Wednesday, May 27, 2026
Homeಕ್ರೈಮ್ಬೈಕ್ ನಲ್ಲಿ ತೆರಳುವಾಗ ಅಪಘಾತ: ಗಾಯಾಳು ರವಿಗೆ 21 ಸಾವಿರ ನಗದು ಸಹಾಯ

ಬೈಕ್ ನಲ್ಲಿ ತೆರಳುವಾಗ ಅಪಘಾತ: ಗಾಯಾಳು ರವಿಗೆ 21 ಸಾವಿರ ನಗದು ಸಹಾಯ

ಆಲ್ದೂರು: ಇತ್ತೀಚೆಗೆ ಅರೇನೂರು ಗ್ರಾಮದ ಬಳಿ ಬೈಕ್ ನಲ್ಲಿ ತೆರಳುವಾಗ ಅಪಘಾತಕ್ಕೀಡಾಗಿದ್ದ ಗಾಳಿ ಗಂಡಿ ವಾರ್ಡಿನ ನಿವಾಸಿ ರವಿ ಪ್ರಸ್ತುತ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜನರಿಂದ ಸಂಗ್ರಹಿಸಿದ ದೇಣಿಗೆ ಹಣವನ್ನು ಭಾನುವಾರ ಕುಟುಂಬಸ್ಥರ ಬಳಿ ನೀಡಲಾಯಿತು.

ಆಲ್ದೂರು ಪತ್ರಕರ್ತರಾದ ಜೋಸೆಫ್ ಮಾತನಾಡಿ, ಅಪಘಾತ ಆರಂಭದಲ್ಲಿ ಅರೇನೂರು ಸುಪ್ರೀತ್ ಗಾಯಾಳು ರವಿಯನ್ನು ಚಿಕಿತ್ಸೆಗೆ ದಾಖಲಿಸಿದ್ದರು ಬಳಿಕ ಚಿಕ್ಕಮಗಳೂರು ಮಂಗಳೂರಿನ ಆಸ್ಪತ್ರೆಗಳಲ್ಲಿ

ಚಿಕಿತ್ಸೆ ದೊರೆಯದೆ ಮರಳಿ ಆಲ್ದೂರಿಗೆ ರೋಗಿಯನ್ನು ಕರೆತಂದಾಗ, ಪತ್ರಕರ್ತರಾದ ಕಿರಣ್, ಮತ್ತು ಜೋಸೆಫ್ ಎಂ ಸ್ಪಂದಿಸಿದ್ದು, ಸ್ಥಳೀಯರಾದ ಎಯು ಇಬ್ರಾಹಿಂ ಒಟ್ಟು ಸೇರಿ ಸಾರ್ವಜನಿಕರಿಂದ ೬೮೦೦ ರೂಪಾಯಿ ಹಣವನ್ನು ಮೊದಲ ಹಂತದಲ್ಲಿ ರೋಗಿಗೆ ಚಿಕಿತ್ಸೆಗೆ ಸಂಗ್ರಹಿಸಿ ನೀಡಿದ್ದು, ಬೆಂಗಳೂರಿನ ನಿಮಾನ್ಸ್ ನಲ್ಲಿ ಚಿಕಿತ್ಸೆ ದೊರೆಯಲು ಖಾಂಡ್ಯ ವಿನೋದ್ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ವಿಧಾನಪರಿಷತ್ ಉಪ ಸಭಾಪತಿ ಎಂ ಕೆ ಪ್ರಾಣೇಶ್, ಆಸ್ಪತ್ರೆಗೆ ದಾಖಲಿಸಲು ಸಹಕಾರ ಪಡೆದಿದ್ದು, ಕ್ಷೇತ್ರದ ಶಾಸಕಿ ನಯನ ಮೋಟಮ್ಮ ವೈಯಕ್ತಿಕವಾಗಿ ೧೦ ಸಾವಿರ ಸಹಾಯಧನ ಒದಗಿಸಿದ್ದರು.

ಶಸ್ತ್ರಚಿಕಿತ್ಸೆ ಬಳಿಕ ಯುವಕನನ್ನು ಶ್ರೀ ಕೃಷ್ಣ ಅಂಬುಲೆನ್ಸ್ ಮೂಲಕ ೭೦೦ ಕಿಲೋಮೀಟರ್ ಅಧಿಕವಾಗಿ ಚಿಕಿತ್ಸೆಗೆ ಕರೆದು ಇದ್ದಿದ್ದು, ಆಂಬುಲೆನ್ಸ್ ಮಾಲೀಕ ಪುನೀತ್, ಇಂಧನ ಖರ್ಚನ್ನು ಮಾತ್ರ ನೀಡಿದರೆ ಸಾಕೆಂದು ತಿಳಿಸಿದ್ದರು. ಬಳಿಕ ಬೆಂಗಳೂರಿನಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಿಯನ್ನು ಸಾಗಿಸಿದ್ದು ಪ್ರಸ್ತುತ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರಿಗೆ ಇನ್ನಷ್ಟು ಹಣದ ಅವಶ್ಯಕತೆ ಇದ್ದು, ಜೋಸೆಫ್ ಹಾಗೂ ಸುಪ್ರೀತ್, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದ್ದು, ಒಟ್ಟು ೨೧೫೦೫ ರೂಪಾಯಿ ಹಣವನ್ನು ಭಾನುವಾರ ಜಿಲ್ಲಾ ಆಸ್ಪತ್ರೆಗೆ ತೆರಳಿ ರೋಗಿಯ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಗಾಯಾಳು ರವಿ ತನಗೆ ನೆರವು ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಚಿಕಿತ್ಸೆಗಾಗಿ ನೆರವನ್ನು ಸಂಗ್ರಹಿಸಿದ ಪತ್ರಕರ್ತ ಜೋಸೆಫ್ ಮತ್ತು ಸುಪ್ರೀತ್ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಶ್ರೀ ಕೃಷ್ಣ ಆಂಬುಲೆನ್ಸ್ ಸಂಸ್ಥೆಯ ಮಾಲೀಕ ಪುನೀತ್,ಖಾಂಡ್ಯ ವಿನೋದ್, ಆಂಬುಲೆನ್ಸ್ ಚಾಲಕ ಪೃಥ್ವಿ, ಅರೇನೂರು ಸುಪ್ರೀತ್, ಗಾಯಾಳು ರವಿಯ ಪೋಷಕರು, ಸಹೋದರ ಕೀರ್ತಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!