Wednesday, July 15, 2026
Homeಜಿಲ್ಲಾಸುದ್ದಿಅಪಾಯಕಾರಿ ಜಿರೋ ಮಚ್ಚೆಗೆ ಚಿಕಿತ್ಸೆ ನೀಡಿ ಸಾವಿನ ದವಡೆಯಿಂದ ಮಕ್ಕಳನ್ನು ಪಾರು ಮಾಡುತ್ತಿರುವ ನಾಟಿ ವೈದ್ಯ...

ಅಪಾಯಕಾರಿ ಜಿರೋ ಮಚ್ಚೆಗೆ ಚಿಕಿತ್ಸೆ ನೀಡಿ ಸಾವಿನ ದವಡೆಯಿಂದ ಮಕ್ಕಳನ್ನು ಪಾರು ಮಾಡುತ್ತಿರುವ ನಾಟಿ ವೈದ್ಯ ವಿಶ್ವಾಮಿತ್ರ

Telegram Group
Join Now

ಮೂಡಿಗೆರೆ : ತಾಲ್ಲೂಕಿನ ಜನ್ನಾಪುರದ ಹೊಯ್ಸಳಲು ರಸ್ತೆಯ ಎಡಬಾಗದ ರಸ್ತೆಯಲ್ಲಿರುವ ಕಣಚೂರು ಮನೆಯಲ್ಲಿ ವಾಸಿಸುತ್ತಿರುವ ನಾಟಿವೈಧ್ಯ ವಿಶ್ವಾಮಿತ್ರ ಇತ್ತೀಚೆಗೆ ಮಕ್ಕಳ ಬೆನ್ನಲ್ಲಿ ಕಾಣಿಸಿಕೊಳ್ಳುತ್ತಿರುವ ೦ . ಮಚ್ಚೆಗೆ ಚಿಕಿತ್ಸೆ ನೀಡಿ ಮಕ್ಕಳನ್ನು ಸಾವಿನ ದವಡೆಯಿಂದ ಪಾರು ಮಾಡುತ್ತಿರುವ ಘಟನೆ ವರದಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಕೆಲವು ಮಕ್ಕಳು ಪಟ್ಟು ಹಿಡಿಯುತ್ತಾರೆ ಮತ್ತು ಪೋಷಕರು ಏನನ್ನಾದರೂ ಹೇಳಿದರೆ ತಕ್ಷಣವೇ ಅನಾಹೂತ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ.

ಆದರೆ ಅದನ್ನು ಸರಿಯಾಗಿ ಪರಿಶೀಲಿಸಿದಾಗ ಮಕ್ಕಳ ಬೆನ್ನಲ್ಲೇ ಮೂಡುತ್ತಿರುವ ೦.(ಜಿರೋ ಬಿಂದು)ಲಕ್ಷಣ ಅದು ಬೇರಿನ ಸಹಕಾರದಿಂದ ಒಂದು ನಿಮಿಷದಲ್ಲಿ ಸರಿಪಡಿಸಬಹುದಾಗಿದೆ ಎಂದು ಜಿರೋ ಬಿಂದುವಿನ ಬಗ್ಗೆ ಮಾಹಿತಿ ನೀಡಿದ್ದಾರೆ

ಇತ್ತೀಚೆಗೆ ದುಬೈ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮಗನ ಜಿರೋ ಬಿಂದು ಮಚ್ಚೆಯ ಪ್ರಭಾವ ಅನಾರೋಗ್ಯಕ್ಕೆ ತುತ್ತಾಗಿ ಕೆಲಸ ಬಿಟ್ಟು ವಾಪಸ್ಸು ಬಂದಿದ್ದು ಈಗ ಮಗನಿಗೆ ಚಿಕಿತ್ಸೆ ಮಾಡಿದ ನಂತರ ಅವರ ಕಾಯಿಲೆಗಳು ವಾಸಿಯಾಗಿದ್ದು ಅವರಲ್ಲಿ ಆತ್ಮಸ್ಥೈರ್ಯ ಬಂದಿದೆ ಎಂದರು

ವಿಶ್ವಾಮಿತ್ರ ಪಾರಂಪರಿಕಾ ನಾಟಿ ವೃತ್ತಿಯನ್ನು ಅವಲಂಬಿಸಿಕೊಂಡು ಬಂದವರು. ಕೃಷಿಕರು ಆಗಿರುವ ವಿಶ್ವಾಮಿತ್ರ ಅವರು ತಂದೆಯಿಂದ ಬಳುವಳಿಯಾಗಿ ಬಂದ ನಾಟಿ ವಿದ್ಯೆ ಯನ್ನು ಸಾರ್ವಜನಿಕರಿಗೆ ಉಪಯೋಗವಾಗಲೆಂದು ಹಣ ಕಾಸಿಗೆ ಮಾಡದೆ ಗಿಡ ಮೂಲಿಕೆಯನ್ನು ನೀಡಿ ಔಷಧಿ ನೀಡಿತ್ತಿದ್ದಾರೆ.

ಔಷಧಿಯನ್ನು ಉಚಿತವಾಗಿ ನೀಡಿದರೆ ಅದಕ್ಕೆ ಅರ್ಥವಿಲ್ಲವೆಂದು ಔಷಧಿ ತೆಗೆದುಕೊಳ್ಳುವವರು ಬಂದಾಗ ಮೊದಲು ಔಷಧಿ ನೀಡಿ ಒಂದು ವಾರ ಅಥವಾ ಹದಿನೈದು ದಿನ ಬಿಟ್ಟು ಬರಲು ತಿಳಿಸುತ್ತಾರೆ.

ನಂತರ ಬಂದ ವ್ಯಕ್ತಿಗೆ ಕಾಯಿಲೆ ಬಗ್ಗೆ ಕೇಳುತ್ತಾರೆ ವಾಸಿ ಆಯಿತು ಅಂದರೆ ನಿಮ್ಮ ಕೈಯಲ್ಲಿ ಎಷ್ಟು ಆಗುತ್ತೋ ಕೈಯಲ್ಲಿ ಹಣವಿದ್ದರೆ ಅದನ್ನು ದೇವರ ಮನೆಯಲ್ಲಿರುವ. ಹುಂಡಿಗೆ ಹಾಕಿ ದೇವರಿಗೆ ಕೈ ಮುಗಿದು ಹೋಗಿ ಎನ್ನುತ್ತಾರೆ. ನೀವು ೫ ರೂ ಹಾಕಿದರೂ ಅಭ್ಯಂತರ ವಿಲ್ಲಾ ಎಂದರು

ಆದರೆ ಕೊಬ್ಬರಿ ಎಣ್ಣೆ ತೈಲಕ್ಕೆ ಮಾತ್ರ ಕೊಬ್ಬರಿ ಎಣ್ಣೆ ಬೆಲೆಯನ್ನು ಪಡೆಯುತ್ತೇನೆ. ಇಲ್ಲಾ ಅದರ ಬದಲಿಗೆ ಕೊಬ್ಬರಿ ಎಣ್ಣೆ ತಂದು ಕೊಟ್ಟರೆ ತೆಗೆದುಕೊಳ್ಳುತ್ತೇನೆ ಎನ್ನುವ ವಿಶ್ವಾ ಮಿತ್ರ ಅವರು ಏಕೆಂದರೆ ತೈಲಕ್ಕೆ ಕೊಬ್ಬರಿ ಎಣ್ಣೆಯನ್ನು ಗಾಣಾ ಅಥವಾ ಅಂಗಡಿಯಿಂದ ತಂದು ಮಾಡುತ್ತಿದ್ದು ಅದರಿಂದ ಕೊಬ್ಬರಿ ಎಣ್ಣೆಯ ಹಣ ಪಡೆಯುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.

ದೇವರ ಹುಂಡಿಯ ಹಣವನ್ನು ದೇವಾಲಯಗಳಿಗೆ ತಲುಪಿಸಲಾಗುತ್ತದೆ ಎಂದು ತಿಳಿಸಿದ ಅವರು. ಸರಿ ಸುಮಾರು ಹಲವು ಕಾಯಿಲೆ ನಾಟಿ ಔಷಧಿಯ ಮೂಲಕ ಗುಣ ಪಡಿಸುವುದಾಗಿ ತಿಳಿಸಿದರು.

ಇತ್ತೀಚೆಗೆ ಕೆಲವು ಮಕ್ಕಳು ಮನೆಯಲ್ಲಿ ಯಾರ ಮಾತು ಕೇಳದೆ ವಿಚಿತ್ರವಾಗಿ ಆಡುವುದರ ಮೂಲಕ ಸಾವಿನ ಕದ ತಟ್ಟುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಕಾರಣ ಮಗುವಿನ ಬೆನ್ನಿನ ಮೇಲೆ ಇರುಬ ೦. (ಜೀರೋ ಬಿಂದು) ಅದು ಮಗು ಹುಟ್ಟಿದಾಗ ಕೆಲವು ಮಕ್ಕಳ ಬೆನ್ನಲ್ಲಿ ಮಚ್ಚೆ ಮಕ್ಕಳು ಬೆಳೆಯುತ್ತಿದ್ದ ಹಾಗೆ ಮೈಲಿರುವ ಮಚ್ಚೆ ಅದು ಅವರ ಆಯುಷ್ಯವನ್ನು ಕ್ಷಿಣಿಸುವುದರೊಂದಿಗೆ ವಿಚಿತ್ರವಾಗಿ ಆಡುತ್ತಿದ್ದಾರೆ ಅಷ್ಟೇ ಅಲ್ಲದೆ ಅವರನ್ನು ಹೆತ್ತ ತಂದೆ-ತಾಯಿಗಳು ಆರ್ಥಿಕ ಮತ್ತು ಮಾನಸಿಕ ಸಂಕಷ್ಟಕ್ಕೆ ಮತ್ತು ವಿವಿದ ರೀತಿಯ ಕಾಯಿಲೆಗಳಿಗೆ ಸಿಲುಕುತ್ತಿದ್ದಾರೆ ನನ್ನ ಬಳಿ ಚಿಕಿತ್ಸೆಗೆ ಬಂದವರ ಹತ್ತಿರ ಕಾಯಿಲೆಯನ್ನು ಕೇಳಿ ಪರಿಶೀಲಿಸಿದಾಗ ಕೆಲವು ಮಕ್ಕಳ ಬೆನ್ನಲ್ಲಿ ಜಿರೋ ಬಿಂದು ಕಾಣಿಸಿಕೊಳ್ತಿದ್ದು ಅದಕ್ಕೆ ಒಂದು ನಿಮಿಷದ ಚಿಕಿತ್ಸೆ ನೀಡಿದ ನಂತರ ಒಂದು ವಾರದಲ್ಲಿ ಅವರ ಕುಟುಂಬದಲ್ಲಿ ಕಾಯಿಲೆಗಳು ಮಾಯವಾಗಿ ಸಂತೋಷದಿಂದ ಇರುವುದು ಕಂಡು ಬರುತ್ತಿದೆ

ಸಕಲೇಶಪುರದ ದೇವಲಕೆರೆಲ್ಲಿ ಒಬ್ಬರು ನಾಟಿ ವೈಧ್ಯ ವಿಶ್ವಾಮಿತ್ರ ಅವರ ಅಡ್ರೆಸ್ ಕೊಟ್ಟು ಜನ್ನಾಪುರಕ್ಕೆ ಕಳಿಸಿದರು ಅವರನ್ನು ಭೇಟಿ ಮಾಡಿ ಅವರ ಬಳಿ ಕಾಯಿಲೆಗೆ ಔಷಧಿ ಕೊಡುವಂತೆ ಕೇಳಿದಾಗ ಅವರು ನನ್ನ ಬಳಿ ಕಾಯಿಲೆಯನ್ನು ವಿಚಾರಿಸಿ ನಂತರ ಅವರ ಮಗುವಿನ ಬೆನ್ನನ್ನು ಪರಿಶೀಲಿಸಿದಾಗ ಜೀರೋ ಬಿಂದು ಪತ್ತೆಯಾಗಿದ್ದು. ಅದನ್ನು ಬೇರಿನ ಸಹಾಯದಿಂದ ಎರಡು ಸಕೆಂಡ್ ನಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳಿಸಿದ್ದು ಚಿಕಿತ್ಸೆ ಪಡೆದ ಮಗುವಿನ ಅಪ್ಪ ಅಮ್ಮ ಒಂದು ವಾರದೊಳಗೆ ನಮ್ಮನೆಗೆ ಬಂದು ಕುಟುಂಬದ ಆತಂಕ ದೂರವಾಗಿದ್ದು ನಮ್ಮ ಮಾತು ಕೇಳದ ಮಗ ಮಾತು ಕೇಳುತ್ತಿದ್ದಾನೆ ಮನೆಯಲ್ಲಿ ಸಂತೋಷ ಉಕ್ಕಿ ಹರಿಯುತ್ತಿದೆ. ನಾಟಿ ವೈಧ್ಯರಲ್ಲಿ ಚಿಕಿತ್ಸೆ ಪಡೆದಿರುವ ಹುಡುಗನ ತಂದೆ ಪ್ರಸನ್ನ ಎಂಬುವರು ತಿಳಿಸಿದ್ದಾರೆ

ನಾಟಿವೈಧ್ಯ ವಿಶ್ವಮಿತ್ರಾ ಅವರನ್ನು ದೂರವಾಣಿ ಮೂಲಕ ಸಹ ಸಂಪರ್ಕಿಸಬಹುದಾಗಿದ್ದು ಅವರ ಮೊಬೈಲ್ ಸಂಖ್ಯೆ-94802 51164

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments