Wednesday, May 27, 2026
Homeಜಿಲ್ಲಾಸುದ್ದಿಹೊಸತನದ ಆಲೋಚನೆ, ಆವಿಷ್ಕಾರಗಳ ಚಿಂತನೆ ಅಗತ್ಯ : ನರೇಂದ್ರ ಪೈ

ಹೊಸತನದ ಆಲೋಚನೆ, ಆವಿಷ್ಕಾರಗಳ ಚಿಂತನೆ ಅಗತ್ಯ : ನರೇಂದ್ರ ಪೈ

ಚಿಕ್ಕಮಗಳೂರು:ವಿದ್ಯಾರ್ಥಿದೆಸೆಯಲ್ಲಿ ಶಿಸ್ತು, ವಿನಯ, ಶ್ರದ್ದೆ ಹಾಗೂ ಸೇವಾಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಹೊಸತನದ ಆಲೋಚನೆ ಮತ್ತು ಆವಿಷ್ಕಾರಗಳತ್ತ ಚಿಂತನೆ ನಡೆಸಿದರೆ, ಭವಿಷ್ಯದ ಲ್ಲಿ ಉನ್ನತ ಸ್ಥಾನ ಗಳಿಸಬಹುದು ಎಂದು ಜಿಲ್ಲಾ ಅನುದಾನ ರಹಿತ ಶಿಕ್ಷಣ ಸಂಸ್ಥೆ ಅಧ್ಯಕ್ಷ ನರೇಂದ್ರ ಪೈ ಹೇಳಿದರು.

ನಗರದ ಟಿಎಂಎಸ್ ಕಾಲೇಜಿನಲ್ಲಿ ಲಕ್ಷ್ಯ ಅಕಾಡೆಮಿ ಮತ್ತು ಟೌನ್ ಮಹಿಳಾ ಸಮಾಜ ಶಾಲೆ ವತಿ ಯಿಂದ ಸೋಮವಾರ ಆಯೋಜಿಸಿದ್ಧ ದಿಕ್ಸೂಚಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಓದುವ ಹಂತದಲ್ಲಿ ವಿದ್ಯಾರ್ಥಿಗಳು ಛಲ, ಹಠ ಹೊಂದಿರಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರಯುತ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಪಾಲಕರು ಮತ್ತು ಬೋಧಕ ವೃಂದ ಮಕ್ಕಳಿಗೆ ಸಮಗ್ರವಾಗಿ ಮಾಹಿತಿ ತಿಳಿಸಬೇಕು ಎಂದು ಸಲಹೆ ಮಾಡಿದರು.

ಪ್ರತಿ ಮಕ್ಕಳಲ್ಲಿ ಬುದ್ದಿವಂತಿಕೆ, ಪ್ರತಿಭೆ ಗೊತ್ತಿಲ್ಲದೇ ಅಡಗಿರುತ್ತದೆ. ಜ್ಞಾನ ಸಂಪಾದನೆಗೆ ಜೊತೆಗೆ ಪ್ರತಿಭೆ ಗೆ ಒತ್ತು ನೀಡಬೇಕು. ಸಮಾಜದಲ್ಲಿ ಜೀವಿಸಲು ಮನುಷ್ಯತ್ವ, ಆಚಾರ-ವಿಚಾರ, ಬೌಗೋಳಿಕ ಸಂಗತಿಗಳನ್ನು ಅರಿತುಕೊಳ್ಳಬೇಕು. ದೇಶದ ಉತ್ತಮ ನಾಗರೀಕರಾಗಲು ಪರಿಶ್ರಮದ ಅಗತ್ಯವಿದ್ದು ಸದ್ವಿಚಾರದಡಿ ಎಲ್ಲರೂ ಮುಂದೆ ಸಾಗಬೇಕಿದೆ ಎಂದರು.

ನಾಡಿನ ಸಂಸ್ಕೃತಿ, ಭಾಷಾ ಸೊಗಡು ನಮ್ಮತನವನ್ನು ಉಳಿಸುವ ಜೊತೆಗೆ ಸುಸಂಸ್ಕೃತರಾಗಲು ಸಹಕಾ ರಿ. ಸರಸ್ವತಿ ನೆಲೆಸಿರುವ ಶಾಲೆಗಳಲ್ಲಿ ಮನಸ್ಸು ಶುದ್ಧವಾಗಿರಬೇಕು. ಸಮವಸ್ತ್ರದ ಸಮಗ್ರ ಬಳಕೆ ಹೊಂದಿರಬೇ ಕು. ಇಂದಿನ ಉದ್ಯಮದ ಜಗತ್ತಿನಲ್ಲಿ ಪ್ರತಿಯೊಬ್ಬರು ಸೇವಾಗುಣ ಬೆಳೆಸಿಕೊಂಡಲ್ಲಿ ಮಕ್ಕಳನ್ನು ಸತ್ರ್ಪಜೆಗಳಾಗಿ ಸಲು ಸಾಧ್ಯವಾಗಲಿದೆ ಎಂದು ಸಲಹೆ ಮಾಡಿದರು.

ಟಿ.ಎಂ.ಎಸ್. ಶಾಲೆ ಅಧ್ಯಕ್ಷೆ ನೇತ್ರ ವೆಂಕಟೇಶ್ ಮಾತನಾಡಿ ಶತಮಾನೋತ್ಸವ ಪೂರೈಸಿರುವ ಶಾಲೆಗೆ ಯುವ ವಿದ್ಯಾರ್ಥಿಗಳು ದಾಖಲಾಗುವುದು ಸುಲಭದ ಮಾತಲ್ಲ. ಈ ಶಾಲೆ ಸಾಮಾಜಿಕ, ಶೈಕ್ಷಣಿಕವಾಗಿ ಸಮ ಗ್ರ ಬೋಧನೆ ಮಾಡುತ್ತಿದೆ. ಮಧ್ಯಮ ವರ್ಗದ ಕುಟುಂಬಗಳಿಗೆ ಆಸರೆಯಾಗಿ ನಿಂತಿರುವ ಟಿಎಂಎಸ್ ಮಕ್ಕ ಳನ್ನು ಕನಸನ್ನು ನನಸಾಗಿಸುವತ್ತ ಕಾರ್ಯನಿರ್ವಹಿಸುತ್ತಿದೆ ಎಂದರು.

ಜಿಲ್ಲಾ ಅನುದಾನ ರಹಿತ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನಂದಕುಮಾರ್ ಮಾತನಾಡಿ ಸದ್ಗುಣ, ಎಲ್ಲರ ನ್ನೂ ಪರಸ್ಪರ ಪ್ರೀತಿಸುವ ಹಾಗೂ ಸ್ನೇಹತ್ವ ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜೊತೆಯಾಗಬೇಕು. ಶಿಕ್ಷಕ ರು ಮತ್ತು ಪಾಲಕರ ಮಾತಿಗೆ ಎದುರಾಡದೇ, ಮಾತನ್ನು ಆಲಿಸಿದರೆ ಭವಿಷ್ಯದಲ್ಲಿ ಜಿಲ್ಲೆ ಹಾಗೂ ನಾಡು ಮೆ ಚ್ಚುವಂಥ ಮನುಷ್ಯರಾಗಬಹುದು ಎಂದರು.

ಇದೇ ವೇಳೆ ಲಕ್ಷ್ಯ ಅಕಾಡೆಮಿ ಸದಸ್ಯ ಭರತ್ ಮಕ್ಕಳಿಗೆ ದಿಕ್ಸೂಚಿ ಕಾರ್ಯಕ್ರಮದ ಸಮಗ್ರ ಮಾಹಿತಿ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಲಕ್ಷ್ಯ ಅಕಾಡೆಮಿ ಆಡಳಿತಾಧಿಕಾರಿ ಲಿಖಿತ್, ಟಿಎಂಎಸ್ ಮಾಜಿ ಅಧ್ಯ ಕ್ಷೆ ಸವಿತಾ, ಪ್ರಾಂಶುಪಾಲ ವಿನಯ್ ಸುವರ್ಣ, ಲಕ್ಷ್ಯ ಅಕಾಡೆಮಿ ಸದಸ್ಯರಾದ ವಿನಯ್ ರಾಜ್, ಅವಿನಾಶ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!