಾರರಲ್ಲ, ಒಂದರ್ಥದಲ್ಲಿ ವಿದ್ಯಾರ್ಥಿಗಳ ಕುಟುಂಬ ನಿರ್ಮಾಣ ಹಾಗೂ ರಾಷ್ಟ್ರ ನಿರ್ಮಾಣದ ಶಿಲ್ಪಿಗಳು. ಪ್ರಾಂಶುಪಾಲರ ಹುದ್ದೆ ಕೇವಲ ಕಚೇರಿ ಕುರ್ಚಿಯಲ್ಲ. ಅದು ಒಂ ದು ಸೇವಾಸ್ಥಾನ. ತಂದೆ ದೇಹಕ್ಕೆ ಜನ್ಮಕೊಟ್ಟರೆ, ಶಿಕ್ಷಕರು ಜ್ಞಾನಕ್ಕೆ ಜನ್ಮ ಕೊಡುತ್ತಾರೆ. ಆದರೆ ಪ್ರಾಂಶುಪಾಲ ರು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪ ನೀಡುತ್ತಾರೆ ಎಂದು ಹೇಳಿದರು.

ವಸತಿ ಶಾಲೆ ಎಂದರೆ ೨೪ ಗಂಟೆಗಳ ಕಾಲವೂ ಶಿಕ್ಷಣ ನೀಡುವ ಸಂಸ್ಥೆ. ಹೀಗಾಗಿ ಇಲ್ಲಿನ ವಿದ್ಯಾರ್ಥಿ ಗಳು ಕೇವಲ ತರಗತಿ ಕೊಠಡಿಯಲ್ಲಿ ಅಷ್ಟೇ ಅಲ್ಲದೇ, ಮಾತು, ನಡೆನುಡಿ, ಪರಿಸರ ಹಾಗೂ ಹಿರಿಯರ ವ ರ್ತನೆಯಿಂದ ಕಲಿಯುತ್ತಾರೆ. ಮಕ್ಕಳು ಕೇಳುವುದಕ್ಕಿಂತ ನೋಡಿ ಕಲಿಯುವುದು ಹೆಚ್ಚು. ಹಾಗಾಗಿ ಪ್ರಾಂಶು ಪಾಲರ ನಡೆ, ಶಿಕ್ಷಕರ ವರ್ತನೆ, ಸಿಬ್ಬಂದಿಯ ಶಿಸ್ತು ಪರಿಣಾಮಕಾರಿ ಆಗಲಿದೆ ಎಂದರು.

ವಿಶೇಷವಾಗಿ ಮೊರಾರ್ಜಿ ಶಾಲೆಗಳ ಹೃದಯವೇ ಹಾಸ್ಟೆಲ್. ಇಲ್ಲಿ ವಿದ್ಯಾರ್ಥಿಗಳ ಸುರಕ್ಷತೆ, ಹಾಸ್ಟೆಲ್ ಸ್ವಚ್ಚತೆ, ಸರಿಯಾದ ಸಮುಯಕ್ಕೆ ಗುಣಮಟ್ಟದ ಆಹಾರ, ರಾತ್ರಿ ಮೇಲ್ವಿಚಾರಣೆ, ವಿದ್ಯಾರ್ಥಿಗಳ ಆರೋಗ್ಯದ ಕಾಳಜಿಯಿದೆ. ಕುಟುಂಬವನ್ನು ತೊರೆದು, ಶಾಲೆಗೆ ಆಗಮಿಸಿದ ಮಕ್ಕಳಿಗೆ ಅದುವೇ ಮನೆ. ಪ್ರಾಂಶುಪಾಲರೇ ಕುಟುಂಬ. ತಾಯಿಯ ಮಮತೆ, ತಂದೆಯ ಮಾರ್ಗದರ್ಶನ ತೋರಬೇಕು ಎಂದು ಹೇಳಿದರು.

ವಿದ್ಯಾಭ್ಯಾಸಕ್ಕಾಗಿ ಕುಟುಂಬ ತೊರೆದ ವಿದ್ಯಾರ್ಥಿಗಳ ಪೈಕಿ ಅದರಲ್ಲೂ ಬಾಲಕಿಯ ಸುರಕ್ಷತೆ. ಕಾನೂ ನಿನ ಅರಿವು, ಸಿಸಿಟಿವಿ, ರಾತ್ರಿ ಪಾಳಿಗಳು, ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಹಾಗೂ ಸಮುದಾಯ ತಜ್ಞರಿಂದ ನಿಯಮಿತ ಕೌನ್ಸಿಲಿಂಗ್ ಬಗ್ಗೆ ಗಮನಹರಿಸಬೇಕು. ಅಲ್ಲದೇ ಶಾಲಾಡಳಿತ ಪಾಲಕರೊಂದಿಗೆ ಆ ರೋಗ್ಯಕರ ಸಂವಹನ ಹೊಂದಿರಬೇಕು ಎಂದು ಸೂಚಿಸಿದರು.

ವಿದ್ಯಾರ್ಥಿಗಳಿಗೆ ಕಲಿಕೆ ಜೊತೆಗೆ ಸಂಕಷ್ಟವನ್ನು ಎದುರಿಸುವ ನಾಯಕತ್ವ ಗುಣ ಬೆಳೆಸಬೇಕು. ಡಿಜಿಟಲ್ ಆಡಳಿತದಲ್ಲಿ ಇಂದಿನ ಪ್ರಾಂಶುಪಾಲರು ಆನ್‌ಲೈನ್ ಹಾಜರಾತಿ, ಡಿಜಿಟಲ್ ವರದಿ, ಫಲಿತಾಂಶ ವಿಶ್ಲೇಷಣೆ, ಸ್ಮಾರ್ಟ್‌ಕ್ಲಾಸ್ ಬಳಕೆ ಸಂಪೂರ್ಣವಾಗಿ ತಿಳಿದಿರಬೇಕು. ಮೊರಾರ್ಜಿ ಶಾಲೆಗಳ ಗುರಿ ಕೇವಲ ಅಂಕಗಳಲ್ಲ. ಸದೃಢ ಸಮಾಜ ಹಾಗೂ ರಾಷ್ಟ್ರ ನಿರ್ಮಾಣ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದರು.

ಮಕ್ಕಳು ಮಣ್ಣಿನ ಮುದ್ದೆಯಂತೆ. ಈ ವಯಸ್ಸಿನಿಂದಲೇ ಪ್ರಾಮಾಣಿಕತೆ, ಸೇವಾಮನೋಭಾವ, ಶಿಸ್ತು, ಸಹಾನುಭೂತಿ, ರಾಷ್ಟ್ರಪ್ರೇಮ ಹಾಗೂ ಪರೀಕ್ಷಾ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡ, ಫಲಿತಾ ಂಶ, ಭಯ, ಮನೆಯ ನೆನಪು, ಸ್ಮರ್ಧಾತ್ಮಕ ಒತ್ತಡ ನಿವಾರಿಸುವ ಸಾಮರ್ಥ್ಯ ಬೆಳೆಸಬೇಕು. ಪ್ರೀತಿ, ಪ್ರೋತ್ಸಾಹ, ಆಪ್ತ ಸಮಾಲೋಚನೆ ಒದಗಿಸುವುದು ಮೂಲ ಕರ್ತವ್ಯ ಎಂದು ಹೇಳಿದರು.

ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಜಂಟಿ ನಿರ್ದೇಶಕ ಎಸ್.ಎಸ್.ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾ ಡಿ ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ೧೯೯೯ರಲ್ಲಿ ಕರ್ನಾಟಕ ಸರ್ಕಾರ ವಸತಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದೆ. ಪ್ರಸ್ತುತ ರಾಜ್ಯದಲ್ಲಿ ೮೭೪ ವಸತಿ ಶಾಲಾ-ಕಾಲೇಜುಗಳಿ ದ್ದು ಈ ಪೈಕಿ ಪ.ಜಾತಿ ೫೩೯, ಪರಿಶಿಷ್ಟ ವರ್ಗ ೧೫೬ ಹಾಗೂ ಹಿಂದುಳಿದ ವರ್ಗದ ೧೭೯ ಶಾಲೆ ಕಾರ್ಯ ನಿರ್ವಹಿಸುತ್ತಿದ್ದು ಈ ಶಾಲೆಗಳಲ್ಲಿ ಒಟ್ಟು ೨.೧೫ ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವಸ್ಪೂರ್ತಿ ಅಕಾಡೆಮಿ ಅಧ್ಯಕ್ಷ ಸಿ.ಬಿ.ಸುಂದರೇಶ್ ಮಾತನಾಡಿ ಪ್ರತಿಭೆ ಎನ್ನುವುದು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುತ್ತದೆ. ಅದನ್ನು ಹೊರಹಾಕುವ ಕಾ ರ್ಯ ಶಾಲಾಡಳಿತ ಮಾಡಬೇಕಿದೆ. ಶಿಕ್ಷಕರು ಪ್ರೋತ್ಸಾಹ ನೀಡಿದರೆ ಮಾತ್ರ ವಿದ್ಯಾರ್ಥಿಗಳ ಪ್ರತಿಭೆ ಹೊರ ಹೊಮ್ಮಲು ಸಾಧ್ಯ. ಅಲ್ಲದೇ ರಾಜ್ಯಾದ್ಯಂತ ಅನೇಕ ಜಿಲ್ಲೆಗಳಲ್ಲಿ ಅಕಾಡೆಮಿ ವತಿಯಿಂದ ಪ್ರಾಂಶುಪಾಲರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಹೆಚ್.ಬಿ.ಮ ದನ್‌ಗೌಡ, ಸೇವಕ ಸಿ.ಎಂ.ರಾಜಪ್ಪ, ಲೀಸಾ ಫೌಂಡೇಷನ್ ಸಂಸ್ಥಾಪಕಿ ಸಂಗೀತ ಪ್ರಸಾದ್, ರಾಷ್ಟ್ರಪತಿ ಪ್ರ ಶಸ್ತಿ ಪುರಸ್ಕೃತ ಯಶೋಧಮ್ಮ ಕರಿಯಪ್ಪ, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಪವನ್‌ಕುಮಾರ್, ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಶರತ್‌ಬಿಳೇಕಲ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮುರುಗೇಶ್ ಮತ್ತಿ ತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!