Friday, July 17, 2026
Homeಕ್ರೈಮ್ಕೊಪ್ಪ: ಕಾರು- ಬೈಕ್‌ ನಡುವೆ ಡಿಕ್ಕಿ:ಯುವಕನ ಸ್ಥಿತಿ ಗಂಭೀರ!

ಕೊಪ್ಪ: ಕಾರು- ಬೈಕ್‌ ನಡುವೆ ಡಿಕ್ಕಿ:ಯುವಕನ ಸ್ಥಿತಿ ಗಂಭೀರ!

Telegram Group
Join Now

ಕೊಪ್ಪ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಪ್ಪ ತಾಲೂಕಿನ ಸಿಗದಾಳ್ ಘಾಟಿಯ ಚೌಕಿ ಬಸ್ ನಿಲ್ದಾಣದ ಸಮೀಪ ನಡೆದಿದೆ. ನಿಲುವಾಗಿಲು ಗ್ರಾಮದ ಮೇಲ್ಮಟ್ಟ ನಿವಾಸಿ ರಾಜೇಂದ್ರ ಅವರ ಮಗ ಸೂರಜ್ ಆರ್. ನಾಯಕ್ (26) ಅಪಘಾತದಲ್ಲಿ ಗಾಯಗೊಂಡ ಯುವಕ.

ಹರಿಹರಪುರ ಕಡೆಯಿಂದ ಬಂದ ಮಾರುತಿ 800 ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಸೂರಜ್ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ಅವರ ಬಲಗಾಲಿನ ತೊಡೆ ಹಾಗೂ ಮೊಣಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ.

ಗಾಯಾಳುವನ್ನು ತಕ್ಷಣ ಪೋಷಕರು ಹಾಗೂ ಸಾರ್ವಜನಿಕರ ಸಹಾಯದಿಂದ ಕೊಪ್ಪದ ಹರ್ಷಲಕ್ಷ್ಮಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ದಾಖಲಿಸಲಾಗಿದೆ.

ತಂದೆಯ ದೂರಿನನ್ವಯ ಹರಿಹರಪುರ ಪೊಲೀಸ್‌ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments