ಸಕಲೇಶಪುರ ನಗರ ಠಾಣಾ ವ್ಯಾಪ್ತಿಯ ಚಿಕ್ಕಸತ್ತಿಗಾಲ್ ಗ್ರಾಮದಲ್ಲಿ ಕಳೆದ 8 – 10 ದಿನದಿಂದ ಬಕ್ರೀದ್ ಕುರ್ಬಾನಿ ಬಲಿ ನೀಡಲು ಸತ್ತಿಗಾಲ್ ಗ್ರಾಮದ ಆಸುಪಾಸಿನಲ್ಲಿ ಓಡಾಡಿಕೊಂಡಿದ್ದ ಗ್ರಾಮದ ಹೋರಿ ಗೋವನ್ನು ಕದ್ದು ಮುಸ್ಲಿಂ ವ್ಯಕ್ತಿಗೆ ಸಂಬಂಧಿಸಿದ ಕಾಫಿ ತೋಟದ ಒಳಗೆ ಕೈ ಕಾಲು ಸಹಿತ ಸುತ್ತ ತಿರುಗದಂತೆ ಮೇವು ನೀರು ನೀಡದೆ ಸಣ್ಣ ಹಗ್ಗದಲ್ಲಿ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ.
ಚಿಕ್ಕಸತ್ತಿಗಾಲ್ ಗ್ರಾಮದ ತೊಟ್ಟಿ ಮನೆ ಹೋಂ ಸ್ಟೇ / ರೆಸಾರ್ಟ್ ಹೊಂದಿ ಕೊಂಡಂತೆ ಇರುವ ಕಾಫಿ ತೋಟದ ಮಾಲೀಕರಾದ ಸಯೀದ್ ಮತ್ತು ಅಯಾಜ್ ತೋಟದಲ್ಲಿ ಗೋವುಗಳನ್ನು ಕಟ್ಟಿರೋದು ಹಲವು ಅನುಮಾನ ಹುಟ್ಟಿಸುತ್ತದೆ.

ಇದೆ ತೋಟದಲ್ಲಿ 4 ಚಿಕ್ಕ ಹೋರಿಗಳ ಜೊತೆ ದೊಡ್ಡ ನಂದಿ ಹೋರಿಯನ್ನ ಕಟ್ಟಿ ಹಾಕಿರುವ ಖಚಿತ ಮಾಹಿತಿ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರಿಗೆ ಸಿಕ್ಕ ಹಿನ್ನಲೆಯಲ್ಲಿ ದಿನಾಂಕ 27/05/2026 ರಂದು ಮತ್ತೆ ಖಚಿತ ಪಡಿಸಿಕೊಳ್ಳಲು ತೊಟ್ಟಿಲು ಮನೆ ಹೋಂಸ್ಟೇ ಬಳಿ ಕಟ್ಟಿ ಹಾಕಿದ್ದ ಹೋರಿಯನ್ನು ನೋಡಿ ಭಾವಚಿತ್ರದೊಂದಿಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಹಾಗೂ ಸಕಲೇಶಪುರ ಪೋಲಿಸ್ ಉಪವಿಭಾಗದ ಉಪ ಅಧೀಕ್ಷಕರು ಡಿವೈಎಸ್ಪಿ. ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ಮಾಹಿತಿ ನೀಡಿದ ತಕ್ಷಣ ಕಾರ್ಯಪರ್ವತರಾದ ಪೊಲೀಸರು ಸಿಬ್ಬಂದಿಗಳೊಂದಿಗೆ ಅಕ್ರಮವಾಗಿ ಹೋರಿಯನ್ನು ಕಟ್ಟಿ ಹಾಕಿದ್ದ ಜಾಗಕ್ಕೆ ಹೋಗುವ ಸಮಯದಲ್ಲಿ ದೊಡ್ಡ ಹೋರಿಯನ್ನು ಹಿಡಿಯಲು ಆಗದೆ ಉಳಿದ 4 ಹೋರಿಗಳನ್ನ ತೆಗೆದುಕೊಂಡು ಹೋಗಿದ್ದು ಬೃಹತ್ ಗಾತ್ರದ ದೊಡ್ಡ ಹೋರಿಯನ್ನು ರಕ್ಷಣೆ ಮಾಡಲು ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಹರಸಾಹಸಪಟ್ಟರು.

ನೀರು ಮೇವು ಇಲ್ಲದೆ ಅದಾಗಲೇ 2 ಬಾರಿ ಪ್ರಜ್ಞಾಹೀನ ಸ್ಥಿತಿಗೆ ಹೋಗುತ್ತಿದ್ದ ಹೋರಿಯನ್ನು ತೋಟದಿಂದ ರಸ್ತೆಗೆ ತರುವುದು ಸವಾಲಾಗಿತ್ತು ಆದರೆ ಅಲ್ಲಿ 50 ಮೀಟರ್ ಅಂತರದಲ್ಲಿ ಕಾಂಗ್ರೆಸ್ ಮುಖಂಡ ಸೈಯದ್ ಮುಪಿಜ್’ಗೆ ಸಂಬಂಧ ಪಟ್ಟ ತೊಟ್ಟಿ ಮನೆ ಹೋಂ ಸ್ಟೇ ರೆಸಾರ್ಟ್ ದಾರಿ ರಸ್ತೆ ಇದ್ದು ಅವರ ಸಹಪಾಠಿಗಳು ನಮ್ಮ ಹೋಂ ಸ್ಟೇ ಕಡೆ ಬರದಂತೆ ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಪೋಲಿಸ್ ರೊಂದಿಗೆ ವಾಗ್ವಾದ ನಡೆಸಿದರು.

ಅಂತಿಮವಾಗಿ ಗ್ರಾಮದ ಕೆಲ ಯುವಕರು ಬೃಹತ್ ಹೋರಿಯ ಪರಿಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಿದರು ಮೇವು ನೀರು ಇಲ್ಲದೆ ಸಂಪೂರ್ಣ ಬಲಹೀನವಾಗಿದ್ದ ಕುಸಿದು ಬೀಳುತಿದ್ದ ದೊಡ್ಡ ಹೋರಿಯನ್ನು 2 ಕಿ.ಮೀ ಅಂತರ ಕ್ರಮಿಸಿ ತೋಟದಿಂದ ರಸ್ತೆಗೆ ತಂದು ಪಿಕ್ಆಪ್ ವಾಹನದಲ್ಲಿ ತೆಗೆದುಕೊಂಡು ತುರ್ತುಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಅದಾಗಲೇ ತಡವಾಗಿದ್ದ ಕಾರಣ ಬೃಹತ್ ಹೋರಿ ಅಸುನೀಗಿದ್ದು ಎಂದು ಹಿಂದೂ ವೇದಿಕೆ ಸಂಚಾಲಕ ಶಿವು ಜಿಪ್ಪಿ ಬೇಸರ ವ್ಯಕ್ತಪಡಿಸಿ ಆರೋಪಿಸಿದ್ದಾರೆ.
ಪೊಲೀಸ್ ಸಿಬ್ಬಂದ್ದಿಗಳು ಕಾನೂನು ಪಾಲಿಸಲು ಮತ್ತು ಚಿಕಿತ್ಸೆ ಕೊಡಿಸಲು ವಿಫಲರಾಗಿದ್ದು. ಸಮೀಪ ಇದ್ದ ದಾರಿ ರಸ್ತೆ ಹೋಂ ಸ್ಟೇ ರೇಸಾರ್ಟ್ ಮಾಲೀಕರಿಗೆ ಹೇಳಿ ರಕ್ಷಣಾ ಕಾರ್ಯಾಚರಣೆಗೆ ತಕ್ಷಣ ವಾಹನ ಬರಲು ವ್ಯವಸ್ಥೆ ಮಾಡಲು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಪೊಲೀಸ್ ಇಲಾಖೆ ವಿಫಲವಾಗಿದ್ದರಿಂದ ವಿರುದ್ಧ ಅಲ್ಲಿದ್ದ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಸಮಯ 8:27 ಹೊತ್ತಿಗೆ ಪಶು ವೈದ್ಯಕೀಯ ಸಿಬ್ಬಂದಿಗಳು ಹೋರಿ ಅಸುನೀಗಿರುವ ಬಗ್ಗೆ ಖಚಿತ ಪಡಿಸಿದರು ಅಂತಿಮವಾಗಿ ಸಕಲೇಶಪುರ ನಗರದ ಸುಭಾಸ್ ಮೈದಾನದಲ್ಲಿ ಹಿಂದೂ ಸಂಪ್ರದಾಯದಂತೆ ಪೋಲಿಸರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ
